ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮರಾಮೆನ್ನಿರೋ ಮುಖ್ಯ ತಾ ಕಾರಣ ನೇಮದಿಂದಾಯಿತು ಅಹಲ್ಯೋದ್ದರಣ ರೋಮರೋಮಕೆ ತಾ ಪ್ರೇಮ ಬಾಹಗುಣ ನಾಮಸ್ಮರಿಸಿ ದಶರಥಾತ್ಮಜನ 1 ಒಮ್ಮೆ ಸ್ಮರಿಸಿರೊ ರಾಮರಾಮೆಂದು ತಾ ಸುಮ್ಮನೆ ಬಾಹುದು ಸಾರದ ಅಮೃತ ಸಂಜೀವ ತಾ ಝಮ್ಮನೆ ಹಾದಿಮಾಡಿತು ಸಮುದ್ರ ತಾ 2 ರಾಮರಾಮೆನ್ನಲು ಸಾಮರಾಜ್ಯಹುದು ನೇಮದಿಂದೆನ್ನಿರೊ ಶ್ರಮ ನೀಗೋಗುದು ನಾಮ ಕೊಂಡಾಡಲು ರಾಮನಂತಾಹುದು ಸುಮ್ಮನೆಯಾದರೆ ತಾಮಸ ಬಾಹುದು 3 ರಾಮರಾಮೆಂದರೆ ಬ್ರಹ್ಮರಾಕ್ಷಸ ತಾ ಸುಮ್ಮನೆ ಒಡಿಹೋಗುದು ತಾತ್ಕಾಲತಾ ನಾಮ ಸೇವಿಸಲು ಸುಮ್ಮಲ್ಹೊಳೆದು ತಾ ಝಮ್ಮನೆ ಬಾಹುದು ಭಾಗ್ಯ ಕೈಕೊಟ್ಟು ತಾ 4 ರಾಮನಾಮವೆ ತಾ ಪಾಪಕೆ ತಾ ನಾಮ ತೇಲಿಸಿತು ನೀರೊಳು ಪರ್ವತ ನೇಮದಿಂದಾದರ ಭಕ್ತರರಹುತಾ ಸೀಮಿ ಕೈಕೊಟ್ಟಿತು ಭಕ್ತಗೆ ಶಾಶ್ವತ 5 ನಾಮವೆ ಕಪಿಕುಲವ ತಾರಿಸಿತು ಸೋಮಶೇಖರಗೆ ತಾನೆ ಪ್ರಿಯಾಯಿತು ಗ್ರಾಮನಂದಿಯಲಿ ನೇಮಪೂರಿಸಿತು ರೋಮರೋಮೆಲ್ಲ ಭರತಗ ಸುಖವಾಯಿತು 6 ಸ್ವಾಮಿ ಶ್ರೀರಾಮನಾಮ ಸುಅಮೃತ ಕಾಮಪೂರಿಸುವ ಕಾಮಧೇನುವೆ ತಾ ನೇಮದಿಂದಾಗುವ ಮಹಿಪತಿಗಿಂತ ರಾಮರಾಜ್ಯವೆ ಎನ್ನೊಳಗಾಗೆದ ತಾ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು