ಎಲ್ಲಿರುವುದೋ ಸಿರಿವಲ್ಲಭನೆ ನಿನ
ಗಲ್ಲದ ಕಾರ್ಯಗಳು ಪ
ಕಲ್ಲಾಗಿದ್ದ ಅಹಲ್ಯಯೆ ನಿಮಿಷದಿ
ಚಲ್ವೆಯ ಮಾಡಿದ ನಲ್ಲ ತ್ರಿಭುವನದಿ ಅ.ಪ
ಶರಧಿಯೆ ವಾಸವು ಗರುಡನೆ ವಾಹನ
ಉರಗಪತಿಯೆ ನಿನ್ನ ಪರಿಯಂಕ
ಶರಧಿ ಕುಮಾರಿಯು ವರರಮಣಿಯು ಸುರ
ವೀರರು ನಿನಗೆ ಕಿಂಕರರಾಗಿರಲು 1
ಕಂಬದಿ ಜನಿಸಿದೆ ಅಂಬಿಗರವಳನು
ಸಂಭ್ರಮದಲಿ ನಿನ್ನ ಜನನಿಯೆನಿಸಿದೆ
ಅಂಬುಜ ಮಿತ್ರನ ತನಯಗೆ ಮರುತನ
ಬೆಂಬಲವರಿಯುತ ಉಳಿಸಿದೆ ಗೆಲಿಸಿದೆ 2
ಅಮಿತ ಕಾರ್ಯಗಳ
ಕ್ರಮದಲಿ ನಡಿಸಿದೆ ವಿಮಲ ತನೋ
ಸುಮನಸರೊಡೆಯನೆ ಕ್ಷಮಿಸಿ ಎನ್ನಯ ಮೋಹ
ತಿಮಿರವ ತೊಲಗಿಸೊ ಸುಮನ ಪ್ರಸನ್ನನೆ 3