ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಳಗೆ ಹೊರಗೆ ಓಡಾಡುವ ಉತ್ತಮಳಾರು ಹೇಳೆಬಳಿಕ ಹೇಳುವೆ ಬಹಳ ಭಾಗ್ಯ ಬಗಳಾಂಬ ಕೇಳೇ ಪ ಸರಿ ವಾಲೆ ಕಪ್ಪನ್ನಿಟ್ಟು ವಜ್ರಗಳ ಸರವನೆ ಹಾಕಿಪರಮಾನಂದಪಡಿಸುತಿಹ ಪಂಡಿತಳಾರು ಹೇಳೆದುರುಳ ಮಹಿಷಾಸುರನ ಕೊಂದು ಮರಳಿ ಚಿದಾನಂದನಲ್ಲಿಸ್ಥಿರವ ಮಾಡಿಯಿಹಳು ಬಹಳ ಶಿಷ್ಟಳು ಕೇಳೇ 1 ಪಿಲ್ಲಿ ಮಂಟಿಕೆ ಗೆಜ್ಜೆಯನಿಟ್ಟುಘುಲ್ಲು ಘುಲ್ಲು ಹೆಜ್ಜೆಯನಿಕ್ಕುತಪಲ್ಯ ಕಾಯ ವಾಸವ ಮಾಡಿಹ ಬಗಳ ಮಹಿಮಳು ಕೇಳೇ 2 ದುಂಡು ಮುತ್ತ ಕಟ್ಟಿ ಹೇಮಗುಂಡು ಸರವೊಲೆವುತಮಂಡಿಗೆಯ ಹಿಡಿದು ಬಡಿಸುತಿಹ ಉದ್ದಂಡಳಾರು ಹೇಳೆಚಂಡ ಮುಂಡರ ಶಿರವ ಖಂಡಿಸಿ ಚಿದಾನಂದನಲಿ ಅ-ಖಂಡ ವಾಗಿಹಳು ಬಗಳ ಪುಂಡಳು ಕೇಳೇ3 ಹೊನ್ನ ಕಡಗ ಸೀರೆಯುಟ್ಟು ಚೆನ್ನ ರತ್ನದ ಕುಪ್ಪಸ ತೊಟ್ಟುಅನ್ನವ ಹಿಡಿದು ಬಡಿಸುತಿಹ ಮಾನ್ಯಳು ಯಾರು ಹೇಳೇಕುನ್ನಿ ದುರ್ಜನರ ಛೇದಿಸಿ ಚಿದಾನಂದ ಗುರುವಬೆನ್ನು ಕಾದು ಬಿಡದೆ ಇಹಳು ಬಗಳಾಂಬ ಕೇಳೇ 4 ನಿತ್ಯಾತ್ಮ ಚಿದಾನಂದನಲ್ಲಿ ನಿಲುಗಡೆಯಿಲ್ಲದೆ ಓಡಾಡುತಸುತ್ತಮುತ್ತ ಸುಳಿದಾಡುವ ಸೂಕ್ಷ್ಮಳಾರು ಹೇಳೇಕರ್ತೃವಾಗಿ ತತ್ವವ ಕೇಳುತ ಚಿದಾನಂದನಲಿ ವಾಸವಮಾಡುವ ಮಹಾಮಾಯಿ ಬಗಳೆ ಪಾರುಪತ್ಯಳು ಕೇಳೇ5
--------------
ಚಿದಾನಂದ ಅವಧೂತರು
ಕಂಡಿರೇ ಬ್ರಹ್ಮದಾಟವ ಕಂಡಿರೆ ಬ್ರಹ್ಮದಾಟ ಅ-ಖಂಡರಾದ ಮಹಾತ್ಮರಿರಾ ಪ ಬುದ್ಧಿಯನ್ನು ಹೇಳುತಿದೆ ಬುದ್ಧಿಯನ್ನು ಕೇಳುತಿದೆಬುದ್ಧಿಹೀನನೆಂದು ತಾನೆ ಬದ್ಧನಾಗಿ ಕುದಿಯುತಿದೆ 1 ಒಮ್ಮೆ ಸುಖಪಡುತಲಿದೆ ಒಮ್ಮೆ ದುಃಖ ಮಾಡುತಿದೆಒಮ್ಮೆ ಹಾಡಿಪಾಡಿ ನಕ್ಕು ಒಮ್ಮೆ ಕೆಲೆದು ಕೆನೆಯುತಿದೆ 2 ದುಡುಕು ತಾನು ಮಾಡುತಿದೆ ದುಡುಕು ಅವನದೆನ್ನುತಿದೆದುಡುಕು ದುಡುಕು ಎಂದು ತಾನೆ ಬಿಡಿಸಿ ನ್ಯಾಯ ಹೇಳುತಿದೆ3 ಗಂಡ ಹೆಂಡಿರಾಗಿ ಇದೆ ಗಂಡು ಮಗನ ಬೇಡುತಿದೆಗಂಡು ಗಂಡು ಎಂದು ತಾನು ಗಂಡ ದೀಪ ಹೊರುತಲಿದೆ 4 ಬಹಳ ವೇಷ ಹಾಕಿ ಇದೆ ಬಹಳ ಹೆಸರ ಕರೆಸುತಿದೆಬಹಳ ಚೇಷ್ಟೆಯಿಂದ ತಾನು ಬಹಳ ಭೇದವಾಗಿ ಇದೆ 5 ಇಂತು ಬಹಳ ರೂಪವಿದೆ ಇಂತು ತಿಳಿಯಲೊಂದೆ ಇದೆಇಂತು ಚಿದಾನಂದ ಬ್ರಹ್ಮ ಇಂತು ಹೊತ್ತು ಕಳೆಯುತಿದೆ 6
--------------
ಚಿದಾನಂದ ಅವಧೂತರು