ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಏನೆ ಯಶೋದೆ ಇದು ಏನೆ ಯಶೋದೆ ದಧಿಯ ದಾಮೋದರ ಹೆದರಿಕಿಲ್ಲದೆ ಕುಡಿದೋಡಿ ತಾ ಪೋದ ಪ ಕೊಳಲನೂದುತಲೆ ಆಕಳನೆ ಕಾಯುತಲ್ಹೋಗಿ ಕಳಲ ಗಡಿಗೆಸುತ್ತ ಕುಣಿದಾಡುವುದು 1 ವತ್ಸಕಾಯುತ ವನದೊಳಗೆ ಆಡೆಂದರೆ ಕಿಚ್ಚುನುಂಗಿ ಸರ್ಪವ ತುಳಿಯುವುದು 2 ಚೆಂಡನಾಡುತ ತುರುವ್ಹಿಂಡು ಕಾಯೆಂದರೆ ಗಂಡನುಳ್ಳವರ್ಹಿಂದ್ಹಿಂದೆ ತಿರುಗುವುದು 3 ವಛ(ತ್ಸ?) ನಂದದಲಿ ಬಾಯ್ ಹಚ್ಚ ಗೋವಿನ ಕ್ಷೀರ ಅಷ್ಟು ಕುಡಿದನಾಶ್ಚರ್ಯ ನೋಡಮ್ಮ 4 ಇಂದೆನ್ನ ಮನೆಯಲ್ಲೊಂದಿಷ್ಟು ಕ್ಷೀರಗಳಿಲ್ಲ ಗಂಡ(ಅ?) ತಿ ದುಷ್ಟೆನ್ನ ಕೊಲ್ಲುವನಮ್ಮ 5 ಮೌನಗೌರಿಯ ನೋತು ನೀರೊಳಗಿದ್ದೆವೆ ಮಾನಹೀನರ ಮಾಡಿ ಮರವನೇರುವುದು 6 ಬಟ್ಟೆ ನೀಡೆಂದಾಲ್ಪರಿಯಲು ಜೋಡಿಸಿ ನಿಮ್ಹಸ್ತ ಮುಗಿ(ಯಿ) ರೆಂದಾಡುವುದು7 ಬುದ್ಧಿಹೇಳೆಂದರೆ ಮುದ್ದು ಮಾಡುವರೇನೊ ಕದ್ದು ಬಂದರೆ ಕಾಲು ಕಟ್ಟಿ ಹಾಕಮ್ಮ 8 ದಧಿ ಬೆಣ್ಣೆ ಚಂದ್ರನಂತ್ಹೊಕ್ಕು ತಾ ತಿಂದ ನೋಡಮ್ಮ 9 ಕೇರಿ ಮಕ್ಕಳ ನೋಡೊ ಮಹರಾಯ ಬಲರಾಮ ದೊಡ್ಡಮಗನು ಎಲ್ಲೆ ದೊರಕಿದನಮ್ಮ 10 ಮೀಸಲ್ಹಾಕಿದ ಬೆಣ್ಣೆ ನೀ ಸವಿದೀಯೆಂದು ಲೇಸಾಗಿ ಹೇಳೆ ಭೀಮೇಶಕೃಷ್ಣನಿಗೆ11
--------------
ಹರಪನಹಳ್ಳಿಭೀಮವ್ವ
ಎತ್ತುವೆನಾರತಿಯ ರಂಗಧಾಮನಿಗೆತ್ತುವೆನಾರತಿಯ ಪ. ಗೋಕುಲದೊಳು ಬೆಳೆದು ಆಕಳನೆಲ್ಲ ಕಾಯ್ದು ಪಾಕಶಾಸನನಿಗೆ ಪರಾಕ್ರಮ ತೋರಿದ ನೀರಗೆ 1 ಮಥುರೆಗೆ ನಡೆತಂದು ಮಾವ ಕಂಸನ ಕೊಂದು ಮಾತೆಗೆ ಮುದವಿತ್ತ ಮಧುಸೂದನ ಕೃಷ್ಣಗೆ 2 ಶೇಷಗಿರಿಯಲ್ಲಿ ವಾಸವಾಗಿರುತಿರ್ಪ ಶೇಷಭೂಷಣನುತ ವೃಷ್ಣಿವಂಶೋತ್ತಮಗೆ 3
--------------
ನಂಜನಗೂಡು ತಿರುಮಲಾಂಬಾ
ಸುಶೀಲ ಶ್ರೀಲೋಲ ಪ ಗೋಕುಲದಿ ಪುಟ್ಟಿ ಆಕಳನೆ ಕಾಯ್ದ ಗೋವರ್ಧನವನೆತ್ತಿ ಗೋಪವೃಂದ ಕಾಯ್ದ 1 ಬಾಲತನವ ನೋಡಿ ಪಾಲುಬೆಣ್ಣೆ ಸೂರೆ ಬಾಲಗೋಪರೊಡನೆ ಚೋರನೆನಿಸಿ ಮೆರೆದ 2 ಮುರಳಿನಾದಗೈದು ಪರಿಪರಿಯ ಜನರ ಮರುಳುಗೈಸಿ ಮೆರೆದ ಸುರಮುನಿ ವಂದ್ಯ 3 ಮಡದಿಯರು ಜಲದಿ ಮುದದಿಂದಾಡುತಿರಲು ಮದನನಯ್ಯ ವಸ್ತ್ರಗಳನೆ ಕದ್ದ ಚೋರ 4 ಕಾಳಿ ಮಡುವ ಧುಮುಕಿ ಕಾಳಸರ್ಪನ ತುಳಿದಕಾಮಜನಕ ಹರಿ ಶ್ರೀ ಕಮಲನಾಭ ವಿಠ್ಠಲ5
--------------
ನಿಡಗುರುಕಿ ಜೀವೂಬಾಯಿ
ಸ್ಥಿರದಿ ಸ್ಥಿರದಿ ನಿತ್ಯಾನಂದ ಭರಿತವಾಗಿರಲುಭರಿತವಾದಾನಂದ ಭರಿಸುತಿರಲುಪಆದಿಶಕ್ತಿಯು ಎಂಬ ಆಕಳನೆ ಬರಿಸಿಸಾಧುಗುರು ಕರುವೆಂಬುದದನೆ ಮುಂದಿರಿಸಿವೇದನಾಲಕು ಎಂಬ ಮೊಲೆಗಳನೆ ತೊರೆಸಿಭೇದರಹಿತಾದವರು ಹಿಂಡಿಲನು ಕರೆಸಿ1ಸ್ಥೂಲತನುವೆಂದೆಂಬ ಪಾತ್ರೆಯನೆ ತಂದುಲೋಲಸಾಂಖ್ಯವು ಎಂಬ ಕ್ಷೀರವನೆ ಕರೆದುಮೂಲಭೂತವದೆಂಬ ಹೆಪ್ಪನೆರೆದುಜೋಲುಮನಸಿನ ಬಡತನವನೆಲ್ಲ ಹರಿದು2ಸಾಧಕಾಂಗಗಳೆಂಬ ಮೊಸರನ್ನು ಮಥಿಸಿವಾದಹರವೆಂದೆಂಬ ಬೆಣ್ಣೆಯನು ತೆಗೆಸಿಸಾಧು ಶಾಂತಜÕವೆಂಬ ಪುಟದ ಮೇಲಿರಿಸಿಆತಘೃತಚಿದಾನಂದ ಜ್ಯೋತಿಯೊಡ ಬೆರಸಿ3
--------------
ಚಿದಾನಂದ ಅವಧೂತರು