ಏನು ಪುಣ್ಯವೋ ಯಶೋದೆಯ
ಪರೀಕ್ಷಿತರಾಯ
ಯಾವ ಪುಣ್ಯವೋ ಯಶೋದೆಯ ಪ.
ಚೆನ್ನಕೇಶವನ್ನ ತನ್ನ
ಚಿಣ್ಣನೆಂದು ಮುದ್ದಿಸಿ
ಬಣ್ಣಿಸಿ ಮೊಲೆಯನುಣ್ಣಿಸಿ
ಚಿನ್ನದ ತೊಟ್ಟಿಲೊಳಿಟ್ಟು ತೂಗುವ 1
ಅಗಣಿತ ಬ್ರಹ್ಮಾಂಡಗಳ ತ-
ನ್ನುದರದೊಳಡಗಿಸಿದನ
ಮುಗುಳುನಗೆಯ ಮೊಗವ ನೋಡಿ
ಮಗನೆಂದಾಡಿ ಪೊಗಳಿ ಪಾಡುವ 2
ಲಕ್ಷ್ಮೀನಾರಾಯಣನ ಪ್ರ-
ತ್ಯಕ್ಷ ಬಾಲಲೀಲೆಯ
ಚಕ್ಷುದಣಿಯೆ ನೋಡುತನ್ಯ-
ಪೇಕ್ಷೆಯಿಲ್ಲದಿಹಳೊ ಅಹೋ3