ದಾತ ದೀನನಾಥ ಧ್ಯಾನದಾಯಕ ಜಾನಕೀ ಪ್ರೀತ ಪ
ಬಹುಕುಂದುನಿಂದೆ ಸರ್ವ ಅಹುದು ಅಲ್ಲ ನಿನ್ನದಭವ
ಅಹಿತಸುಖದ ಪ್ರೇಮಬಿಡಿಸಿ ದಹಿಪ ಭವದ ಬಾಧೆ ಗೆಲಿಸು 1
ಬಂದ ಬಂಧ ಬಯಲುಮಾಡಿ ಕಂದನೆಂದು ಕರಪಿಡಿದು
ತಂದೆ ನಿನ್ನ ಪರಮಧ್ಯಾನಾನಂದ ಪಾಲಿಸಿ ಪೋಷಿಸೆನ್ನ 2
ಕಾವದೇವ ನೀನೆ ಪತಿತಪಾವನ ತ್ರಿಜಗಸೂತ್ರಧಾರಿ
ಭಾವಜಪಿತ ಶ್ರೀರಾಮ ನಿಮ್ಮ ಸೇವಕನೆನಿಸಿ ಸಲಹು ಸತತ 3