ವನಿತೆ ನೀನು ಕರೆದು ತಾರೆ ರಾಮೇಶನುಮುನಿಸಿದನೆ ನೀರೆ ಪ
ಹಂಬಲಿಸುತಿದೆ ಮನ ಹೇಗೆ ನಾ ತಾಳಲೆರಂಬಿಸಿ ಪೊರೆದವನಕುಂಭ ಕುಚದ ಮೇಲೆ ಕೂರುಗುರಿನ ಬರೆಯಂಬ ಶಶಿಯ ನೇಮಗಾರನ 1
ಎನ್ನ ಮೇಲಿನಿತು ತಪ್ಪನಾದರೆ ತೋರಿಭಿನ್ನವಿಸುವುದು ಆಕನ್ನೆಯೋರ್ವಳ ಕೂಡುತಮುನ್ನಿನ ಲೇಸನು ತೋರದೆ ಎನ್ನ ಮರೆತ2
ಧರೆಯೋಳತ್ಯಧಿಕವೆಂದು ಕೆಳದಿಪುರದರಸುತನದಲೆ ನಿಂದುವರದನದಿಯ ತೀರವಾಸ ಶ್ರೀ ರಾಮೇಶನೆರದುಳುವಿದ ಲೇಸ ನಟನೆಯಿಂದ ಮಹೇಶ 3