ಮುರಹರ ಬಾರೋ ವನಮಾಲಾ
ಚರಣವ ತೋರೋ ಗೋಪಾಲಾ ಪ
ಮೊರೆಯ ಕೇಳಿದರೂ ಕರುಣೆಯು ಬರಲಿಲ್ಲ
ಶರಣನ ಮರೆವುದು ತರವಲ್ಲಾ ಅ.ಪ
ಶರನಿಧಿಗಳಿವೆ ಗಿರಿಯ ಧರಿಸಿದೆ ಧರಣಿಯನೆತ್ತಿದೆ
ತರಳನ ಪೊರೆದೆ ವರವಟುವಾದೆ
ಬುದ್ಧ ಕಲ್ಕಿ ನೀನಾದೆ 1
ನಿಗಮೋದ್ಧಾರಾ ನಗಧರ ಭೂವರಾ
ಮೃಗಮುಖ ವಾಮನ ಪರಶುಧವಾ
ಜಗಪತಿ ಮುರಳೀಲೋಲಾ ಪುರಹರಾ
ಖಗವಾಹನ ಕಲ್ಕಿ ವಿವಿಧಾವತಾರಾ2
ಗಂಗೆಯ ಜನಕಾ ಶರಣರ ಕನಕಾ
ಮಂಗಳದಾಯಕಾ ಅಸುರಾಂತಕಾ
ತುಂಗವಿಕ್ರಮ ಶ್ರೀಮಾಂಗಿರಿನಾಯಕಾ
ಅಂಗಜಜನಕಾ ಲೋಕಮೋಹಕಾ 3