ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದಿಯಾತಕೋ ಈ ಭವದೊಳು | ನೊಂದಿಯಾತಕೋ ನೀನೊಂದನರಿಯೆ || ಬಂದಿಯಾತನು ನೀ ಮತಿಮಂದನಾಗದೆ | ಗತಿ ಮುಂದೇನೆಂದು ತಿಳಿಯದಲೆ ಪ ನಾ ನಾ ಎನುತಲಿ ನಾನಾ ಯೋನಿಯೊಳು | ಜನಿಸಿ ಬಂದು ನೀ ಹೀನನೆನಿಸಿಕೊಂಡು || ಅಜ್ಞಾನದೊಳಗೆ ಬೆರೆತು ನೀ - | ನಾರೆಂಬದನರಿಯಲಿಲ್ಲವು ಗುರುತು | ಜ್ಞಾನಿ ಪುರುಷರ ಕೇಳುವದನೆ ಮರೆತು | ಇನ್ನು ಸದ್ಗತಿಗೆ ಆದಿಯೊ ಹೊರತು | ನೀ ಇದನರಿತು 1 ಆರರೊಳಗೆ ಬಿದ್ದು ಆರನು ನೋಡದೆ | ಆರು ಚಕ್ರದ ಮೇಲೆ ಏರಿ ಮ್ಯಾಲಕಿನ್ನು | ತೋರುತಿಹುದು ನೋಡು ರೂಪವಲ್ಲೀ | ಧಾರುಣಿಯೊಳಗೆಲ್ಲ ಅದರ ವ್ಯಾಪವು | ತೋರಿದಾಕ್ಷಣ ಅಳಿದ್ಹೋಯ್ತು ಪಾಪ | ಇದನು ಬಿಟ್ಟು ಮೂರ ನೆನಿಸಿ ಕೆಟ್ಟೀ | ಬಯಸಿ ನೊಂದೀ 2 ನರ ತನು ದೊರೆಕೋದು ಬರಿದೇನೊ | ಎರಡಿನ್ನು ಸರಿಯಾಗೊ ತನಕ | ಬರುವದೇನೊ ಸುಮ್ಮನೆ ಮರುಳಾಗ ಬ್ಯಾಡ || ಸರಿಸು ಅಸ್ಥಿರವೆಂದು ನೀ ಬೇಗದಲಿ | ಸಂಚಿತವೆಲ್ಲ ಕೂಡಿ ಬಂದಿತಿನ್ನೇನು | ಗುರು ಭವತಾರಕನ ಭಜಿಸು ನಿನ್ನ | ಮನಸಿನಿಂದಲಿ 3
--------------
ಭಾವತರಕರು
ದಿನದಿನದೊಳು ಬಿಡದೊನಜಾಕ್ಷ ಪಾದ ಭಜಿಸಿ ನೀ ಸುಖಿಯಾಗೊ ಮನವೆ ಪ ನಂಬುಗೆ ಕಾರಣ ಅಂಬುಜಾಕ್ಷನ ಶ್ರೀಪಾ ದಾಂಬುಜ ಒಲಿಸಲು ಕುಂಭಿಣಿಯೊಳಗೆ ನಂಬಿ ಪ್ರಹ್ಲಾದ ಕರೆಯೆ ಕಂಬದಿಂ ಬಂದವನ ಬೆಂಬಿಡದಲೆ ಕಾಯ್ದನೆಂಬೋಕ್ತಿ ಕೇಳಿ ತಿಳಿದು 1 ದುರಿತದ ತವರಿದು ನರಕಕ್ಕೆ ಬೇರೆಲೊ ಮರವೆಸಂಸಾರ ಮಹಸರಸಿನಸರೋವರ ಸುರಸಿನೊಳ್ ಸಿಲ್ಕಲು ತಿರುಗರೆಂಬುವ ಹರಿಶರಣರ್ವಾಕ್ಯಗಳು ಸ್ಥಿರನಂಬೀ ಅರಿತು 2 ಕಿರಿಕಿರಿ ಸಂಸಾರ ಪರಿಪರಿಬಾಧಿಪ ಉರಿಕಿನ ತಿಂಡಿಯಿದು ನೆರೆನಂಬಬೇಡ ಜರಸುಖವಿಲ್ಲದ ಎರವಿನ ಕಾಯಕ್ಕೆ ಹಿರಿಹಿರಿ ಹಿಗ್ಗಿ ಕೆಡದಿರು ವಿವರಿಸಿನೋಡಿ 3 ಸತಿಸುತರಿವರೆಲ್ಲ ಅತಿಭಾಗ್ಯ ಇರುವನಕ ಸತತ ನಿನ್ನಯ ಸೇವೆ ಹಿತದಿಂ ಮಾಳ್ಪರು ಗತಿಸಿ ಪೋಗಲು ಭಾಗ್ಯ ಸತಿಸುತರೆ ನಿನ ಗತಿವೈರಿಗಳು ಕಾಣೊ ಮತಿಹೀನ ಮನಸೆ 4 ಇರುಳು ಹಲವು ಪಕ್ಷಿ ನೆರೆದುಂಡು ವೃಕ್ಷದಿ ತಿರುಗಿ ಉದಯದೊಳು ಹಾರಿಹೋಗ್ವ ತೆರದಿ ಸರುವ ಅಸ್ಥಿರವೆಂದು ಅರಿತು ವಿಚಾರಿಸಿ ಸ್ಥಿರಸುಖವನು ಪಡೆಯೊ ಶ್ರೀರಾಮನಡಿಗ್ಹೊಂದಿ 5
--------------
ರಾಮದಾಸರು
ವ್ಯರ್ಥ ಹೋರಾಟವಲ್ಲದೆ ಇದು ನಿಜವಲ್ಲಾ ಕರ್ತೃ ಶ್ರೀಹರಿ ಮಾಡಿದರ್ಥವೆ ಸರಿ ಅಲ್ಲದೆ ಪ ಪುರಾಕೃತ ಸಂಚಿತಾರ್ಥ ಪುಣ್ಯ ಪಾಪಗಳಿಂದ ಪರಿ ಅನುಭವ ಬಡುತಾ ಇನ್ನೂ ಇರುವೆಯಲ್ಲದೆ ಘಣಿಯಲಿ ವಿರಂಚಿ ಬರೆದ ಭಂಗ ಬಡುತಲಿಷ್ಟು 1 ಎಂದೆಂದೂ ನಿನ್ನ ಹಿಂದೆ ಒಂದೂ ಬರುವುದಿಲ್ಲ ಮುಂದುಗಾಣದೆ ಇನ್ನು ಮೋಹಕೆ ಸಿಲುಕಿ ನಂದೆಂದು ಪರಿಯಿಂದ ಘಳಿಸಿದ ದ್ರವ್ಯದ ಬಿಂದಿಗೆ ದಾರೋ ನೀದಾರೋ ಪಾಮರ ಮೂಢಾ 2 ನನ್ನ ಹೆಂಡತಿ ಮಕ್ಕಳು ನನ್ನ ಮನೆ ಬಾಗಿಲು ನನ್ನ----ಯು ವೃತ್ತಿ ನನ್ನದೆಂದೂ ನಿತ್ಯ ಒಂದಾಡುವೆ ನೀದಾರೋ ಮೂಢಾ 3 ತಂದೆ ತಾಯಿಯ ಗರ್ಭದಿಂದ ಪುಟ್ಟಿರುವಂದೇ ತಂದೆಲ್ಲೊ ತಾಯೆಲ್ಲೊ ತಾನೆಲ್ಲೊ ಮರುಳೆ ಹಿಂದೆ ಆದವರ ಚರ್ಯವ ವಿವರಿಸಿ ನೋಡಿನೋಡಿ ಕುಂದು ಇಲ್ಲದೆ ಮುಕ್ಕುಂದನ ಸ್ಮರಿಸು ಗಾಢಾ 4 ಮಾಯಾ ಪ್ರಪಂಚದೋಳ್ ಮಗ್ನನಾಗಿ ಇನ್ನು ಕಾಯಾ ಅಸ್ಥಿರವೆಂದು ಕಾಣೋ----- ಶ್ರೀಯರಸ 'ಹೆನ್ನ ವಿಠ್ಠಲ’ರಾಯನ ಕರ್ಮ ಧ್ಯಾನವು ಬಿಟ್ಟು 5
--------------
ಹೆನ್ನೆರಂಗದಾಸರು