ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಸುರಾಂತಕನರಸಿಯೆ ನೀಬೇಗ ಪ ಕುಸುಮಾಕ್ಷತೆ ಲಾಜಗಳಿಂದಲಿ ಮೇ- ಲೆ ಸುರಾರ್ಚೆಲ್ಲಿ ಪ್ರಾರ್ಥಿಸುವರು ನಿನ್ನ ಅ.ಪ ಸುರರು ಮೋದದಿಂದ ತಾವು ಪೊಗಳುತಿಪ್ಪರು ಪಾದನೂಪುರವಲುಗದಂತೆ ನೀ ಸಂ- ಮೋದವ ಬೀರುತ್ತ ಸುಜನರಿಗೆಲ್ಲ 1 ಗಿರಿಜಾವಾಣೀಯಾರ್ಕರವ ಕೊಡಲು ಅರುಂಧತಿ ಮುಖರೆಚ್ಚರಿಕೆ ಪೇಳಲು ಕರುಣಾರಸವ ಸುರಿಸುತ್ತ ನೀ ಭ- ಕ್ತರು ಬೇಡಿದಿಷ್ಟಾವರವ ನೀಡಲು2 ಇಂದಿರೆ 3
--------------
ಗುರುರಾಮವಿಠಲ
ಕಂಡಿರೆ ಶ್ರೀ ಕೃಷ್ಣನ ಪ. ಪುಂಡರಿಕಾಕ್ಷ ಪುರುಷೋತ್ತಮನ ಅಂಡಜವಾಹನ ಅಸುರಾಂತಕನ ಅ.ಪ. ಅರುಣ ಕಿರಣ ಸೋಲಿಪ ಚರಣ ವರ ಗೆಜ್ಜೆಯ ಧರಿಶಿಹನ ಕಿರುನಗೆಯಿಂದಲಿ ಬೆರಳಲಿ ಮುರಳಿಯ ಸ್ವರÀ ಊದಿದ ಮುರಹರನ 1 ಸೂರ್ಯ ಕಿರೀಟ ಧರಿಸಿ ಹಾಟಕಾಂಬರಧರ ನಮ್ಮ ಊಟ ಮಾಡಿ ಪಾಲ್ ಬೆಣ್ಣೆಯ ಮೆದ್ದು ವಾರೆ ನೋಟದಿ ಮನ ಸೆಳೆಯುವನ2 ಅಂಗಿಯ ತೊಡಿಸಿ ಉಂಗುರವಿಟ್ಟು ಅಂಗಳದೊಳು ಬಿಟ್ಟೆನಮ್ಮ ರಂಗ ಶ್ರೀ ಶ್ರೀನಿವಾಸನ ಕಾಣೆ ನಿ ಮ್ಮಂಗಳದೊಳು ಇಹನೇನಮ್ಮ ಇಹನೇನಮ್ಮ 3
--------------
ಸರಸ್ವತಿ ಬಾಯಿ
ದೇವೇಂದ್ರನ ಸೊಸೆ ದೇವಕ್ಕಿ ತನಯಳು ಏನೇನು ಬಯಸಿದಳು ಪ ಒಂದು ತಿಂಗಳು ತುಂಬಲು ಸುಭದ್ರ ಅಂಜೂರಿ ದ್ರಾಕ್ಷಿ ಕಿತ್ತಳೆ ಜಂಬುನೇರಳು ಬಯಸಿದಳು ಅಂಬುಜಾಕ್ಷನ ತಂಗಿ ಪೈಜಣ ರುಳಿ ಗೆಜ್ಜೆ ಕಾ- ಲುಂಗುರ ಕಿರುಪಿಲ್ಯ ಇಟ್ಟೇನೆಂಬುವಳು 1 ಎರಡು ತಿಂಗಳು ತುಂಬಲು ಸುಭದ್ರ ಪರಡಿ ಮಾಲತಿ ಸಣ್ಣ ಶ್ಯಾವಿಗೆ ಬಯಸಿದಳು ಪರಿವೇಶನ ತಂಗಿ ಹರಡಿ ಕಂಕಣ ಹಸ್ತ ಕಡಗ ಹಿಂಬಳೆ ದ್ವಾರ್ಯ ಇಟ್ಟೇನೆಂಬುವಳು 2 ಮೂರುತಿಂಗಳು ತುಂಬಲು ಸುಭದ್ರ ವಾಲ್ಯ ಪಚ್ಚದ ಚಂದ್ರ ಬಾಳ್ಯವ ಬಯಸಿದಳು ಮಾರನಯ್ಯನ ತಂಗಿ ತೋಳಿಗ್ವಜ್ರದ ವಂಕಿ ಮಾಣಿಕ್ಯದ್ವೊಡ್ಯಾಣ ಇಟ್ಟೇನೆಂಬುವಳು 3 ನಾಲ್ಕು ತಿಂಗಳು ತುಂಬಲು ಸುಭದ್ರ ಆಕಳ ತುಪ್ಪ ಅನಾರಸ ಬಯಸಿದಳು ಶ್ರೀಕಾಂತನ ತಂಗಿ ತೂಕದ ಸರಿಗೆಯಿಟ್ಟು ಏಕಾವಳಿಯ ಸರ ಹಾಕೇನೆಂಬುವಳು 4 ಐದು ತಿಂಗಳು ತುಂಬಲು ಸುಭದ್ರ ಕೆನೆಮೊಸರ್ಹಾಕಿದ ಬುತ್ತಿ ಚಿತ್ರಾನ್ನವ ಬಯಸಿದಳು ಅಸುರಾಂತಕನ ತಂಗಿ ಹಸುರುಪತ್ತಲನುಟ್ಟು ಕುಸುಮ ಮಲ್ಲಿಗೆಮೊಗ್ಗು ಮುಡಿದೇನೆಂಬುವಳು 5 ಆರು ತಿಂಗಳು ತುಂಬಲು ಸುಭದ್ರ ಚೌರಿ ರಾಗಟೆ ಜಡೆಬಂಗಾರ ಬಯಸಿದಳು ಮಾರನಯ್ಯನ ತಂಗಿ ನಾಗಮುರಿಗೆನಿಟ್ಟು ಜಾಜಿ ಮಲ್ಲಿಗೆಮೊಗ್ಗು ಮುಡಿದೇನೆಂಬುವಳು 6 ಏಳು ತಿಂಗಳು ತುಂಬಲು ಸುಭದ್ರ ಕ್ಷೀರ ಮಂಡಿಗೆ ಬುಂದ್ಯ ಫೇಣಿಯ ಬಯಸಿದಳು ಕಮಲ ಕ್ಯಾದಿಗೆ ಮುಡಿಯ ನಿಂಬಾವಳಿ ಪತ್ತಲ ನಿರಿದುಟ್ಟೇನೆಂಬುವಳು7 ಎಂಟು ತಿಂಗಳು ತುಂಬಲು ಸುಭದ್ರ ಚಿಂತಾಕು ಪದಕ ಕಟ್ಟಾಣಿಯ ಬಯಸಿದಳು ವೈಕುಂಠಪತಿಯ ತಂಗಿ ಇಂಟರ್ ಪಪ್ಪುಳಿನುಟ್ಟು ಸೀಮಂತದುತ್ಸವ ಮಾಡೆ ಸುಖದಿಂದಿರುವಳು 8 ಒಂಬತ್ತು ತಿಂಗಳು ತುಂಬಲು ಸುಭದ್ರೆಗೆ ಬಂಗಾರದ್ಹೊರಸಿನಲ್ಲಿರಿಸಿ ಆರತಿ ಮಾಡಲು ಮಂಗಳಮಹಿಮ ಭೀಮೇಶಕೃಷ್ಣನ ತಂಗಿ ಕಂದ ಅಭಿಮನ್ಯು ಎಂಬುವನ ಪಡೆದಳು 9
--------------
ಹರಪನಹಳ್ಳಿಭೀಮವ್ವ
ನಾರದ ದೇವಋಷಿಗಳ ನೋಡಿದೆ ಹರಿಪಾದ ಸೇವಕರ ಕೊಂಡಾಡಿದೆ ದೇವಋಷಿ ಹರಿಪಾದ ಸೇವಕರು ನಮ್ಮಾ ್ವಸು- ದೇವಸುತನಂಕದಲ್ಲುದಿಸಿದುತ್ತಮರಿವರು ಪ ವಾಣಿಪತಿಪಿತನ ಚರಣಾಂಬುಜ ಸೇವೆ ಮಾಡೋ ಜನರಲ್ಲೆ ಕರುಣ ಜಾಣ ನಾರಂದ ಜಗದೀಶನ ಗುಣಮಹಿಮೆ ವೀಣಾಪಾಣಿಗಳಿಂದ ಸ್ತುತಿಸಿ ಕೊಂಡಾಡುವರು 1 ಪ್ರೀತಿಯಿಂದ್ಹರಿಯ ನೋಡಿ ಸುರಪಾರಿ- ಜಾತವನು ತಂದು ನೀಡಿ ಮಾತುಳಾಂತಕನ ಮಡದಿ(ಯ)ರಿಗೆ ಕಲಹವನ್ಹೂಡಿ ಭೂತಳಕೆ ಸುರತರುವ ತರಿಸಿದರ್ಹರಿಕರಗಳಿಂದ2 ದಾಸಿಯಲ್ಲುದಿಸಿ ವಿಷಯಗಳು- ದಾಶ(ಸೀ?)ನವ ಮಾಡಿ ಬ್ಯಾಗ ಅಸುರಾಂತಕನ ಅತಿಭಕ್ತಿಯಿಂದಲಿ ಭಜಿಸಿ ಭೀ- ಮೇಶಕೃಷ್ಣನ ಗುಣವ ಪಾಡಿ ಕೊಂಡಾಡುವರು3
--------------
ಹರಪನಹಳ್ಳಿಭೀಮವ್ವ