ತನ್ನ ಕಷ್ಟದಿ ತನಗೆ ದೊರಕುವುದು ಹಾಗ
ಉನ್ನಂತ ಭಾಗ್ಯಗಳು ಹರಿಯ ವಿನಿಯೋಗ ಪ
ಕಟ್ಟಿಗೆಯ ಹೊರೆ ತಂದು ಪಟ್ಟಣದೊಳಿಳುಹಿದರು
ಉಟ್ಟ ಬಹಿರ್ವಾಸವನು ಬಿಗಿದಿಟ್ಟರು
ಮೊಟ್ಟೆಯನು ಕೊಂಡೊಯ್ದು ಇಟ್ಟದನು ಮಾರಿದರು
ಹೊಟ್ಟೆ ತುಂಬಿಸಿ ಕಡೆಗೆ ಕಟ್ಟುವನು ಹಾಗ 1
ಪದಪದ್ಯಗಳ ಹೇಳಿ ಕುಣಿದಾಡಲು
ಹದಿನಾರನೆಯ ವಿಧಿಯ ಸದನದೊಳು ಸವಿದುಣಲು
ಕದನ ಕರ್ಕಶನಾಗಿ ಕಡಿದು ಬರೆ ಹಾಗ 2
ಸೂಜಿ ನೂಲನು ಕೊಂಡು ಬಾಜಾರದೊಳು ಕುಳಿತು
ಸೋಜಿಗದ ಹೊಲಿಗೆಯನು ಮಾಡಿಕೊಡಲು
ಕಾಜು ಬಳೆಗಳ ಹೊತ್ತು ದಣಿದು ಮಾರಿದರವಗೆ
ರೋಜು ಉಳಿವುದು ಅಸ್ತಮಯಕೆ ಒಂದ್ಹಾಗ 3
ಭಾಗ್ಯವುಳ್ಳವನನ್ನು ಬಾಧಿಸಲು ಅವ ತನಗೆ
ಕಾಗೆ ಕರಿದೆನಿಸಿ ತಾ ಕಸ್ತೂರಿ ಹೋಲುವುದೆ
ಮೊಗೆಮೊಗೆ ಮಲ್ಲಿಗೆಯು ಪರಿಮಳಿಪುದೆ 4
ಹರಿಯ ಸೇವೆ ಮಾಡೆ ಇಹಪರದ ಸೌಖ್ಯಗಳು
ಹರನ ಸೇವೆಯ ಮಾಡೆ ಪರಮ ಪದವು
ಸಿರಿಯರಸ ವರಾಹತಿಮ್ಮಪ್ಪ ನಿನ್ನಡಿಯ
ಕರುಣರಸ ಹೊರತಾಗಿ ಸಿರಿಯು ಸೇರುವಳೆ 5