ಬಹಳ ದೇಹವ ದಂಡನೆ ಮಾಡಿ ದೇಹ ಘನ ಬಳಲಿಸಿ
ಅಹಿಶಯನನು ನಿನ್ನ ಬೆಂಬಲನಾಗಿಹ ಚಿಂತೆ ಮಾಡಲಿ ಬ್ಯಾಡಾ ಪ
ಅರಿವರ್ಗಗಳು ಕ್ರೀಡಿಸುತಿಹ ಮನದಿ ಧರ್ಮವ ಮಾಡಲಾದೀತೆ
ಪಾಪಿಗೆ ಹಿತವಾದೀತೆ 1
ದುರ್ವಿಕ್ಷಯ ಭುಂಜಿಪ ದುರುಳಗೆ
ಅಸಮ ಫಲಪ್ರದ ಹರಿದಿನ ಮಾಡ್ದರೆ ನರಕ ಬಾಧೆ ಬಿಟ್ಟೀತೆ 2
ಪರವಿತ್ತವಪಹರಿಸಿ ಧರೆಯ ಪ್ರದಕ್ಷಿಣೆ ಮಾಡ್ದರೆ ಗತಿಯಾದೀತೆ
ನರಸಿಂಹವಿಠ್ಠಲನ ಸ್ಮರಿಪ ಸುಜ್ಞಾನಿಗಿ ಬಹುಭಾಗ್ಯ ತಪ್ಪೀತೆ 3