ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾರತೀ ನೀ ಪರಿಪಾಲಿಸೇ ಪ ನಾರಿ ಶಿರೋಮಣಿ | ನಿರುತ ನಿನ್ನಯ ಪದವಾರಿಜ ಭಕುತಿಯ | ಗಾರು ಮಾಡದೆ ಕೊಡು ಅ.ಪ. ಉರು ವಿಕ್ರಮನಲಿ | ವರ ಭಕ್ತ್ಯುದಯಕೆಪರಮ ಕಾರಣಳೆಂ | ದರಿತು ನಿನ್ನ ಪದ |ಸರಸಿಜ ಭಜಿಸುವೆ | ಪರಮ ಕೃಪಾಕರೆತ್ವರ ಹರಿ ಭಕುತಿಯ | ಪಾರಿಪಾಲಿಪುದು 1 ವಿಪರೀತದ ಮತಿ | ಅಪಹರಿಸುತ ಬಲುಕೃಪೆಗೈದೆನ್ನಲಿ | ಅಪ ವರ್ಗದ ಹರಿವಿಪಗಮನನ ಸ | ದ್ದಪರೋಕ್ಷವ ಕೊಡುವಿಪ ಅಹಿಪತಿ ನುತೆ | ಅಪ್ರತಿ ಮಾತೆಯೆ 2 ಭೂವಲಯದಿ ನಿನಗಾವರಿಲ್ಲ ಸಮನೀ ವೊಲಿಯದಲಿ | ನಿನ್ನಾವರ ಕಾಣೆನುಮಾ ವಿನೋದಿ ಗುರು | ಗೋವಿಂದ ವಿಠಲನಪಾವನ ಪದವನು | ತೀವರ ತೋರಿಸು 3
--------------
ಗುರುಗೋವಿಂದವಿಠಲರು
ಭಾರತೀ ಭವಹಾರಿಯೆ | ಭಕ್ತರಪ್ರಿಯೆ | ಭಾರತೀ ಭವಹಾರಿಯೇ ಪ ಈರೈದು ಇಂದ್ರಿಯಗಳುಗಾರು | ಮಾಡದಂತೆ ಸಾಕಾರವಾಗಿ ಪಾಲಿಸು ಅ.ಪ. ಮತಿವಂತನ ಮಾಳ್ಪುದು | ಇದಕೆ ನಿನ್ನ | ಪತಿಯ ಈಗಲೆ ಕೇಳ್ವುದು | ಕ್ಷಿತಿಯೊಳು ಹೀನರ ಸ್ತುತಿಸಲರಿಯೆ | ಮು- ಕುತಿ ಮಾರ್ಗವ ತೋರಿ ಭಕುತಿ ಬೇಗ ಒದಗಿಸು 1 ಮಹತ್ತತ್ವದಭಿಮಾನಿ ನೀ | ಕಲಿರಹಿತೆ | ಅಹಿಪತಿ ಅಪ್ಪ ಖಗಪ ಜನನೀ || ಮಹಾಪ್ರಮಾಣು ವ್ಯಾಪುತೆ ಸರ್ವಜೀವರ | ದೇಹದಲಿ ನಿಂದು ಶ್ರೀಹರಿ ಆರಾಧನೆಯ ರಹಸ್ಯವ 2 ಶರಣು ಶರಣು ಗುಣಮಣಿ | ಚಂದ್ರಪ್ರಕಾಶೆ | ಪಾವನಿ ಕಲ್ಯಾಣಿ ತರತಮ್ಯ ಭಾವದಿ || ಅರಿದು ಕೊಂಡಾಡುವ ಚಿಂತೆ ಇರಲಿ | ವಿ- | ಸ್ಮರಣೆಯಾಗದಂತೆ ವಿಜಯವಿಠ್ಠಲನ್ನ ನಿರುತ ಪೊಂದಿಸು 3
--------------
ವಿಜಯದಾಸ
ಲಕ್ಷ್ಮೀದೇವಿ 13 ಭಾಗ್ಯವ ಕೊಡು ತಾಯೆ ಪ ಭಾರ್ಗವಿ ನಿನ್ನಯ| ಪದಯುಗಕೆರಗುವೆ| ಭಾಗ್ಯದ ಲಕ್ಷ್ಮೀ ಸೌ| ಭಾಗ್ಯದ ನಿಧಿಯೇ ಅ. ಪ ಸಾಗರಸಂಜಾತೆ| ದೇವಿ| ನಾಗವರದಪ್ರೀತೆ || ಯೋಗಿಜನಾವಳಿ| ಮಾನಸಪೂಜಿತೆ | ಅಗಣಿತಗುಣಮಣಿ| ತ್ರಿಜಗದ್ವಂದಿತೆ 1 ಸುರುಚಿರಸುಮಗಾತ್ರೆ | ದೇವಿ| ಹಿಮಕರನಿಭವಕ್ತ್ರೆ || ಕಿನ್ನರ | ಸುರಮುನಿ ಪೂಜಿತೆ | ಕಾಮಿತವೀಯುವ || ಕರುಣಾಕರೆಯೆ 2 ಜನನಿಯೆ ನಿರತವು ನೀ | ಪ್ರೇಮವ | ನಿರಿಸುತಲೆನ್ನೊಳು ನೀ | ಕನಕದ ವೃಷ್ಟಿಯ | ಕರೆಯುತಲನುದಿನ | ಮನ್ಮನದಿಷ್ಟವು | ಸಿದ್ಧಿಸುವಂದದ 3 ಅಹಿಪತಿ ಶಯನನಿಗೆ | ಮೋಹದ | ಮಹಿಷಿಯು ನೀನಾಗೆ || ಮಹಿಮಾಕರೆ ನೀ | ಮಹಿಯೊಳಗನಿಶವು | ಇಹಪರ ಸುಖವನು | ಭವಿಸುವ ತೆರದಾ 4 ಅಜಭವಸುರವಿನುತೆ | ದೇವಿ | ಸುಜನಾವಳಿಪ್ರೀತೆ || ಗಜವಾಹಿನಿ ವರ | ಮದಗಜಗಮನೆಯೆ | ವಿಜಯವಿಠಲಪ್ರಿಯೆ ಶ್ರೀ ಗಜಲಕ್ಷ್ಮಿಯೆ 5 ಶುಭ | ಮಂಗಳೆ ಸುಪವಿತ್ರೆ || ಮಂಗಳಾಂಗಿ ನರ | ಸಿಂಗನ ರಮಣಿಯೆ | ಮಂಗಳಕಾರ್ಯಗ | ಳನುದಿನವೆಸಗುವ 6 ಪಂಕಜದಳನೇತ್ರೆ | ದೇವಿ | ಕಿಂಕರನುತಿಪಾತ್ರೆ || ಶಂಖಚಕ್ರಾಂಕಿತ | ಶ್ರೀ ವೈಕುಂಠನ |ಅಂಕದಿ ಮೆರೆವಖಿ | ಳಾಂಕ ಮಹಿಮಳೇ 7
--------------
ವೆಂಕಟ್‍ರಾವ್
ಸರ್ವವು ಹರಿಗೊಪ್ಪಿಸಿದರೆ ನಿಶ್ಚಿಂತೆ ಗರ್ವದಿಂದಲಿ ವ್ಯರ್ಥ ಕೆಡದಿರು ಭ್ರಾಂತೆ ಪ. ಲೇಶ ಸ್ವತಂತ್ರವನಿತ್ತದ ನಂಬೀ ಶಾಭಿಮಾನದಿ ಮಾಡುವ ಡೊಂಬಿ ದೋಷಗಳಿಂದಾಹ ಫಲವೆ ನೀನುಂಬಿ ವಾಸುದೇವನ ಮೂರ್ತಿಯನೆಂತು ಕಾಂಬಿ 1 ಹಸುತೃಷೆ ನಿದ್ರೆ ತಡೆಯಲೊಲ್ಲಿ ಯಾಕೆ ದಶಕರಣಗಳು ದುರ್ವಿಷಯದಿ ನೂಕೆ ವಶವಿಲ್ಲದಲೆ ಬಿದ್ದು ಬಳಲುವಿ ಯಾಕೆ ವಸುದೇವ ಸುತನ ಮರೆಯದಿರು ಜೋಕೆ 2 ಸತ್ಯ ಸಂಕಲ್ಪನಲ್ಲದೆ ಕರ್ತನಾವ ತತ್ವೇಶರರಿತು ಕರ್ಮವ ಮಾಳ್ಪ ಸೋವ ನಿತ್ಯ ನೀ ವರಿತ ಹಮ್ಮಮತೆಯ ಭಾವ ಹತ್ತದಂತಿರೆ ಕಾವ ಕರುಣಾಳು ದೇವ 3 ಒಡೆಯರಿಲ್ಲದೆ ಪೋದ ವೃಕ್ಷದ ಫಲವ ಬಡಿದು ತಿಂಬುವರು ಕಂಡವರೆಲ್ಲ ನೋಡು ಕರ್ಮ ಮಡದಿ ಮೊದಲುಗೊಂಡು ಕಡಲಶಯನಗರ್ಪಿಸುತ ಕಷ್ಟ ದೂಡು 4 ವಹಿಸು ಭಾರವ ಲಕ್ಷ್ಮೀಕಾಂತನ ಮೇಲೆ ಇಹರಹರಾದರದಿಂದ ತಲ್ಲೀಲೆ ಮಹಿಮೆಯ ಪೊಗಳಿ ತೂಗಾತನೂಯ್ಯಾಲೆ ಅಹಿಪತಿ ಗಿರಿರಾಜ ಎತ್ತುವ ಮೇಲೆ 5
--------------
ತುಪಾಕಿ ವೆಂಕಟರಮಣಾಚಾರ್ಯ