ವಿಶಿಷ್ಟಾದ್ವೈತ ಮತವೇ ಮತವು ಪ
ವಿಷ್ಣು ಪದವೇ ಶಾಶ್ವತ ಪದವು ಅ.ಪ
ವಸಿಷ್ಠ ನಾರದ ಸನಕಾದಿ ವಂದ್ಯರ
ವಿಶಿಷ್ಟ ಪರಿಗ್ರಹ ವೇದಾಂತ ಸಾರದ 1
ಅಸೇತುಹಿಮಾಚಲ ವಿಶೇಷದ
ವಿಶೇಷ ಪ್ರಮಾಣ ಚತುಷ್ಟಯದ 2
ಚಿತ್ತು ಅಚಿತ್ತೀಶ್ವರ ತತ್ತ್ವವನು
ಪ್ರತ್ಯೇಕವಾಗಿಯೇ ಬೋಧಿಸಿಹ 3
ಪರ ವ್ಯೂಹ ವಿಭವಾಂತರ ಅರ್ಚಾ
ಪರಿಪರಿರೂಪದ ಶ್ರೀಹರಿ ಪೂಜನ 4
ರಹಸ್ಯತ್ರಯ ಮಂತ್ರ ವಿಶಿಷ್ಟದ
ಸಹಮತ ಸುಲಭೋಪಾಯವಿಧಾನದ 5
ಅಜ ಸುರರೆಲ್ಲರು ಹರಿಮತ
ಹರಿಯೊಬ್ಬನ ಪಾದವೆ ಮೋಕ್ಷಪÀಥ 6
ಪ್ರಧಾನ ಧರ್ಮದ
ಉಪವೃತ್ತಿಯ ಬೇಡದ ಶರಣಾಗತಿಯ 7
ಸತತವು ಹೆಜ್ಜಾಜಿಕೇಶವನಾಮ
ನುತಿಸಿದವನ ಭವಬಂಧನ ಬಿಡಿಸುವ 8