ಪರಿ ನೆಲಸಿದೀ ಏ ಸ್ವಾಮಿ
ಪರಿ ನೆಲಸೀದಿ ಏಸುಪರಿ ನೆಲಸೀದಿ
ದಾಸಜನ ಹೃದಯದಿ ಭೂಸ್ವರ್ಗ ಪಾತಾಳ
ಬ್ಯಾಸರ ಮಾಡಿದಿ ಪ
ಎಸೆವ ಚಂಚಲ ಶಿರಿಯು ತವರ್ಕಣ್
ಮಸಕು ಮಾಡಿದಳೇನೋ
ಬಿಸಜಸಂಭವ ವೇದಪಠಣದಿ
ಕುಶಲ ನುಡಿಯನೇನೋ
ಅಸ್ವಧಿಪ ಪ್ರಾಣ ಸೊಸಿಯ ವಾಣಿಯು
ಸ್ವಸುತೆ ಭಾರತೀ ಉಸುರಿಬಿಟ್ಟಳೇನೋ 1
ಮುಪ್ಪೊಳಲುರಿಗಾನು ಪೌತ್ರನು ವೊಪ್ಪುವ ಮೈಗಣ್ಣಾ
ತಪ್ಪದೆ ಸೇವಿಸುವ ಸುಮನಸರಪ್ಪಣಿತ್ತರೇನೋ
ತಪ್ಪದಾಸರನ ಮುಗಿಪ್ಪ ಗರುಡ ಶೇಷ-
ರೊಪ್ಪಿಗಿಯಿಲ್ಲದೆ ತಪ್ಪಿಸ್ಯೋಡಿ ಬಂದ್ಯಾ 2
ಸುರಲೋಕವಾಸಾವು ಶ್ರೀಹರೆ ಪರಮಸೌಖ್ಯವಲ್ಲೆ
ಸುರತರುಧೇನುಗಳು ನಿನಗೆ ತಾವ್ ಕೊರತೆ ಮಾಡಿದವೇನೋ
ಸುರಮುನಿಗಂಧರ್ವರ ಗಾಯನ ಬಿಟ್ಟು
ಸರಸವೇನು ಕಂಡಿ ನರಸಿಂಹವಿಠಲ3