ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಪ್ಪು ಮಾಡಿದ್ದು ಸತ್ಯ ನಾನಪ್ಪ ಮಿಥ್ಯಲ್ಲ ತಿಮ್ಮಪ್ಪ ತಪ್ಪು ಮಾಡಿದ್ದು ಸತ್ಯ ನಾನಪ್ಪ ಪ ತಪ್ಪು ಎನ್ನದು ಗಪ್ಪು ಮಾಡಿ ಪರರೊಪ್ಪುವಂತೆ ಮಂದಿ ತಪ್ಪು ತೋರಿಸಿ ತಪ್ಪು ಒಪ್ಪಿಸುತಿಪ್ಪ ಮೃತ್ಯುಗೆ ಕಷ್ಟವಾಗ್ವುದ ತಪ್ಪಿಸೋ ತಪ್ಪ ಅ.ಪ ಪರರ ದುರ್ಗಣ ಗಿರಿಯು ಪರ್ವತಪ್ಪ ಬೆಳಸಿ ಎನ್ನಯ ಪರಮದುರ್ಗುಣ ತೃಣಕೆ ಸಮನಪ್ಪ ಮಾಡಿತೋರಿಸಿ ಜರೆದು ಬೀಳುವೆ ನರಕಗುಂಟಪ್ಪ ದುರಿತಶೇಷಪ್ಪ ಹರಿದುಕೊಳ್ಳದೆ ಮರವೆಲಿ ಮತ್ತು ಪರರ ಜರಿಯುತ ದುರಿತದಿಂದೆಮಪುರವ ಸಾಧಿಪೆ ತಿರುಗಿ ನೋಡದೆ ಅರಿವು ಕರುಣಿಸು ಶರಣರ್ಹೊನ್ನಪ್ಪ 1 ಎಷ್ಟೋ ಎಷ್ಟೋ ಪಾಪಕೋಟೆಪ್ಪಾ ಆಚರಿಸಿ ನಾನು ಕೆಟ್ಟು ಭ್ರಷ್ಟನಾದೆ ಕಲ್ಲಪ್ಪ ದುಷ್ಟತನದಿ ನಷ್ಟಮಾಡಿದೆ ಪರರ ಮಾನಪ್ಪ ಮುಷ್ಟಿದಾನಪ್ಪ ಹುಟ್ಟಿದಂದಿನಿಂದ ಕೊಟ್ಟು ಪಡಿಲಿಲ್ಲ ಶಿಷ್ಟರೊಲುಮೆಯ ನಿಷ್ಠೆಯಿಂ ನಾ ಸೃಷ್ಟಿಕರ್ತ ದೃಷ್ಟಿಲಿಂದಿನ್ನು ಹುಟ್ಟಿಸೆನ್ನಗೆ ನಿಷ್ಠ ಜ್ಞಾನಪ್ಪ 2 ಎಲ್ಲ ಪಾಪಕ್ಹೆಚ್ಚು ನಂದಪ್ಪ ಜಗದಿ ಎಲ್ಲ ಖುಲ್ಲರಿಗೆ ನಾನ್ಹಿರಿಯ ಬಾಲಪ್ಪ ಕೇಳಲೇನು ಕಳ್ಳ ಸುಳ್ಳತನದಿ ವೀರಪ್ಪ ಕಾಲಯಮನಪ್ಪ ಅಲ್ಲ ಅಹುದೆನ್ನುವುದನೆಲ್ಲ ಬಲ್ಲೆ ನೀ ಇಲ್ಲವೆನಿಪ ಸಾಧ್ಯವೆಲ್ಲಿದೆ ಎನಗೆ ಪುಲ್ಲನಯನ ಕ್ಷಮೆ ಪಾಲಿಸು ಸಿರಿಯರ ನಲ್ಲ ಶ್ರೀರಾಮ ಗೊಲ್ಲ ಕೃಷ್ಣಪ್ಪ 3
--------------
ರಾಮದಾಸರು