ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೀತೆಯ ಭೂಮಿಜಾತೆಯ ಜಗ-| ನ್ಮಾತೆಯ ಸ್ಮರಿಸಿ ವಿಖ್ಯಾತೆಯ ಪ ಕ್ಷೀರ ವಾರಿಧಿಯ ಕುಮಾರಿಯ ತನ್ನ | ಸೇರಿದವರ ಭಯಹಾರಿಯ || ತೋರುವಳು ಮುಕ್ತಿಹಾರಿಯ ಸರ್ವ | ಸಾರ ಸುಂದರ ಶ್ರೀನಾರಿಯ 1 ಈಶಕೋಟಿಯೊಳ್ ಗಣನೆಯ ಸ್ವಪ್ರ-| ಕಾಶವಾದ ಗುಣಶ್ರೇಣಿಯ || ಈಶಾದ್ಯರ ಪೆತ್ತ ಕರುಣಿಯ ನಿ-| ರ್ದೋಷ ವಾರಿಧಿಕಲ್ಯಾಣಿಯ2 ವಿಜಯವಿಠ್ಠಲನ್ನ ರಾಣಿಯ ಪಂ-| ಕಜಮಾಲೆ ಪಿಡಿದ ಪಾಣಿಯ || ನಿತ್ಯ | ಸುಜನವಂದಿತೆ ಅಹಿವೇಣಿಯ 3
--------------
ವಿಜಯದಾಸ
ರಂಗ ಕೊಳಲನೂದುವ ಮಂಗಳಸ್ವರಕೆ ಮೂಜ-ಗಂಗಳೂ ಮೋಹಿಸುತಿಹವಲ್ಲೇ ನೋಡೆ ಏ ಸಖಿ ಪಗೋಕುಲದಂಗನೆಯರು ಮೈಮರೆದು ತಮ್ಮ ಮನೆ ಕದ |ಹಾಕದೇ ಹರಿಯೆಲ್ಲಿಹನೆಂದರಸುತ ಬಂದರು ||ಗೋ ಕರುವೇನೆಂದೊಬ್ಬಳು ಹಾಕುವಳೆತ್ತಿಗೆ ದಾಳಿ |ನೂಕು ನೂಕಾಗುತ್ತ ಹಲವಂಗನೆರೋಡಿದರು 1ಕಣ್ಣಿಗೆ ಕುಂಕುಮ ಫಣಿಯಲ್ಲಿ ಕಾಡಿಗೆ ಕೆಲವರು |ಬಣ್ಣದ ಸೀರೆಯ ಮಂಡೆಗೆ ಸುತ್ತುತ್ತ ಕೆಲವರು ||ಚಿನ್ನಗೆ ಹಾಲೆರೆವೆವೆಂದು ಗಂಡರ ಪಿಡಿದು ಒಲ್ಲೆ- |ನೆನ್ನೆ ಕೇಳದಲೆ ನೆಲಕಿಕ್ಕುವರು ಕೆಲವರು 2ಹರಿಯ ನೋಡುವ ಭರದಿಂದ ಆಕಳಿವೇಯೆಂದು |ಹರದೇರು ಅತ್ತೇರಿಗೆ ಕುಟ್ಟಿ ಕಣ್ಣಿಯಿಕ್ಕೊರು ||ಒರಲಿದರೆ ನಾವಾಕಳಲ್ಲವೆಂದು ಕೇಳದಲೆ |ತ್ವರದಿ ಮಾಧವನ ನೋಡಬೇಕೆಂದೋಡಿದರು 3ಕಾಲಿಕೆಕಟ್ಟಾಣಿಆಣಿಮೆಂಟು ಪಿಲ್ಯಾ ಸರ ಮಾಡಿ |ಮಾಲೆಯೆಂದು ಹಾಕುವರು ಕೊರಳಿಗೆ ಕೆಲವರು ||ಹಾಲಿಗೆ ಮೂಗುತಿ ಕಾನ ಬಾವುಲಿ ಮೂಗಿಗೆ ತಮ್ಮ |ಬಾಲೆರೆಂದಾಕಳ ಕರುವೆತ್ತಿಕೊಂಡೋಡುವರು 4ಹೇಳಿದರೆ ಮಾತುಕೇಳಿಕಳ್ಳ ಕೃಷ್ಣಾ ಸಿಕ್ಕೆಂದು ಮೈ |ಘಾಳಿಗೊಂಡಾಳುವರಾ ಕೈ ಕಂಭಕೆ ಕಟ್ಟುವರು ||ಕೀಲ ಕಂಕಣ ಬಾಗಿಲ ಬೀಗವೆಂಜೋಡಿಸಿ ಲಕ್ಷ್ಮೀ |ಲೋಲನಂಘ್ರಿಯ ಕಾಣಬೇಕೆಂದೆಲ್ಲರು ಓಡಿದರು 5ಎಲೆ ಯಶೋದೆಯಮ್ಮ ನಿನ್ನ ಮಗ ಮೊನ್ನೆ ನಿಶಿಯಲ್ಲಿ |ಮಲಗಂಟು ಬಿಚ್ಚಿ ಒಲ್ಲೆನೆನ್ನೆ ಕೇಳಾ ಥರವೆ ||ಬಲು ಶಬ್ದೆನೆಂದು ಕೇಳಲತ್ತೆಗೊಂದು ಪರಿಯಿಂದ |ತಿಳಿಸಿದೆನೆಂದೊಬ್ಬಳು ಅತ್ತೆಯ ಮುಂದೆ ಹೇಳುವಳು 6ಬೀದಿಯೊಳ್ ಹೇಳಿದಂತೆ ನಮ್ಮನಿಗೆ ಬಾಯೆಂದೊಬ್ಬಳು |ಮಾಧವನಿವನೆಂದು ತನ್ನ ಪುರುಷಘೇಳುವಳು ||ಆ ದಿನ ನಾವೇಕತ್ರದಲ್ಲಿರೆಗಂಡಬರಲು ಸ್ತ್ರೀ |-ಯಾದಿ ಸೈ ಸೈಯೆಂದೊಬ್ಬಳು ಪತಿಗೇ ಪೇಳುವಳು7ಬತ್ತಲೆ ಕೆಲವರು ಸೀರ್ಯುಟ್ಟವರ್ಕೆಲವರು ಉ- |ನ್ಮತ್ತರು ಕೆಲವರು ಪಾಡುತ್ತಲಿ ಕೆಲವರು ||ನೆತ್ತಿಹಿಕ್ಕುವರು ಕೆಲವರು ಹೂಸಿಕೊಂಡವರು |ತುತ್ತು ಬಾಯೊಳಿಟ್ಟವರೂ ತ್ವರದಿ ಓಡಿದರು 8ಒಂದಾಡುತೊಂದಾಡುವರುನಿಂದುನಿಂದಾಲಿಸುವರು |ಮಂದಿಗಂಜದಲೆ ಹರಿದು ಹರಿದು ಹೋಗುವರು ||ಕಂದಗಳೆತ್ತಿದವರು ಕರುಗಳೆತ್ತಿದವರು |ಚಂದಿರ ವದನೆಯರು ತವಕದಿ ಓಡುವರು 9ಹೆಂಣುಗಳಾ ಆವಾವ ಕೆಲಸದೊಳಿದ್ದಿರ್ಯಾ ಹ್ಯಾಂಗೆ |ಬನ್ನಿರೆನ್ನ ಬಳಿಗೆಂಬಂತೆವೇಣುಕೇಳಿಸುವುದು ||ಪನ್ನಗಶಯನನಾಜೆÕಯಂತೆ ಪ್ರವರ್ತಿಸಿದ ಮೇಲೆ |ಅನ್ಯಾಯವೇ ಸತಿಯರದು ಕೇಳಿರಿ ಕವಿಗಳು 10ಕರಿಸಿಂಹಗಳು ಹುಲಿತುರುತುರುಗಮಹಿಷಿ|ಮರೆದು ವೈರತ್ವ ಹರಿಸ್ವರ ಕೇಳುತಿಹವು ||ಕರಗುತಿಹವು ಕಲ್ಲು, ಸುರರಾಕಾಶದಿ ಪುಷ್ಪ |ಸುರಿಸುತಿಹರು, ಗಂಧರ್ವರು ಪಾಡುತಿಹರು11ಅಂಬುಜಾಕ್ಷಗೆ ಕೆಲವಂಗನೆರು ಆಲಿಂಗಿಸುವರು |ಚುಂಬಿಸುವರು ಕೆಲವರುನಿಂದುಪ್ರಾರ್ಥಿಸುವರು ||ಶಂಬುಪಾಣಿ ಕರುಣಿಸಿ ಇಬ್ಬರಿಗೊಬ್ಬೊಬ್ಬನಾಗಿ |ಹಂಬಲ ಪೂರೈಸುವಂತೆ ರಾಸಕ್ರೀಡೆಯಾಡಲು 12ಕಾಮನಾ ಪೂರ್ತಿ ಮಾಡುತಿರೆ ಹೆಂಗಳೆರು ಇಂಥ |ಸ್ವಾಮಿಯಮ್ಮ ಕೈ ಸೇರಿದ ನೋಡಿರೆಂದ್ಯೋಚಿಸಲು ||ಭಾಮಿನಿಯರಹಂಕಾರ ತಿಳಿದಾಕ್ಷಣವೊಬ್ಬಳ |ಪ್ರೇಮದಿ ಕೊಂಡೊಯ್ದು ಎಲ್ಲರಿಗೆ ಮಾಯವಾದನು13ಬಹುರೂಪದೊಳೊಮ್ಮಿಂದ ಒಮ್ಮೆ ಬಂದೂ ರೂಪವಿಲ್ಲ |ಮಹೀಪಾಲನೇನಾದನೋ ಆವಳನ ಕೊಂಡೊಯ್ದನು ||ಅಹಿವೇಣಿಯರೇ ನಿಮ್ಮ ನಿಮ್ಮ ಗುಂಪಿನೊಳಗೆ ಎ- |ಷ್ಟಿಹಿರೊ ನಾರೆರು ಎಣಿಸಿರೆ ಯಂದಾಳೊಬ್ಬಳು 14ಒಂದೆರಡು ನೂರಿನ್ನೂರೈನೂರು ಸಾವಿರೆಂದೆಣಿಸಿ |ಮಂದಗಮನೆಯೊಬ್ಬಳಿಲ್ಲವಮ್ಮ ನಮ್ಮೊಳೆಂದರು ||ಇಂದ್ರಜಾಲದವಳೇ ಆವನು ಅಂಥ ವಂಚಕನೆ |ಸಂಧಿಸಿತಿಬ್ಬರಿಗೆ ಮುಂದೇನುಪಾಯವೆಂದರು 15ಹರಿಹೋದಕಷ್ಟೊಂದು ಅವಳ ನಾ ವೈದ ದುಃಖೊಂದು |ಸ್ಮರಣೆದಪ್ಪಿ ಗಂಡರೊಡನೆ ಆಡಿದ್ದೊಂದು ||ಸ್ಮರನ ಬಾಣ ಬಾಧೆಯೊಂದು ಬೆರದಿತಿನಿತುಕ್ಲೇಶ|ಹರದೆರಚ್ಯುತನರಸುತವನಹೊಕ್ಕರು 16ಹರಿಒಬ್ಬಳ ಒಯ್ದನು ಕಂಡಿರಾ ಯಿದ್ದಿರ್ಯಾ ಎಂದು |ನರರೆಂಬೊ ಭ್ರಾಂತಿಯಿಂದ ಮರನ ಕೇಳುವರು ||ಸ್ಮರಣೆ ಬಂದಾಗ ವಮ್ಮೆ ಗಿಡ ಕೇಳುತಿಹವೆಲ್ಲೆ |ಹರಿಹರಿ! ಜೀವಿಸುವದೆಂತು ಹೇಳಿರೆಂಬೊರು 17ಅತ್ತ ಎಲ್ಲರ ವಂಚಿಸಿ ಯನ್ನ ರೂಪಾಧಿಕ ನೋಡಿ |ಎತ್ತಿಕೊಂಡು ಬಂದ ರಂಗನೆಂಬೊಳಾಕಿ ಮುದದಿ ||ಸತ್ಯ ಸಂಕಲ್ಪವಳ ಮನತಿಳಿದು ತಿಳಿಯದಂತೆ |ತೊತ್ತಿಗ ನಂದದಿ ಹೆಗಲೊಳಗಿಟ್ಟು ಪೋಗಲು 18ದಣಿದೆ ಹಸಿದೆ ನೀರಡಸಿದೆನೆಂದರವಳ |ಅಣುಗನಂದದಿಂದಿಳಿಸೇರಿಸಿ ಕೊಂಬುವನು ||ಗೊನೆ ಹಣ್ಣು ನಿಲಕದೆಂದರೆ ನೀಡಿ ಕೊಡುತಲಿ |ಘನಸುಖ ಬಡಿಸುತ ದಕ್ಕಿದಂತಿರುವನು 19ಸಾವಿರ ಪ್ರಕಾರಾ ಘೋರಿಸಿದರೂ ನಗುತಲೆ ಇಹ |ಕೇವಲ ದಕ್ಕಿದನೆಂದು ನಿಶ್ಚಯ ತಿಳಿದಳು ||ಮಾವಿರಿಂಚೇಶ ಜಂಭಾರಿಗಳನು ವಂಚಿಸುವಂಥ |ದೇವನು ಈ ನಾರಿ ಅಹಂಕಾರವ ತಾಳುವನೆ20ಸೊಕ್ಕು ಬಂತಿವಳಿಗಿನ್ನು ಶೀಘ್ರ ತಗ್ಗಿಸಬೇಕೆಂದು |ಚೊಕ್ಕ ಮಾವು ಪಿಡಿಸಿ ಅಪ್ರತ್ಯಕ್ಷವಾಗಲಿತ್ತಲು ||ತುಕ್ಕಿ ತುಕ್ಕ್ಯಾರಂಣ್ಯಾ ಹೆಜ್ಜೆ ಪಿಡಿದಿಲ್ಲಿಹ ಅಲ್ಲಿಹ |ರಕ್ಕಸಾರೆನುತ ಬಂದೆಲ್ಲರವಳನು ಕಂಡರು 21ಜಾರೆ ಚೋರೆ ಕುಲ್ಲೆ ಖೂಳೆ ಕುಲಕಂಟಿಕೆನವನೀತ|ಚೋರನೆಲ್ಲಡಗಿಸಿದ್ದೆ ತೋರೆಲೆ ತೋರೆಂದರು ||ಘೋರಪಾತಕಿಯ ಕುಟ್ಟಿರೆಂದು ಕೆನ್ನಿ ಕುಟ್ಟುವರು |ಗಾರುಮಾಡಿದರೆ ಬಟ್ಟಬವಣೆಹೇಳಿದಳು22ಸಮದುಃಖಿಗಳಾಗಿಹರಿಹರಿಯೆಂದೊದರಲು ಈ |ಶ್ರಮ ನೋಡಿ ಪ್ರಾಣೇಶ ವಿಠಲ ಬಂದಾಲಿಂಗಿಸಿ ||ಸುಮನಗಂಧಿಯರೆ ನಿಮ್ಮಹಂಕಾರ ಬಿಡಿರೆಂದು |ಅಮರೇಶಮುಂಚಿನಂತೆಲ್ಲರೊಳಾಡಿದನು 23
--------------
ಪ್ರಾಣೇಶದಾಸರು
ಶ್ರೀ ಮಹಾಲಕ್ಷ್ಮಿ ದೇವಿಯೆ ಪಾಲಿಸೆ ಎನ್ನಶಾಮನಯ್ಯನ ರಾಣಿಯೆ ಪಜಾಣೆ ನಿನಗೆ ಸರಿಗಾಣೆನೆ ಗುಣಮಣಿಮಾಲೆ ಸುಗುಣೆ ಅಹಿವೇಣಿಯೆಜನನಿಅ.ಪನಿಗಮವೇದ್ಯಳೆ ನಿನ್ನನು ಪೊಗಳುವೆ ನಾನುತ್ರಿಗುಣಾಭಿಮಾನಿ ಸ್ತುತಿಪೆನುಬಗೆಬಗೆ ಭಜಿಪೆ ನಿನ್ನನು ಬಂದೆನ್ನ ಮನದಿನಗಧರನ ತೋರೆಂಬೆನುಹಗಲು ಇರಳು ನಿನ್ನ ಬಗೆ ಬಗೆ ಸ್ತುತಿಪರಪಾದ-ಗಳಸೇವಿಪ ಪರಮಾನಂದದಮಿಗೆ ಸೌಭಾಗ್ಯವ ಕರುಣಿಸು ಬೇಗದಿಸುದತಿಮಣಿಯೆಹರಿಪಾದಯುಗ ತೋರೌ1ಭಕ್ತವತ್ಸಲನ ರಾಣಿಯೆ ಭಜಿಸುವೆ ನಿನ್ನಮತ್ತೆ ಮಾಧವನ ಪಾದವಭಕ್ತಿಂದ ಭಜಿಪ ಧ್ಯಾನವÀ ಕೊಟ್ಟು ಕಾಪಾಡೆಸತ್ಯ ಮೂರುತಿಯ ದೇವಿಯೆಉತ್ತಮ ಭಕ್ತರಿಗಿತ್ತ ವರಗಳನುಮತ್ತೆ ಕೇಳಿಮನ ತೃಪ್ತಿಯ ತಾಳುತಚಿತ್ತಜಪಿತನೊಳು ಭಕ್ತಿಮಾಡುವ ಬಗೆಇತ್ತು ಪಾಲಿಸು ಸರ್ವೋತ್ತಮನರಸಿಯೆ 2ಪದ್ಮಸಂಭವೆ ಪಾಲಿಸು ಪದ್ಮಾಕ್ಷಿ ನಿನ್ನಪದ್ಮನಾಭನ ತೋರಿಸುಪದ್ಮನೇತ್ರೆಯೇಲಾಲಿಸು ಪಾಪವಹರಿಸುಶುದ್ಧಮನವ ಮಾಡಿಸುಪದ್ಮ ಸರೋವರ ಮಧ್ಯದಿ ಜನಿಸಿದಪದ್ಮದೊಳುದಿಸಿದ ಪದ್ಮಾವತಿಯೆ ಹೃ-ತ್ಪದ್ಮದಿ ಕಮಲನಾಭ ವಿಠ್ಠಲನಪಾದತೋರಿಉದ್ಧರಿಸೆನ್ನ ಪ್ರಸಿದ್ಧಳೆಜನನಿ3
--------------
ನಿಡಗುರುಕಿ ಜೀವೂಬಾಯಿ