ಸ್ವಾಮಿ ಅವಧೂತ
ಕಾವ ಕರುಣನೆ ಪೂರ್ಣ ನೀನೆ ಸದೋದಿತ ಧ್ರುವ
ಕರುಣ ದಯದ ಹುದಯ್ಯ ನೀಆಧಾರ
ಶರಣ ಜನರಿಗಹುದಯ್ಯ ನೀಆಧಾರ
ತಾರಿಸುವ ಸ್ವಾಮಿ ಅಹುದಯ್ಯ ನೀ ನಿರ್ಧಾರ
ಪರಮ ದಯಾನಿಧಿ ನೀ ಸುಙÁ್ಞನದ ಸಾಗರ 1
ಅನಾಥನಾಥನಹುದೊ ಪೂರ್ಣ ದೀನಾನಾಥ
ಸನಾಥ ಮಾಡುತಿಹ್ಯ ಶ್ರೀಸದ್ಗುರು ನೀ ಸಾಕ್ಷಾತ
ಅನಾದಿ ನಿಜವಸ್ತು ಅಹುದಯ್ಯ ನೀ ಪ್ರಖ್ಯಾತ
ಮುನಿ ಜನರಿಗೆ ನೀ ಆನಂದ ಸುಪಥ 2
ದೇಶಿಕರ ದೇವನಹುದಯ್ಯ ಕೃಪಾಕರ
ಲೇಸು ಲೇಸಾಗೆನ್ನ ಪಾಲಿಸುವ ನೀ ದಾತಾರ
ಭಾಸುತಿಹ ಭಾನುಕೋಟಿತೇಜ ಮನೋಹರ
ದಾಸ ಮಹಿಪತಿ ಗುರು ನೀನೆ ಸಹಕಾರ 3