ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಖೋಡ್ಯಾದಲ್ಲೋ ಸಂಸಾರ ನಾನು ನೋಡಿದ್ದಿಲ್ಲ ಪ ಏನು ಖೋಡಿದು ವಿಚಾರ ತಪ್ಪಿಸಿ ಎನ್ನ ಶ್ವಾನದಂದದಿ ಖೂನವಿಲ್ಲದೆ ಕೂಗಿಸಿತೇನು ಅ.ಪ ತಾನೆ ನಿಜವಿಲ್ಲ ಎನ್ನನು ಏನು ಕೆಡಿಸಿತಲ್ಲ ನಾನಾಪರಿಲಿ ಮಾಯಮೋಹದಿ ಮುಳುಗಿಸಿ ಜ್ಞಾನ ಕೆಡಿಸಿ ಹೀನಬವಣೆಗೆ ತಂದಿತ್ತು 1 ಕನಸಿನಪರಿಯಂತೀಜಗಸುಖ ಕ್ಷಣಹೊತ್ತಿನ ಸಂತಿ ಇನಿಸು ತಿಳಿಗೊಡದೆನ್ನ ಮನಸು ಸೆಳೆದುಕೊಂಡು ಕುಣಿಸಿ ಕುಣಿಸಿ ಮಹ ನರಕಿಯೆನಿಸಿತ್ತು 2 ಸತ್ಯಮಾರ್ಗ ಮರೆಸಿ ಎನ್ನನಸತ್ಯಮಾರ್ಗಕೆಳಸಿ ನಿತ್ಯನಿರ್ಮಲನ ಸತ್ಯ ಚರಿತೆಗಳ ಗುರ್ತು ತಿಳಿಸದೆಮಮೃತ್ಯುತೀಡೆನಿಸಿತ್ತು3 ಮರವೆಯು ಮುಚ್ಚಿತ್ತು ಭವಪಾಶ ಕೊರಳಿಗೆ ಹಾಕಿತ್ತು ಅರಿವಿನ ಕುರುಹನು ತೋರಿಸದೆ ಪರದಿರವು ಮರೆಸಿ ಧರೆಭೋಗ ಅಹುದೆನಿಸಿತ್ತು 4 ನೇಮನಿತ್ಯಕೆಡಿಸಿ ಎನಗೆ ಶ್ರೀರಾಮಪಾದಮರೆಸಿ ಕಾಮಿಸಬಾರದ ಕಾಮಿತಗಳಿಂದ ಪಾಮರನೆನಿಸೆನ್ನ ಕೊಲ್ಲುತಲಿತ್ತು 5
--------------
ರಾಮದಾಸರು
ಛೀ ಯಾತರ ಬುದ್ಧಿ | ಸೊಕ್ಕಿನ ಮಾತಿಲಿ ಬಲು ನÉೂಂದಿ ಪ ಗುರುಹಿರಯರ ಅನುಸರಿಸದೇ | ಹರಿಚರಣವ ಕೊಂಡಾಡದೇ | ಬರಡಾ ನಾಲಿಗೆ ಮಾಡಿದಿ ಬರಿದೇ 1 ವಳ್ಹವ ಹೊಲ್ಲವರಿಯದೇ | ಯಳ್ಳಿನಿತು ನೀ ವಿಚಾರಿಸದೇ | ನಿಲ್ಲದೇ ಮಾಡುವಿ ಬಗಳುವದೇ 2 ಕೆಂಡವ ಕಂಡು ನೆರೆ | ಮಂಡಿಯಾ ತುರಿಸುವರೆ | ತುಂಡತನ ಗುಣ ಬಿಡು ಇನ್ನಾರೆ 3 ಪೊಡವಿ ದೇವತೆಯ ಕೋಣಾ | ಯಡಬಲ ನೋಡದಿರಲೇನು | ಕಡೆಯಲಿ ಕೆಡುವರು ಒಂದಿನಾ 4 ಮಹಿಪತಿಸುತ ಪ್ರಭು ದಾಸರ ಕೈ | ಅಹುದೆನಿಸಿಕೊಂಬುದೆ ಸ್ವರ್ಗಯ್ಯ | ವಿಹಿತಲ್ಲೆಂಬುದೇ ನರ್ಕದಾಶ್ರಯಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಫುಲ್ಲನಾಭ ನಿಜತತ್ವ ತಿಳಿಸು ನುತಪ್ರೇಮಿ ಅಲ್ಲದ್ದು ಅಹುದೆನಿಸಿ ಕೊಲ್ಲದಿರು ಸ್ವಾಮಿ ಪ ವಿಪಿನವನು ಸೇರಿ ಬಲು ಗುಪಿತದಿಂ ಕುಳಿತು ಮಹ ತಪವನಾಚರಿಸಲು ಸುಪಥ ದೊರಕುವುದೆ ಕಪಿವರದ ನಿನ್ನಡಿಯ ಕೃಪೆಯಿಲ್ಲದಿರೆ ಇನಿತು ಜಪತ¥ವ್ರತನೇಮ ಸುಫಲ ನೀಡುವುದೆ 1 ತ್ಯಾಗಿಯೆಂದೆನಿಸಿ ಬಲು ಭೋಗ ನೀಗುವುದೆ ಭಾಗವತ ಜನಪ್ರಿಯ ನಾಗಶಾಯಿ ತವ ದಯ ವಾಗದಲೆ ನರನ ಭವ ರೋಗ ತೊಲಗುವುದೆ 2 ಇಲ್ಲದದು ಇಲ್ಲೆನಿಸು ಅಲ್ಲದ್ದು ಅಲ್ಲೆನಿಸು ಸಲಿಸೆನ್ನನು ತವ ಬಲ್ಲಿದ ಶರಣರೊಳು ಎಲ್ಲದೇವರೆಲ್ಲ ಲೋಕ ಎಲ್ಲನಿನ್ನೊಳಗಭವ ಇಲ್ಲ ನಿನ್ನ್ಹೊರತು ಅನ್ಯ ಸಿರಿ ನಲ್ಲ ಶ್ರೀರಾಮ 3
--------------
ರಾಮದಾಸರು