ಜಡಮತಿಗಡ ಕಡಿದೀಡ್ಯಾಡಿ
ಪಡಿರೋ ಸನ್ಮಾರ್ಗವ ಹುಡುಕ್ಯಾಡಿ ಪ
ಗಡಗಡಸದೃಢದಯಿಡುತೋಡೋಡಿ
ಪಡಿರೋ ಕಡು ಅನಂದ್ವೊಯ್ಕುಂಠ ನೋಡಿ ಅ.ಪ
ಚಿಂತೆ ಭ್ರಾಂತಿಗಳ ದೂರಮಾಡಿ ನಿ
ಶ್ಚಿಂತರಾಗಿರೋ ಮನ ಮಡಿಮಾಡಿ
ಶಾಂತಿತೈಲ್ಹೊಯ್ದು ಜ್ಞಾನಜ್ಯೋತಿಕುಡಿ ಚಾಚಿ
ನಿಂತು ನೋಡಿರೋ ಹರಿಪುರದಕಡೆ
ಅಂತ್ಯ ಪಾರಿಲ್ಲದಾತ್ಯಂತ ಪ್ರಕಾಶದಿಂ
ನಿಂತು ಬೆಳಗುತಾರೋ ಆನಂತಸೂರ್ಯರು ಕೂಡಿ 1
ಬೋಧಾದಿಮಯ ಮಹದ್ವಾರಗಳು ಮತ್ತು
ವೇದ ನಿರ್ಮಯ ಪುರಬೀದಿಗಳು
ಆದಿಅಂತಿಲ್ಲದಷ್ಟ ಭೋಗಗಳು ವಿ
ನೋದ ಮುಕ್ತಿ ಕಾಂತೇರಾಟಗಳು
ವೇದವೇದಾಂತ ಅಹ್ಲಾದದಿಂ ಪೊಗಳುವ
ಸುಜನ ಮಹದಾದಿಪದವಿಗಳು2
ಸೇವಿಪ ಸುರಮುನಿಗಣಗಳು
ಕೋವಿದ ನಾರದಾದಿ ಗಾನಗಳು ರಂಭೆ
ನಾಯಕಿಯರ ಮಹನರ್ತನಗಳು
ಸಾವಿರಮುಖಪೀಠದ್ಹೊಳೆವ ಶ್ರೀರಾಮನ
ಪಾವನಪಾದಕಂಡು ಸಾವ್ಹುಟ್ಟು ಗೆಲಿರೆಲೋ 3