ಭವ - ಸಂಕಟ ಕಳೆ - ವೆಂಕಟೇಶ ||ಅ||
ಪಂಕ ಸಿರಿ ವೆಂಕಟೇಶ ಅ.ಪ.
ಮಹ ವೇದಗಳನು ಕದ್ದ ದೈತ್ಯನ ಕೊಂದೆ ವೆಂಕಟೇಶಮಹ ಮೀನನಾಗಿ ನೀ ಸತ್ಯವ್ರತಗೆ ಒಲಿದೆ ವೆಂಕಟೇಶ 1
ಕೂರ್ಮ ನೀನಾಗುತ - ವೆಂಕಟೇಶಮಂದರಗಿರಿ ಪೊತ್ತು ಭಕ್ತರ ಸಲಹಿದೆ ವೆಂಕಟೇಶ 2
ಮತ್ತರಾದ ಮಧುಕೈಟಭರ - ಕೊಂದೆ ವೆಂಕಟೇಶಮತ್ತೆ ಭೂ ಚಾಪೆಯ ಮಾಡಿದವನ ಕೊಂದೆ ವೆಂಕಟೇಶ 3
ಕಶಿಪು ಬಾಧೆ ಕಳೆಯಲು - ತರಳಗೆ ವೆಂಕಟೇಶಕ್ಷಣದಿ ಕಂಭದಿ ಬಂದು ದುರುಳನ ಸವರಿದೆ ವೆಂಕಟೇಶ 4
ಮೂರು ಪಾದವ ಬೇಡಿ - ಬಲಿಯ ಭಂಜಿಸಿದೆ ವೆಂಕಟೇಶಪಾರಗಾಣದ ಮಹಿಮೆ ಬಾಗಿಲ ಕಾಯ್ದೆ ವೆಂಕಟೇಶ 5
ಹಂಚಿ ಮೆರೆದೆ ವೆಂಕಟೇಶ 6
ಮಡದಿಯ ಕದ್ದೊಯ್ದ ದೈತ್ಯನನ್ನಳಿದೆ ವೆಂಕಟೇಶಧೃಢ ಭಕುತಗೆ ಲಂಕೆಯ ಪಟ್ಟಣವಿತ್ತೆ ವೆಂಕಟೇಶ 7
ಗೋಪಿ ಜನರ ಪ್ರಿಯ | ಸುಪರ್ಣವರವಾಹ ವೆಂಕಟೇಶಪಾಪಿ ಕೌರವ ಕುಲಹರ ಧರ್ಮ ಸ್ಥಾಪಿ ವೆಂಕಟೇಶ 8
ಬೆತ್ತಲೆ ನೀ ನಿಂತು ಕುತ್ಸಿತ ಅಸುರರಸದೆದ್ಯೋ ವೆಂಕಟೇಶಕುತ್ಸಿತ ಅಸುರರ ಮೋಹಿಸುತಳಿದೆಯೊ ವೆಂಕಟೇಶ 9
ತುರಗನೇರಿ ಕಲ್ಕಿ ಎನಿಸಿಕೊಂಡೆಯೊ ವೆಂಕಟೇಶಉರಗಾದ್ರಿ ವಾಸ ಗುರು ಗೋವಿಂದ ವಿಠಲ ವೆಂಕಟೇಶ 10