ಕಾವುದೆÉಮ್ಮನು ಜಗವ ಕಾವ ಕರುಣಿಯೆ ಪ.
ಈವುದೆಮಗೆ ಸಕಲಸುಖವÀ ದೇವ ಲಕುಮಿನಾರಾಯಣ ಅ.ಪ.
ಕಮಲಕರ್ಣಿಕಾ ಮಧ್ಯದಲ್ಲಿ ವಿಮಲ ವಿಹಂಗಪತಿಯ ಶಿರದಿಕಮಲಭವನು ಬಿಡದೆ ಪೂಜಿಪ ಅಮರಕುಲಲಲಾಮ ವಿಭುವೆ 1
ಮಧ್ವಮುನಿಯ ಕರಗಳೆಂಬೊ ಪದುಮಗಳಿಂದ ಪೂಜಿತ ಚರಣಗೆದ್ದು ಕುಜನತತಿಯ ಸುಜನರುದ್ಧರಿಸುವ ಗುಣನಿಧಿಯೆ 2
ಶಂಖಚಕ್ರ ಗದಾಪದುಮ ಆಂಕಗಳಿಂದ ಶೋಭಿತ ಕರಪಂಕಜಾಕ್ಷ ಪಯೋಧಿಶಯನ ಶಂಕೆಯಿಲ್ಲದೆ ಹಯವದನ3