ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಮಂಗಳೂರು ಉಮಾಮಹೇಶ್ವರ ದೇವರು) ಚಂದ್ರಚೂಡನಿವನ್ಯಾರೆ ಹೇಳಮ್ಮ ಇಂದ್ರಾದಿವರ ಮನೋ ಮಂದಿರ ನಮ್ಮ ಪ. ಭಾಲಲೋಚನ ಪಂಚತತ್ವ ವಿವೇಚನ ನೀಲಕಂಧರನಿವನ್ಯಾರೆ ಹೇಳಮ್ಮ ಸಾಲಾಗಿ ನಿಲುವ ದಿಕ್ಪಾಲ ಗಣದಿ ಕ- ಟ್ಟಾಳುಗಳಿರವ ಸುಶೀಲ ಕಾಣಮ್ಮ 1 ಭಸ್ಮೋದ್ಧೂಳಿತ ವಿಗ್ರಹ ವಿಶದ ಮಂ- ದಸ್ಮಿತಮುಖನಿವನ್ಯಾರೆ ಹೇಳಮ್ಮ ವಿಸ್ಮರಣೆಗಳೆಂದಿಗೀಯದೆ ಪಾಲಿಪ ಅಸ್ಮದ್ಗುರುವಂಬಿಕೇಶ ಕಾಣಮ್ಮ 2 ಉಮ್ಮೆಯನೊಡಗೊಂಡು ವುಛ್ರಯದೋರುತ ನಮ್ಮಲ್ಲಿ ದಯವಾದನ್ಯಾರೆ ಹೇಳಮ್ಮ ಬೊಮ್ಮನ ಪೆತ್ತ ಭಕ್ತಾಧೀನ ಶೇಷಾದ್ರಿ ತಿಮ್ಮಪ್ಪರಾಜನ ಮೊಮ್ಮಕಾಣಮ್ಮ 3
--------------
ತುಪಾಕಿ ವೆಂಕಟರಮಣಾಚಾರ್ಯ
ವಾದಿರಾಜ ಅಸ್ಮದ್ಗುರು ವಾದಿರಾಜ ಪ ವಾದಿರಾಜ ತವ ಪಾದಕಮಲಕಭಿ ವಾದನ ಮಾಳ್ಪೆ ಸಮೋದವಿತ್ತು ಕಾಯೊ 1 ಸಾರಿದರಿಗೆ ಕಲ್ಪ ಭೂರುಹ ದಂತೆ ಮ ನೋರಥ ಸಲಿಸುವ ಸೂರಿಗಳರಸೇ 2 ಭೇದ ಪಂಚಕವನು ಸಾಧಿಸಿ ಕುಮತಕು ವಾದಿಗರ್ವಾದ್ರಿ ವಿಭೇದನ ಗೈದೆ 3 ದೇಶಿಕವರ್ಯ ವಾಗೀಶ ಕುವರನೆ ಕ್ಲೇಶ ಹರಿಸು ಅಘನಾಶ ಗೈದು 4 ಸಿರಿ ಜಗನ್ನಾಥವಿಠಲನ ಸುಗುಣಗಳನುದಿನ ಪೊಗಳಿ ಹಿಗ್ಗುವೊ 5
--------------
ಜಗನ್ನಾಥದಾಸರು
ವಿಶೇಷೆÀ ಸಂದರ್ಭಗಳ ಹಾಡುಗಳು 1. ಶ್ರೀರಂಗ ಮಹಾತ್ಮ್ಯಮ್ (ಶ್ರೀರಂಗದ ವಿವಿಧ ಉತ್ಸವಗಳನ್ನು ಕುರಿತ ಕೀರ್ತನೆಗಳು) 29 ಶರಣು ಶರಣು ಶ್ರೀಪರಮಪುರುಷಗೆ ಶರಣು ವರಲಕ್ಷ್ಮೀದೇವಿಗೆ ಶರಣು ಶಠಕೋಪಾದಿಮುನಿಗಳಿಗೆ ಶರಣು ಅಸ್ಮದ್ಗುರುವಿಗೆ ಪ ಶರಣು ತುರಂಗಮುಖನಿಗೆ ಶರಣು ಹಂಸಾವತಾರಗೆ ಮತ್ಸ್ಯ ಕೂರ್ಮ ವರಾಹಗೆ ಶರಣು ನರಸಿಂಹರೂಪಿಗೆ 1 ಶರಣು ವಾಮನ ಭಾರ್ಗವರಾಮಗೆ ಶರಣು ರಾಮ ಬಲರಾಮಗೆ ಶರಣು ಶ್ರೀಕೃಷ್ಣ ಕಲ್ಕಿರೂಪಗೆ ಶರಣು ಕರುಣಾಳು ರಂಗಗೆ* 2
--------------
ಯದುಗಿರಿಯಮ್ಮ