ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಹರೀ ಎನ್ನ ದೋಷವಳಿಯೊ ಪ ಕರಿವರದ ಕೃಪೆಮಾಡು ನಿತ್ಯಮಿತ್ರನೆ ಕೃಷ್ಣ ಅ.ಪ. ಬೇಲಿ ಎದ್ದು ಹೊಲವ ಮೆದ್ದರೆ ಬ್ಯಾರಿನ್ನು ಪಾಲಿಪರು ಯಾರೆಯ್ಯ ಶೀಲರೊಡೆಯ ಫಾಲಾಕ್ಷಸಖ ನಿನ್ನ ಅಚುಂಬಿತ ಕಾರುಣ್ಯ ಶ್ರೀಲಕ್ಷ್ಮೀ ಶ್ರುತಿ ರಾಸಿ ವರ್ಣಿಪರೊ ಗುಣನಿಧಿಯೆ 1 ಯಾತನೆಲ್ಹಣ್ಣಾದೆ ಪೂತನಿಯ ಅಸುಹರನೆ ಪಾತಕಕೆ ಕೊನೆಗಾಣೆ ಪಾರ್ಥಸೂತ ಆತ್ಮಬಂಧುವೆ ಇನ್ನು ತಡಮಾಡೆ ತಡಿಲಾರೆ ಪೂತನ ಮಾಡೆನ್ನ ಪ್ರಾಣೇಶ ಪ್ರಿಯಬಂಧು 2 ದೋಷಪುಂಜನು ನಾನು ಶೇಷಶಯನನೆ ಬಲ್ಲ ಪೋಷಕನು ನೀನೆಂದು ವೇದರಾಸಿ ಘೋಷಿಪವು ಅನವರತ ಕಾಪಾಡು ಶ್ರುತಿವಾಕು ದೋಷಕರ ಜಯೇಶವಿಠಲನೆ ಮೈದೋರು 3
--------------
ಜಯೇಶವಿಠಲ