ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(2) ಆಂಡಾಳ್ ಸ್ತುತಿ ಆಂಡಾಳ್ ದೇವಿ ಶರಣೆಂಬೆ ಶ್ರೀಗೋದಾದೇವಿ ಪೊರೆಯೆಂಬೆ ಪ ಮುಡಿದು ಕೊಟ್ಟ ನಾಯಕಿ ತಾಯೆ ರಂಗನಾಥನ ಪರಮಪ್ರಿಯೆ ಮುಡಿಪುಹೊತ್ತು ಸೇವಿಪೆವಮ್ಮ ಶರಣಾಗತಿಯನ್ನ ಅ.ಪ ಅಂದುಗೋಪಿಯರು ಕೃಷ್ಣನ ಸೇರಲು ಚಂದದಿಮಾಡಿದ ಕಾತ್ಯಾಯನಿವ್ರತವ ತಂದೆಯಮತದಿ ಹೊಂದಿಸೇವಿಸಿದೆ ಒಂದು ತಿಂಗಳ ತಿರುಪ್ಪಾವೈಯಲಿ 1 ದಿನಕೊಂದು ಪಾಶುರ ಕಟ್ಟಿಪಾಡುತ ದಿನದಿನ ಸಖಿಯರೊಳು ಮಾರ್ಗಳಿಯಲಿ ದಿನ ಮೂಡುವಮೊದಲೆ ತಣ್ಣೀರ್ಮೀಯುತ ದಿನಪ ಕೃಷ್ಣನ ಕಲೆತ ಕನ್ಯಾಮಣಿಯೆ 2 ಧನುರ್ಮಾಸವನು ಧರಿಸಿ ಭಜಿಸುವೆವು ಧನಂಜಯನ ತೋರೆ ಸಿರಿಬಾಯ್ನುಡಿಯೆ ಧನಕನಕಚಂದನೂ ಬಲ್ಲೆವು ತಾಯೆ ತನು ಕರಗಿಸು ಜಾಜಿಪುರೀಶನಡಿಯಲ್ಲಿ 3
--------------
ನಾರಾಯಣಶರ್ಮರು
4. ಆಂಡಾಳ್ ಶ್ರೀಗೋದಾದೇವಿ ಶ್ರೀಭೂ ನೀಳಾ ಅಂಡಾಳ್ ದೇವಿ ಭೋಗಿಶಯನನ ಭಾಗ್ಯದ ರಾಣಿ ಪ ಸರಿತುಳಸಿಯ ಮೂಲದಳುದಿಸಿದಳೆ ಪೆರಿಯಾಳ್ವಾರರ ಪ್ರೇಮಕುಮಾರಿ ಪರಮಾತ್ಮಗೆ ಹೂ ಮುಡಿದು ಮುಡಿಸಿದೆ ಕರಣತ್ರಯದೊಳಗವನೊಳು ಬೆರೆದೆ 1 ಧನುರ್ಮಾಸದವ ವ್ರತಾಚರಿಸಿದೆ ತಾಚರಿಸಿದೆ ಅನುಮತಿಸಿದ ಗೆಳತಿಯರೊಡಗೂಡಿ ವಿನಯದಿಂದ ತಿರುಪ್ಪಾವೈ ಪಾಡುತ ಕನಸೊಳು ಶ್ರೀರಂಗನೊಳು ಕೂಡಿದೆ 2 ಕಡುತ್ವರೆಯಿಂ ತಿರುಮೊಳಿಯಿಂ ತುತಿಸಿ ಸಡಗರದಿಂದವನಂ ಕೈವಿಡಿದೇ ಒಡೆಯನೊಡಲೊಳಗೆ ಎಡೆಯಂ ಪಡೆದೆ ಪೊಡವೀಶ ಜಾಜಿಕೇಶವನ ಮಡದಿ 3
--------------
ಶಾಮಶರ್ಮರು
ಪಾಂಡವಪಕ್ಷ ಪಾರ್ಥಸಾರಥಿಗೆ ಆಂಡಾಳ್ ಮಾಲೆಯ ಧರಿಸಿದಳು ಪ ಸೃಷ್ಟಿಜಾತೆಯು ಶೃಂಗಾರವಾಗಿ ಬಂದು ಕೃಷ್ಣಮೂರುತಿಯೆದುರಲ್ಲಿ ನಿಂದು ಅಷ್ಟವಿಧದ ಪುಷ್ಟಮಾಲೆಗಳನ್ನು ತೆಗೆದು ತಟ್ಟೆಯೊಳಗೆ ಇಟ್ಟು ಕಳುಹಿದಳು 1 ಆದಿಮೂರುತಿ ಮಂಟಪದಲ್ಲಿ ಕುಳಿತಿರೆ ಶ್ರೀದೇವಿ ಭೂದೇವಿ ಸಹಿತವಾಗಿ ವೇದಮೂರುತಿಯನು ನೋಡಿ ಸಂತೋಷದಿ ಗೋದಾದೇವಿಯು ಮಾಲೆ ಧರಿಸಿದಳು 2 ಮರುಗ ಮಲ್ಲಿಗೆ ಜಾಜಿ ಸುರಗಿ ಶಾವಂತಿಗೆ ಇರುವಂತಿಗೆ ಪಚ್ಚೆ ಮುಡಿದಾಳ ಪರಿಪರಿ ಪುಪ್ಪದ ಸರಗಳ ಪಿಡಿದು ಧರಣಿದೇವಿಗೆ ಸ್ವಾಮಿ ಧರಿಸಿದಳು 3 ತಾಳೆ ಚಂಪಕ ವಕುಳಮಾಲೆ ಮಂದಾರಪುಷ್ಪ ಕಮಲ ಸುಗಂಧರಾಜ ನೀಲವರ್ಣನ ಮುಖ ನೋಡಿ ಸಂತೋಷದಿ ನೀಳಾದೇವಿಯು ಮಾಲೆ ಧರಿಸಿದಳು 4 ಕಮಲವ ಕರದಲ್ಲಿ ಪಿಡಿದಿಹ ಕಾಂತೆಗೆ ಕಮಲವದನೆಯೆಂದೆನಿಸಿದವಳಿಗೆ ಕಮಲಾಕ್ಷಿಗೆ ಶ್ರೀವೆಂಕಟಕೃಷ್ಣನು ಕಮಲನಾಭನು ಮಾಲೆ ಧರಿಸಿದನು 5
--------------
ಯದುಗಿರಿಯಮ್ಮ