ಅದು ನಿರಾಲಂಬ ಅದು ನಿರಾಲಂಬಅದು ನಿರಾಲಂಬ ಕೇಳದು ನಿರಾಲಂಬ ಪ
ತನು ಹಂಗು ಇಲ್ಲದೆ ಮನ ಹಂಗು ಇಲ್ಲದೆತನಗೆ ತಾನಿಹುದದು ನಿರಾಲಂಬ 1
ಬುದ್ಧೀಂದ್ರಿಯಕೆ ಅತ್ತ ಅಹಂಕಾರಕೆ ಅತ್ತಸುದ್ದಿಲ್ಲದಹುದದು ನಿರಾಲಂಬ 2
ಇಂದ್ರಿಯಕೆ ನಿಲುಕದೆ ಇಂದ್ರಿಯಕೆ ಸುಖಿಸದೆಇಂದ್ರಿಯಗಳರಿಯದುದು ನಿರಾಲಂಬ3
ಅರಿವುದು ಕಾಣದೆ ಮರೆವುದುತೋರದೆ ಅದು ಚಿದಾನಂದ ಅದು ನಿರಾಲಂಬ 4
ಬಹಿರಂತಲ್ಲದೆ ಬೇರೆಂಬುದಿಲ್ಲದೆಮಹಾ ಬೆಳುದಿಂಗಳದೆ ನಿರಾಲಂಬ 5