ಖಳರನು ತರಿವಾ ಬಗಳಾಂಬೆಗೆಕಮಲದಾರತಿ ಬೆಳಗಿರೆ ಪ
ಅರಿ ಎಂಬ ಶಬ್ಧವು ಕಿವಿಗೆ ಬೀಳಲುಸರಿದವು ಸರಿದವು ಖಡ್ಗದಿಂ ಕೆಂಗಿಡಿಭರದಿಂದರಿಯನೆ ತುಡುಕಿಯೆ ಮುಂದಲೆತರಿದಳಾಗಲೆ ತಲೆಯ ಬಗಳಾಂಬೆಮುರಿದಳಾಗಲೆ ತಲೆಯ ಬಗಳಾಂಬೆ1
ಕಡಿಯುತ ಅವುಡನು ಅರಿಯನು ದೃಷ್ಟಿಸಿಝಡಿಯುತ ಮುದ್ಗರ ಹಿಡಿದು ನಾಲಗೆಮೃಡಹರಿ ಬ್ರಹ್ಮರು ಅಹುದಹುದೆನೆಹೊಡೆದಳಾಗಲೆ ಅರಿಯ ಬಗಳಾಂಬಪುಡಿಯ ಮಾಡಿದಳರಿಯ ಬಗಳಾಂಬ 2
ಕಾಲಲಂದುಗೆ ಗೆಜ್ಜೆ ಕಂಠಾಭರಣವುಮೇಲೆ ಸರಿಗೆವೋಲೆ ಮೂಗುತಿ ಹೊಳೆಯಲುಲೋಲ ಚಿದಾನಂದ ರೂಪಿಣಿ ಬಗಳೆಯುಪಾಲಿಸಿದಳು ಭಕ್ತರ ಬಗಳಾಂಬಲಾಲಿಸಿದಳು ಭಕ್ತರ ಬಗಳಾಂಬ 3