ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರೇ ವೆಂಕಟಶೈಲವಲ್ಲಭಪೊರೆಯಬೇಕು ಎನ್ನಪ ದುರಿತದೂರ ನೀನಲ್ಲದೆ ಧರೆಯೊಳುಪೊರೆವರನ ಕಾಣೆ ನಿನ್ನಾಣೆ ಅ.ಪ. ಆರು ನಿನ್ನ ಹೊರೆತೆನ್ನ ಪೊರೆವರುನೀರಜಾಕ್ಷ ಹರಿಯೆ ಅ-ಪಾರ ಮಹಿಮ ಪುರಾಣ ಪುರುಷಘೋರ ದುರಿತಗಳ ದೂರ ಮಾಡಿಸೋ 1 ಇಂದಿರೇಶ ಅರವಿಂದನಯನ ಎನ್ನತಂದೆ ತಾಯಿ ನೀನೆಹೊಂದಿದವರ ಅಘವೃಂದ ಕಳೆವಮಂದರಾದ್ರಿಧರನೇ ಶ್ರೀಧರನೇ2 ಮಂಗಳಾಂಗ ಮಹನೀಯ ಗುಣಾರ್ಣವಗಂಗೋದಿತ ಪಾದಅಂಗಜಪಿತ ಅಜರಾಜಶಯ್ಯ ಶ್ರೀ-ರಂಗವಿಠ್ಠಲ ದೊರೆಯೇ ಶ್ರೀ ಹರಿಯೇ 3
--------------
ಶ್ರೀಪಾದರಾಜರು
ಕುಮಾರ ಗುಹಗೆ ಎಸಗೀ ಪ ವಾಹನನಿಗೆ ಧೀರಗೆ ಜಯವೆಂದು ಆರತಿ ಅ.ಪ ವೇದೋಕ್ತ ಮಂತ್ರದಿಂದ ಶರ್ಕರ ಮೊದ-ಲಾದ ದ್ರವ್ಯದಿಂದ ಸಾಧು ವಂದಿತನಿಗೆ ಭೂದೇವರಭಿಷೇಕ ಸಾದರದಲಿ ಮಾಡಿ ಮೋದದಿ ಜಯವೆಂದು ||ಆರತಿ|| 1 ಕಲಶೋದಕ ಮಂತ್ರಿಸಿ ಭೂಸುರರೆಲ್ಲ ನಲವಿಂದಲಭಿಷೇಕಿಸಿ ತಲೆಗೆ ಗಂಧಾಕ್ಷತೆ ತುಲಸಿ ಪತ್ರವು ವುಷ್ಪಗಳ ಮಾಲೆ ಇರಿಸುತ್ತ ನಲವಿಂದೆ ಜಯವೆಂದು ||ಆರತಿ|| 2 ಓಗರ ಜಂ- ಬೂಫಲ ಭಕ್ಷ್ಯವ ಶ್ರೀಪತಿ ಸಖಗೆ ಸ-ಮಾರ್ಪಿಸಿ ಜಯವೆಂದು ||ಆರತಿ|| 3 ಮೂರು ಪ್ರದಕ್ಷಿಣೆಯ ಭಕ್ತಿಯೊಳ್ ನಮ-ಸ್ಕಾರವ ಪ್ರಾರ್ಥನೆಯ ಮಾರಾರಿಸುತಗೆ ಅ-ಪಾರ ಮಹಿಮನಿಗೆ ಹಾರುವರೆಸೆಗುತೊ-ಯ್ಯಾರದಿ ಜಯವೆಂದು ||ಆರತಿ|| 4 ಮಂಗಳ ಶರಜನಿಗೇ ಗುಹಗೆ ಜಯ ಮಂಗಲ ಸ್ಕಂಧನಿಗೇ ಮಂಗಲ ಪಾವಂಜೆ ವಾಸ ಷಡ್ಶಿರನಿಗೆ ಮಂಗಲದಾಸರ ಕಾವಗೆ ಜಯವೆಂದು ||ಆರತಿ|| 5
--------------
ಬೆಳ್ಳೆ ದಾಸಪ್ಪಯ್ಯ
ಶುಭ ಮಂಜುಳಗಾತ್ರ್ರೆಕುಂಜರದಂತೆ ಗಮನೆ ರಂಜಿತಾಂಗಿ ನಿರಂಜನಾಂಗಿ ಪ ಧರೆಯ ಮ್ಯಾಲೆ ಹಿರಿಯಳು ನಾ-ನಿರಲು ಲಜ್ಜೆ ತೊರೆದು ನೀನುಸರಸವಾಡೋದೆ ಮುರಹರನಕರೆದು ಭಾಮಿನಿ ಸುಗುಣೆ ಕಾಮಿನಿ 1 ಪತಿಯ ಪ್ರೀತಿ ಎನ್ನ ಮ್ಯಾಲೆಅತಿಶಯದಿ ಇರಲು ಜ್ಯೇಷ್ಠಸತಿಯಳೇನೇ ನೀನು ನೋಡುಮತಿಯ ರುಕ್ಮಿಣಿ ಸುಪದ್ಮಗಂಧಿನಿ2 ಒಂದು ಕಾಲದಲ್ಲಿ ದಾಸಿ-ಯಿಂದ ಪತಿಯು ಸರಸವಾಡಲುಬಂದಳೇನೇ ಅರಸಿ ಸಮ-ಳೆಂದು ಭಾಮಿನಿ ಸುಗುಣೆ ಕಾಮಿನಿ 3 ದಾಸಿ ಸಮಳು ನಾನು ಅಲ್ಲ ದೋಷ ಮಾತನಾಡಬೇಡಶ್ರೀಶನ ದಯರಾಶಿ ಇರಲುದಾಸಿಯೆ ರುಗ್ಮಿಣಿ ಸುಪದ್ಮಗಂಧಿನಿ 4 ಸಾರೆ ಕೃತ್ಯವಾರೆ ಹೂಡಿದ್ವಾರಾವತಿಯಿಂದ ಎನ್ನಸಾರೆ ಬಂದ ಪ್ರೀತಿಯು ಅ-ಪಾರೆ ಭಾಮಿನಿ ಸುಗುಣೆ ಕಾಮಿನಿ5 ಕಡಲಶಾಯಿ ತಡೆದರಿನ್ನುದಿಡುಗು ದೇಹ ಬಿಡುವೆನೆಂಬೊನುಡಿಯ ಕೇಳಿ ಪಿಡಿದನೆಬಿಡದೆ ರುಗ್ಮಿಣಿ ಸುಪದ್ಮಗಂಧಿನಿ 6 ಮಂದರಧರನು ಪ್ರೀತಿ-ಯಿಂದ ನಿನ್ನ ಪಡೆದನೇನೆಒಂದು ಮಣಿಯ ಕಾರಣದಿಬಂದೆ ಭಾಮಿನಿ ಸುಗುಣೆ ಕಾಮಿನಿ7 ಸುಮ್ಮನೆ ಬಂದವಳಿಗೆಬ್ರಹ್ಮ-ಲಗ್ನದಿ ಬಂದೆನಗೆಸಾಮ್ಯವೇನೆ ಯಾಕೆ ನಿನಗೆಹೆಮ್ಮೆ ರುಗ್ಮಿಣಿ ಸುಪದ್ಮಗಂಧಿನಿ. 8 ಮಾನಾದಿ ಭಕ್ತಿಯು ಕನ್ಯಾ-ದಾನವು ಲೋಕದೊಳಗುಂಟುಏನು ನಿನ್ನ ತಾತ ಕೊಟ್ಟದೀನ ಭಾಮಿನಿ ಸುಗುಣೆ ಕಾಮಿನಿ 9 ಎನ್ನ ಹಂಗದೆಂದುಪ್ರಸನ್ನ ಕೇಳಿ ಶತಧನ್ವನಬೆನ್ನಟ್ಟಿ ಕೊಂದನೇ ನೀ-ಚೆನ್ನ ರುಗ್ಮಿಣಿ ಸುಪದ್ಮ ಗಂಧಿನಿ 10 ವೀರ ಅರಸರ ಸ್ವಭಾವಚೋರರ ಕೊಲ್ಲಬೇಕೆಂಬೋಸಾರ ಪ್ರೀತಿಯದರಿಂದತೋರಿ ಭಾಮಿನಿ ಸುಗುಣೆ ಕಾಮಿನಿ11 ಇಂದ್ರಾದಿ ದೇವತೆಗಳೊಳುಸಾಂದ್ರಯುದ್ಧವನ್ನೆ ಮಾಡಿವೀಂದ್ರ ಎನಗೆ ಪಾರಿಜಾತತಂದ ರುಗ್ಮಿಣಿ ಸುಪದ್ಮಗಂಧಿನಿ12 ಕ್ಲೇಶ ನೋಡಿ ತಂದತರುವ ಭಾಮಿನಿ ಸುಗುಣೆ ಕಾಮಿನಿ13 ನಿಜಳೆಂದು ರಂಗನು ಎನ್ನವಿಜಯಯಾತ್ರೆಯಲ್ಲಿ ತನ್ನಭುಜಗಳಿಂದಾಲಂಗಿಸಿದಸುಜನೆ ರುಗ್ಮಿಣಿ ಸುಪದ್ಮಗಂಧಿನಿ 14 ಅರಸರ ಸ್ವಭಾವ ತಮ್ಮಅರಸೇರ ಮನೆಯೊಳಗಿಟ್ಟುಸರಸ ದಾಸೇರಿಂದ್ಹೋಗೋದುಸ್ಮರಿಸೆ ಭಾಮಿನಿ ಸುಗುಣೆ ಕಾಮಿನಿ 15 ಸಾರವಚನ ಕೇಳಿ ಭಾಮೆಮೋರೆ ಕೆಳಗೆ ಮಾಡುತಿರಲುನಾರಿ ರುಕ್ಮಿಣಿ ಭಾಮೆಯರನ್ನುವೀರ ಕರೆದನು ತಾ ಸೇರಿ ಮೆರೆದನು16 ಮಂಗಳಾಂಗ ಮಹಿಮ ಕೇಶವಾ-ಲಿಂಗಿಸಿದ ಭೈಷ್ಮಿಯನ್ನುತುಂಗಗುಣ ಗೋಪೀರಮಣರಂಗವಿಠಲನು ಅನಂಗಜನಕನು 17
--------------
ಶ್ರೀಪಾದರಾಜರು
ಶ್ರೀಶ ನೀನಹುದೋ ಶೇಷಾಚಲವಾಸ ನೀನಹುದೊ ಪ. ಶೇಷಶಯನ ಸುರೇಶವಂದಿತಶೇಷಜನರನು ಪಾಲಿಸಿ ಬಡ್ಡಿಕಾಸು ಸೇರಿಸಿ ಗಂಟುಕಟ್ಟುವಕ್ಯಾಸಕ್ಕಿ ತಿಮ್ಮಪ್ಪ ನೀನೆ ಅ.ಪ. ತÀಂದೆ ನೀನಹುದೊ ಕರುಣಾಸಿಂಧು ನೀನಹುದೊಅಂದುದ್ರುಪದನ ನಂದನೆಯ ಎಳೆತಂದು ಘಾಸಿಯ ಮಾಡುತಿರÀಲುಮುಂದೆ ಬಂದು ಅಕ್ಷಯವೆಂದು ಸಲಹಿದಮಂದಹಾಸ ಮುಕುಂದನು ನೀನೆ 1 ಧೀರ ನೀನಹುದೊ ಜಗದೋದ್ಧಾರ ನೀನಹುದೊಬಾರಿ ಬಾರಿಗೆ ನಿನ್ನಪಾದ ಸುವಾರಿಜಂಗಳಸೇರಿದ ಭಕ್ತರ ಘೋರ ದುರಿತವದೂರಗೈಸುವ ಮಾರಜನಕ ಅ-ಪಾರ ಮಹಿಮನೆ 2 ಧನ್ಯ ನೀನಹುದೊ ಸುರಮುನಿಮಾನ್ಯ ನೀನಹುದೊಪನ್ನಗಾರಿವಾಹನ್ನ ಧರೆಯೊಳುಇನ್ನು ನಿನಗೆದುರ್ಯಾರ ಕಾಣೆನೊ ಪ್ರ-ಸನ್ನನಾಗೆಲೊ ಬಿನ್ನಹ ಕೇಳು ಪ್ರ-ಪನ್ನವತ್ಸಲ ಶ್ರೀ ಹಯವದನ 3
--------------
ವಾದಿರಾಜ
ಎಂತು ವರ್ಣಿಸಲಹುದು ಸಿರಿವರನಸಿರಿನಾರಸಿಂಹನಪಅಂತರಂಗದಿ ಹರಿಯ ಸ್ಮರಣೆಯಸಂತತವು ಬಿಡದಂತೆ ಮಾಡುವಕಂತುಪಿತ ಭಕ್ತರನು ಪೊರೆಯಲುನಿಂತಿರುವ ಸಿರಿಕಾಂತನೆನುತಲಿ ಅಪನಿಷ್ಠೆಯಿಂದಲಿ ಬೆಟ್ಟವೇರುತ್ತಹರಿಭಕುತರೆಲ್ಲರುಕಷ್ಟಗಳ ಪರಿಹರಿಸು ಎಂದೆನುತಮನಮುಟ್ಟಿ ಭಜಿಪರುಸೃಷ್ಟಿಕರ್ತನೆ ರಕ್ಷಿಸೆಂದೆನುತಇಷ್ಟದಾಯಕ ನಿನ್ನ ಮಹಿಮೆಯಎಷ್ಟು ಪೊಗಳುವರಯ್ಯ ಕೇಶವಭಕ್ತರನು ಉದ್ಧರಿಸಲೋಸುಗಬೆಟ್ಟದಲಿ ಉದ್ಭವಿಸಿದಾತನ 1ವಾಸುದೇವನ ಮಹಿಮೆ ಪೊಗಳುತ್ತ ನ-ರಸಿಂಹ ಲಕ್ಷೀ ನಾರಸಿಂಹ ನ-ರಸಿಂಹ ನರಸಿಂಹ ಎಂದೆನುತ ಹರಿ-ದಾಸರೆಲ್ಲರು ಸಾರಸಾಕ್ಷನೆ ನಿನ್ನ ಪೊಗಳುತ್ತದ್ವಾರ ದ್ವಾರದಿ ಪೂಜೆUಷÉೂಳ್ಳುತಮಾರಪಿತ ಮಹಲಕ್ಷೀ ಸಹಿತದಿದೋರ ರಥÀದೆಡೆಯಲ್ಲಿ ನಿಲ್ಲುತತೇರ ನೇರುವ ಶ್ರೀ ರಮೇಶನ 2ಸಾರಪದಕಗಳಿಂದ ಶೋಭಿಸುತ ಝಳಝಳಿಪವಜ್ರದ ತೋರ ಮುತ್ತಿನ ಮಾಲೆಹೊಳೆಯುತ್ತ ಥಳಥÀಳಿಪ ನೊಸಲಲಿಸಾರಕಸ್ತೂರಿ ತಿಲಕ ರಂಜಿಸುತಮಾರಬಿಲ್ಲೆಂತೆಸೆವ ಪುಬ್ಬಿನಚಾರುತರ ಶೃಂಗಾರ ನಯನದವಾರೆ ನೋಟÀದಿ ನೋಡಿ ಭಕುತರ ಅ-ಪಾರದುಃಖಗಳನ್ನ ನೀಗುವರ3ಕೋಟಿಸೂರ್ಯಪ್ರಕಾಶಮಯವಾದನವರತ್ನ ಖಚಿತ ಕಿರೀಟಕುಂಡಲಧರಿಸಿ ಅನುವಾದಎಡಬಲದ ಭುಜದಲಿಮಾಟದ ಭುಜಕೀರ್ತಿ ಸುಲಲಿತದನೋಟಕಾಶ್ಚರ್ಯವನೆ ತೋರುತಶ್ರೀ ಕಳತ್ರನು ರಥದಿ ಮೆರೆಯುತ ದಿ-ವಾಕರನ ಪ್ರಭೆಯಂತೆ ಪೊಳೆಯುವರಮಾ ಮನೋಹರ ರಮೆಯ ರಮಣನ 4ಛತ್ರಿ ಚಾಮರಗಳನೆ ಪಿಡಿದಿಹರು ಎಡಬಲದಿಸ್ತುತಿಸುತ ಎತ್ತಿ ಸ್ವರಗಳ ಗಾನಪಾಡುವರುಚಿತ್ತೈಸುಹರಿಬಾ ಬಾರಿತ್ತಬಾಬಾರೆಂದು ಕರೆಯುವರುಸುತ್ತ ತುಂಬರು ನಾರದರಪರಿನೃತ್ಯಗಾನಗಳಿಂದ ಸ್ತುತಿಪರುಕರ್ತೃ ಕಮಲನಾಭ ವಿಠ್ಠಲರ-ಥೋತ್ಸವದಿ ನಲಿನಲಿವ ದೇವನ 5
--------------
ನಿಡಗುರುಕಿ ಜೀವೂಬಾಯಿ