ಒಟ್ಟು 4 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿವರಾರೆಲೋ ನಿನ್ನ ಅಗಮ್ಯ ಚರಿತ ಚರಣದಾಸರ ಪರಮ ಆನಂದಭರಿತ ಪ ದೇವರುಂಟೆಂಬ ಕೆಲವಾಧಾರಪುಟ್ಟಿಸಿದಿ ದೇವರಿಲ್ಲೆಂಬ ಹಲವು ಆಧಾರ ತೋರಿಸಿದಿ ಜೀವಬ್ರಹ್ವೈಕ್ಯೆಂಬುಪಾಯಗಳ ಸ್ಥಾಪಿಸಿದಿ ಆವರೀತಿಗು ಕಾವದೇವ ನಾನೆಂದಿ 1 ಜೀವವೆ ಮಾಯೆಯೆಂದು ಕಾಯವೆ ಕರ್ಮವೆಂದು ಭಾವಿಗಳ ಕೈಯಿಂದ ಬರೆಸಿದೆಯೋ ನಿಂದು ಜೀವಜೀವರಲಿ ಜಡ ಜೀವ ಬೇರೆನಿಸಿದಿ ಜೀವಜೀವರ ಜೀವ ಚೈತನ್ಯರೂಪ 2 ವೇದ ಸುಳ್ಳೆಂಬ್ಹಲವು ವಾದಿಗಳ ನಿರ್ಮಿಸಿದಿ ವೇದ ಅಹುದೆಂಬ ನಿಜವಾದಿಗಳ ಪುಟ್ಟಿಸಿದಿ ನಾದಬ್ರಹ್ಮವುಯೆಂಬ ಹಾದಿ ರಚಿಸಿದಿ ಸರ್ವಸಾಧನಕೆ ಒಲಿದು ಪ್ರಸನ್ನ ನೀನಾದಿ 3 ಬಗೆಬಗೆಯ ವಚನದಿಂ ಬಗೆಬಗೆಯ ನಿಗಮದಿಂ ಬಗೆಬಗೆಯ ರೂಪದಿಂ ನಿಗವಿಟ್ಟು ಸರ್ವರನು ಬಗೆಗೊಂಡು ಬೆಳಗುವೆಯೊ ಜಗಭರಿತನಾಗಿ 4 ಅವಸಾಧನವೊಲ್ಲೆ ಜಾವಜಾವಕೆ ನಿಮ್ಮ ದಿವ್ಯಸ್ಮರಣೆಯ ಎನ್ನ ಭಾವದೊಳು ನಿಲಿಸಿ ದೇವದೇವರ ದೇವ ದೇವ ಶ್ರೀರಾಮ ತವ ಸೇವಕನೆನಿಸೆನ್ನ ಕಾಯೊ ಕೈಪಿಡಿದು 5
--------------
ರಾಮದಾಸರು
ಬಿಚ್ಚದಿರು.ಬಿಚ್ಚದಿರು ಮುಚ್ಚು ಈ ಬಾಯಿ ಬಿಚ್ಚಿದ ಬಳಿಕದಕೆ ಎಚ್ಚರವೆ ಇಲ್ಲ ಪ ಅಲ್ಲ ಅಹುದೆಂಬುವುದು ಎಳ್ಳಷ್ಟು ಇದಕಿಲ್ಲ ಸುಳ್ಳುಹೇಳುವುದೆಲೊ ಅಳತೆಯೆ ಇಲ್ಲ ಜೊಳ್ಳು ಮಾತುಗಳ್ಹೇಳಿ ಮಳ್ಳು ಮಾಡಿ ಜನರಲ್ಲಿ ಬಲ್ಲವೆನಿಸಿಕೊಂಬ ಸೊಲ್ಲೆ ಹುಡುಕುವುದು 1 ಸಲ್ಲದೀ ಆತ್ಮದ ಇಲ್ಲದ ಸುದ್ದಿಯನು ಎಲ್ಲಿತನಕಲು ಬೇಸರಿಲ್ಲದ್ಹೇಳುವುದು ಅಲ್ಲ ಅಹುದೆಂಬುದನು ಎಲ್ಲಬಲ್ಲಂಥ ಸಿರಿ ನಲ್ಲನ ಪಾದಕ್ಕೆ ಅಲ್ಲೆನಿಸುತಿಹ್ಯದು 2 ಮುಚ್ಚುಮರೆಯಿದಕಿಲ್ಲ ಎಚ್ಚರಮೊದಲಿಲ್ಲ ಕಿಚ್ಚಿನೋಳ್ಬಿದ್ಹೋಗ್ವ ನೆಚ್ಚಿಕಿಲ್ಲ ಕಾಯ ಅಚ್ಯುತ ಶ್ರೀರಾಮನಂ ಮುಚ್ಚಿಭಜಿಸಿ ಭವದುರುಲು ಬಿಚ್ಚಿಸಿಕೊಳ್ಳೊ 3
--------------
ರಾಮದಾಸರು
ಮಾಲೆ ಧರಿಸಿಕೊಂಡೆ ಮಾಧವನೆಂಬ ಮಣಿ ಮಾಲೆ ಧರಿಸಿಕೊಂಡೆ ಪ ಮಾಲೆ ಧರಿಸಿಕೊಂಡೆ ನೀಲಶಾಮನದಿವ್ಯ ಲೀಲೆ ಮೂಲೋಕಕ್ಕೆ ಮೇಲುಮೇಲುಯೆಂಬ ಅ,ಪ ಭವದೂರ ಪಾದವಂದನೆಂಬ ಮುಕುಟ ಧರಿಸಿಕೊಂಡೆ ಮಾದಮರ್ದನನಂಘ್ರಿಸ್ಮರಣೆಂಬ ಕರ್ಣಕುಂಡಲಿಟ್ಟುಕೊಂಡೆ ಭುವನತ್ರಯದ ಮೇಲೆ ಜವನ ನಿರ್ಭಯಕೇಶವನ ದಯವು ಎಂಬ ಭವದೊಳಗೆ ಹೊಕ್ಕು 1 ಜಡಜನಾಭನಚರಣ ದೃಢವೆಂಬ ಮಡಿಯನುಟ್ಟುಕೊಂಡೆ ಕಡಲಶಯನನಡಿಯ ಭಕ್ತೆಂಬ ಕವಚ ತೊಟ್ಟುಕೊಂಡೆ ಪೊಡವಿಗಧಿಕ ಓರ್ವ ಒಡೆಯ ಹರಿ ಅಹುದೆಂಬ ದೃಢನಿಶ್ಚಯದ ಮೇಲ್ಮಾಡಿನೊಳಗೆ ಕೂತು 2 ಅಂಗಜಪಿತನೆಂಬ ಬಂಗಾರ ಕಂಕಣಿಟ್ಟುಕೊಂಡೆ ರಂಗ ಕೃಷ್ಣನೆಂಬ ರತ್ನದ ಉಂಗುರಿಟ್ಟುಕೊಂಡೆ ಮಂಗಲಮಯ ನೀಲಾಂಗ ಶ್ರೀರಾಮನಾಮ ಚಂದ್ರಹಾರ ಹಾಕಿಕೊಂಡು ಶೃಂಗಾರನಾಗಿ ನಿಂತೆ 3
--------------
ರಾಮದಾಸರು