ಯಜನವಾಗಲಿ ನಾನು ಭುಜಿಸುವುದು ಎಲ್ಲ ಪ
ಅಜಪಿತನೆ ಅದರ ಅನುಸಂಧಾನವನು ಅರಿಯೆ ಅ.ಪ
ದೇಹವೆಂಬುದೆ ಯಜ್ಞಶಾಲೆಯಾಗಿ
ಮಹಯಜ್ಞಕುಂಡವು ಎನ್ನ ವದನವಾಗಿ
ಆವಹನೀಯಾಗ್ನಿಯು ಮುಖದಲ್ಲಿ ಹೃದಯದೊಳು
ಗಾರ್ಹಸ್ಪತೀ ದಕ್ಷಿಣಾಗ್ನಿಯು ಸುನಾಭಿಯಲ್ಲಿ 1
ಅರಿ ಪಂಚಾಗ್ನಿಯೊಳು
ಆಕ್ಷಣದಿ ಪ್ರಾಣಾದಿ ಪಂಚರೂಪಗಳು ಹೋತಾಉದ್ಗಾತಾದಿ
ಋತ್ವಿಕ್ಕುಗಳಾಗಿ ನಿಂತಿಹರೆಂದು2
ಆಹುತಿಯ ಕೊಡತಕ್ಕ ಶೃಕಶೃಕ್‍ಶೃವಗಳು ಬಾಹುಗಳು
ಇಹಭೋಜ್ಯವಸ್ತುವೆಲ್ಲ ಆಹುತಿಯು
ದೇಹಗತ ತತ್ವರು ಪರಮಾತ್ಮ ಬ್ರಾಹ್ಮಣರು
ಜೀವ ದೀಕ್ಷಿತನು ಬುದ್ಧಿತತ್ಪತ್ನಿ 3
ಅಹಂಮಮತಾದಿ ಅರಿಷಡ್ವರ್ಗಗಳು
ವುಹಯಜ್ಞದ ಯೂಪಸ್ಥಂಭದ ಪಶುಗಳು
ಅಹರಹ ಬಹ ನೀರಡಿಕೆಯು ಕುಡಿವನೀರೆಲ್ಲವು
ಯಜನಕಾರ್ಯದ ಮಧ್ಯ ಪರಿಷಂಚಾಮಿ4
ಇಷ್ಟಾದರನುಸಂಧಾನವನೆ ಕೊಡುಕಂಡ್ಯ
ಶ್ರೇಷ್ಠಮೂರುತಿ ಶ್ರೀ ವೇಂಕಟೇಶ
ನಿಷ್ಠೆಯೆನ್ನೊಳಗಿಲ್ಲ ಉರಗಾದ್ರಿವಾಸವಿಠಲ
ಹೊಟ್ಟೆಹೊರೆವುದು ನಿನಗೆ ತುಷ್ಟವಾಗಲಿ ದೇವ 5