ಮಾಧವ ಮಧುಸೂದನ ಹರಿ ಜೋ ಜೋ
ಯಾದವ ರಾಯ ಶ್ರೀರಂಗನೆ ಜೋ ಜೋ ಪ
ವಸುದೇವ ದೇವಕಿ ಸುತನಾಗುದಿಸಿ
ವಸುಧÉಯ ಭಾರವನಿಳುಹಿದೆ ಜೋ ಜೋ1
ಶುಕಶೌನಕ ನಾರದಮುನಿ ವಂದ್ಯ
ಅಕಳಂಕ ಚರಿತ ಅಚ್ಚುತಾನಂತ ಜೋ ಜೋ2
ಶಿಶುರೂಪನೆತ್ತುತ ಮುದ್ದಿಸುತಿಹ
ಅಸುರೆ ಪೂತಣಿ ಅಸುಹೀರಿದೆ ಜೋ ಜೋ 3
ಬಂಡಿಯ ರೂಪದಿ ಬಂದಸುರನ ಸಿರ
ಚಂಡಾಡುತ ನಲಿದಾಡಿದೆ ಜೋ ಜೋ 4
ಪೊಂಗೊಳಲೂದುತ ಗಂಗೆಯೊಳಿಹ ಕಾ-
ಳಿಂಗನ ಪೆಡೆ ತುಳಿದಾಡಿದೆ ಜೋ ಜೋ 5
ಗೋಪಾಲಕರೊಡನಾಡುತ ನಲಿಯುತ
ಪಾಪಿ ಖಳನ ತರಿದಾಡಿದೆ ಜೋ ಜೋ 6
ಸಾಧಾರಣ ವತ್ಸರದಲಿ ಸಲಹುವ
ಶ್ರೀದ ಕಮಲನಾಭ ವಿಠ್ಠಲ ಸುಜನರ 7