ಪಾಲಿಸೆಮ್ಮನು ವೆಂಕಟೇಶಾ ನಂಬಿದೆ ನಿನ್ನ ಪಾದಾ
ಸಲಹೋ ಗಿರೀಶಾ ಪಾಲಿಸು ಪನ್ನಗಾ ಚಲವಾಸಾ
ಪಾಲಿಸುವ ನ್ನ ಸರ್ವೇಶಾ ಪ
ಅನುದಿನ ಕೊಂಡಾಡುವೆನಾ
ಪತಿತ ಪಾವನ ನೀನೇಗತಿಯೆಂದು ನಂಬಿದೆ
ಸನ್ಮತಿಯ ಪಾಲಿಸು ದೇವಾ ಅಹಿಗಿರಿ ನಿಲಯಾ 1
ಕರಣಶುದ್ಧನ ಮಾಡಿ ಕರೆದುಕೋ ಯನ್ನನು
ಕರುಣಾಕರ ವೆಂಕರಾಯಾ ಜೀಯಾ2
ಅಗಣಿತ ಸರಿಯಾರು ನಿನಗೇ ಮೂಲೋಕದ ದೊರೆಯೇ 3
ಕರೆಕರೆ ಸಂಸಾರದೀ ಕೊರಗುತ್ತ ಮರುಗುತ್ತಲಿಹೆ ಭರದೀ
ಕಣ್ದೆರೆದು ನೋಡೆಮ್ಮನು ಕನಕಾದ್ರಿಗೊಡೆಯಾ4
ಅರ್ಥಿಯಿಂದಲಿ ನಿನ್ನ ಬಲು ಪರಿಯಿಂದಲಿ ನುತಿಪೆನಾ
ಸತ್ಯ ಮೂರುತಿ ನೀನೆ ಹತ್ತಿರ ಕರೆದು ಸಲಹೋ 5
ಹಿಂದೆ ಪ್ರಹ್ಲಾದನ ನುಡಿಯಾ ಕೇಳಿ ನೀ ಕಂಬದಿಂದೊಡೆದು ಬಂದೆ
ಅಂಧಕಾರದಿ ಮುಳುಗಿ ಮುಂದೆ ಕಾಣದಲಿರುವೆ ಒಡೆಯ
ಇಂದಿರೆ ರೆಮಣಾ 6
ವರವ ಕೊಡುವೇ
ಇಷ್ಟಾರ್ಥಗಳ ಕೊಡುವೆ ವೆಂಕಟವಿಠಲಾ 7