ಎನೊ ಎಂತೊ ತಿಳಿಯದು ತಿಳಿಯದು
ಸ್ವಾನಂದದ ಸುಖದಾಟ ಧ್ರುವ
ಒಳಗೊ ಹೊರಗೊ ಬೈಗೊ ಬೆಳಗೊ
ಕಾಳೊ ಬೆಳದಿಂಗಳವೊ
ಮಳಿಯೊ ಮಿಂಚೊ ಹೊಳವೊ ಸಳವೊ
ತಿಳಿಯದ ಕಳೆಕಾಂತಿಗಳು 1
ಉದಿಯೊ ಅಸ್ತೊ ಆದ್ಯೊ ಅಂತ್ಯೊ
ಮಧ್ಯೋ ತಾ ತಿಳಿಯದು
ತುದಿಮೊದಲಿಲ್ಲದೆ ಸದಮಲ ಬ್ರಹ್ಮವು
ಉದಿಯವಾಗಿಹ್ಯದು ನೊಡಿ 2
ಜೀವೋ ಭಾವೋ ಶಿವೊ ಶಕ್ತೋ
ಆವದು ತಾ ತಿಳಿಯದು
ಘವಘವಿಸುವ ಅವಿನಾಶನ ಪ್ರಭೆಯಿದು
ಮಹಿಪತಿ ವಸ್ತುಮಯವೊ 3