ವಿಘ್ನೇಶಾ - ಪಾಲಿಸೊ - ಎನ್ನ - ವಿಘ್ನೇಶಾ ಪ
ವಿಘ್ನೇಶ ಪಾಲಿಸೊ ಯೆನ್ನಾ | ದೋಷಭಗ್ನವ ಗೈಸಯ್ಯ ಮುನ್ನಾ | ಆಹಲಗ್ನವಾಗಲಿ ಯೆನ್ನ ಮನ ಆದೀಂದ್ರಿಯಗಳುಯಜ್ಞೇಶ ಶ್ರೀಹರಿ ಪದದ್ವಯ ವನಜದಿ ಅ.ಪ.
ಶಿರಿವ್ಯಾಸ ಹೃದ್ಗತ ಅರ್ಥಾ | ನೆರೆಅರಿತು ಲಿಖೀಸಿದೆ ಗ್ರಂಥಾ | ನೋಡುಕರುಣಾಳು ಹರಿಕೃಪಾ ಪಾತ್ರಾ | ಬಾಗಿಶರಣೆಂಬೆ ತಿಳಿಸ್ಯದರರ್ಥಾ | ಅಹತಾರಕಾಂತಕನನುಜ | ವೀರ ವೈಷ್ಣವ ನಿನ್ನಪರಮಾನುಗ್ರಹವನ್ನ | ಕರುಣಿಸಿ ಕಾಯೆನ್ನ 1
ಚಾರುದೇಷ್ಣನ ನಾಮದಲ್ಲೀ | ಅವತಾರ ಮಾಡಿದೆ ರುಕ್ಮಿಣೀಲಿ | ಸಿರಿಅರಸನಾಜ್ಞೆಯ ಪೊತ್ತು ಅಲ್ಲೀ | ದೈತ್ಯದುರುಳರ ತರಿದ್ಯೋಧುರದಲ್ಲೀ | ಅಹಧರೆಯ ಭಾರವ ನಿಳುಹಿ | ಮೆರೆದಂಥ ಗುರುವರಪರಮ ಕಾರುಣ್ಯದಿ | ಹರಿಸೆನ್ನ ಭವತಾಪ 2
ಶೇಷಶತ ದೇವೋತ್ತಮಾ | ಬಾಪುಶ್ರೀಶನ ನಾಭಿಯೆ ಧಾಮಾ | ವಿಶ್ವೋಪಾಸಕ ಖೇಶ ನಿಸ್ಸೀಮಾ | ಪ್ರಾಣಾವೇಶಯುತನೆ ಗುಣಧಾಮಾ | ಅಹಮೂಷಕ ವರವಾಹ ಭೇಶ ಗರ್ವಹರಶ್ರೀಶನ್ನ ಹೃದಯಾವ | ಕಾಶದಲಿ ತೋರೊ 3
ಪರಿ | ಶುದ್ಧ ಭಕ್ತಿಯನಿತ್ತು 8
ಸಿರಿ ರಮಣನಾ | ಗುರು ಗೋವಿಂದ ವಿಠಲಾಭಿಧನ್ನಾ | ನಿಲ್ಲಿಸಿಅವಿರತವನ ಧ್ಯಾನವನ್ನಾ | ಆಹಗೈವಂಥ ಸೌಭಾಗ್ಯ | ಪಾಲಿಸೊ ವಿಘ್ನೇಶಶ್ರೀವರನಂಘ್ರಿ ಸರೋಜ | ಭೃಂಗನೆ ಕರುಣೀ 5