ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಧವ ಮಧುಸೂದನ ಹರಿ ಜೋ ಜೋ ಯಾದವ ರಾಯ ಶ್ರೀರಂಗನೆ ಜೋ ಜೋ ಪ ವಸುದೇವ ದೇವಕಿ ಸುತನಾಗುದಿಸಿ ವಸುಧÉಯ ಭಾರವನಿಳುಹಿದೆ ಜೋ ಜೋ1 ಶುಕಶೌನಕ ನಾರದಮುನಿ ವಂದ್ಯ ಅಕಳಂಕ ಚರಿತ ಅಚ್ಚುತಾನಂತ ಜೋ ಜೋ2 ಶಿಶುರೂಪನೆತ್ತುತ ಮುದ್ದಿಸುತಿಹ ಅಸುರೆ ಪೂತಣಿ ಅಸುಹೀರಿದೆ ಜೋ ಜೋ 3 ಬಂಡಿಯ ರೂಪದಿ ಬಂದಸುರನ ಸಿರ ಚಂಡಾಡುತ ನಲಿದಾಡಿದೆ ಜೋ ಜೋ 4 ಪೊಂಗೊಳಲೂದುತ ಗಂಗೆಯೊಳಿಹ ಕಾ- ಳಿಂಗನ ಪೆಡೆ ತುಳಿದಾಡಿದೆ ಜೋ ಜೋ 5 ಗೋಪಾಲಕರೊಡನಾಡುತ ನಲಿಯುತ ಪಾಪಿ ಖಳನ ತರಿದಾಡಿದೆ ಜೋ ಜೋ 6 ಸಾಧಾರಣ ವತ್ಸರದಲಿ ಸಲಹುವ ಶ್ರೀದ ಕಮಲನಾಭ ವಿಠ್ಠಲ ಸುಜನರ 7
--------------
ನಿಡಗುರುಕಿ ಜೀವೂಬಾಯಿ
ಶ್ರೀನಿವಾಸನೆ ನಿನ್ನ ಮಹಿಮೆಯ ಏನ ಪೇಳ್ಪೆನಾ ಜ್ಞಾನರಹಿತಳು ಗಾನಲೋಲನೆ 1 ಮಂಕುಮಾನವರಿಂದ ಸಾಧ್ಯವೆ ಶಂಕರಾದಿ ವಂದಿತನ ಸ್ತುತಿಸಲು ಪಾದ ಪಂಕಜ ಧ್ಯಾನಿಸೆ ನಿನ್ನ ಕೃಪೆಯನಾತಂಕವಿಲ್ಲದೆ2 ನಿನ್ನ ಭಕ್ತರಾ ಕಾಯ್ವೆಯೆಂಬುವುದನ್ನು ಅರಿತೆಹೆ ಪನ್ನಗಾಚಲ ಚಿನ್ನಭೊಮ್ಮನಿಂದಳವೆ ದೇವನೆ 3 ಕಿರೀಟಶೋಭನÀ ವರ್ಣಿಪೆ ಕರ್ಣಕುಂಡಲ 4 ಪದ್ಮನಾಭಗೆ ಪದ್ಮದಕ್ಷಿಯ ತಿದ್ದಿದ ಚಂಪಕದ ನಾಸಿಕ ಮುದ್ದುದಂತ ಪಂಕ್ತಿಗಳ ಕಂಡೆನೊ ಪೂತನಿಯ ಅಸುಹೀರಿದ ಆ ಭುಜಕೀರ್ತಿಗಳ ಕಂಡೆನು ಭಕ್ತಪಾಶ ನಿನ್ನ ಹಸ್ತ ಕಂಕಣವಾ ಕಂಡೆನು 5 ಬೆರಳ ಮುದ್ರಿಕೆ ಕೊರಳೊಳ ಸಾಲಿಗ್ರಾಮದ ಸರ ವೈಜಯಂತಿ ಮಾಲೆಗಳ ಕಂಡೆನು 6 ವÀರ ಶ್ರೀ ತುಳಸಿಯ ಹಾರಗಳ ಮಧ್ಯದಿ ಮೆರೆವ ರಮಾದೇವಿಯಳ ಕಂಡೆನು ಜಾನು ಜಂಘೆಯೊಳ ಮೆರೆವ ಪೀತಾಂಬರ ಕಂಡೆನು 7 ಆಜಾನುಬಾಹು ನೀನ್ಹೊದ್ದವಲ್ಲಿ ವಜ್ರದ್ಪಡ್ಯಾಣಕಂಡೆನು ಸಾನುರಾಗದಿ ಸ್ತುತಿಸಿ ಹಿಗ್ಗುತ ನಾನುಸ್ತುತಿಪ ನಿನ್ನಂಘ್ರಿ ಕಮಲವ 8 ಚರಣಕೊಪ್ಪುವೊ ಗಗ್ಗರಿಪಾಡಗ ವರಗೆಜ್ಜೆ ಪೈಜಣಿ ಕಂಡೆ ದೇವನೆ ಶ್ರೀವೆಂಕಟೇಶನೆ 9 ಕಾಯ ಬೇಕೆÉಲೊ ಕ್ಷಮಿಸೊ ದೇವನೆ 10
--------------
ಸರಸ್ವತಿ ಬಾಯಿ
ಧರ್ಮವೇ ಜಯವೆಂಬ ದಿವ್ಯ ಮಂತ್ರ |ಮರ್ಮಗಳನೆತ್ತಿದರೆ ಒಳಿತಲಾಕೇಳಿಪ.ವಿಷವನುಣಿಸಿದಗೆ ಷಡುರಸವನುಣಿಸಲುಬೇಕು |ದ್ವೇಷಮಾಡುವನ ಪೋಷಿಸಲು ಬೇಕು ||ಹಸಿದು ಮನೆ ಕೊಂಬವನ ಹಾಡಿಹರಸಲುಬೇಕು |ಅಸುಹೀರಿದನ ಹೆಸರ ಮಗನಿಗಿಡಬೇಕು1ಹಿಂದೆ ನಿಂದಿಸುವರನು ವಂದಿಸುತಲಿರಬೇಕು |ಬಂಧಿಸಿದವನ ಕೂಡ ಬೆರೆಯಬೇಕು ||ನಿಂದ ನಿಲುವಿಗೆ ಸೇರದವನ ಪೊಗಳಲುಬೇಕು |ಕೊಂದವನ ಗೆಳತನವ ಮಾಡಬೇಕಯ್ಯ 2ಕೊಂಡೊಯ್ದು ಕೆಡಿಸುವನ ಕೊಂಡಾಡುತಿರಬೇಕು |ಕಂಡರಾಗದವರ ತಾ ಕರಿಯಬೇಕು ||ಪುಂಡರೀಕಾಕ್ಷ ಶ್ರೀ ಪುರಂದರವಿಠಲನ ಅ - |ಖಂಡ ಮಹಿಮೆಯನರಿತು ನೆನೆಯಬೇಕಯ್ಯ 3
--------------
ಪುರಂದರದಾಸರು