ಒಂದೇ ಕರದೊಳು ಅಮ್ಮಯ್ಯಾ ನಿನಗುಣ್ಣಿಸುವೆನು ಕೇಳಮ್ಮಯ್ಯಾ ಪ
ಜಲಧಿಯೊಳಮ್ಮಯ್ಯಾ
ಉದುರಲು ಅಮ್ಮಯ್ಯಾ
ಉದಭಿಜಡರುಹುಗೊಂಡಮ್ಮಯ್ಯಾ 1
ಶಿರಿಕೃಷ್ಣ ಮೆಚ್ಚಿದನಮ್ಮಯ್ಯಾ ಶಿರದೆಡೆಯೊಳಾಂತನು ಅಮ್ಮಯ್ಯ
ವರಗಳನಿತ್ತನು ಅಮ್ಮಯ್ಯ ಹರಿಯರ್ಚನೆಗಧಿಕಳು ಅಮ್ಮಯ್ಯ 2
ಮಿಸುಪ ವ್ಯಕ್ತಿಯು ಅಮ್ಮಯ್ಯ ನೊಸಲೆಡೆವ ಭೂಷಣವಮ್ಮಯ್ಯ
ಅಸುಬಿಕ್ಷÀಣಾಳ್ಗಳು ಅಮ್ಮಯ್ಯ ಮಿಸುಕದೆಲೆ ಪೋಪರು ಅಮ್ಮಯ್ಯ 3
ಮಂಗಳಬಲೆಯರು ಅಮ್ಮಯ್ಯ ಗಂಗಾಜಲವೆರೆಯಲು ಅಮ್ಮಯ್ಯ
ಲಿಂಗಪೂಜಿಸಲು ಅಮ್ಮಯ್ಯ ಇಂಗಿತದ ವರಗಳೀವೆಮ್ಮಯ್ಯ 4
ನರಸಿಂಹವಿಠ್ಠಲ ನಮ್ಮಯ ಸರಿ ನೀನೆ ಬತ್ತಳೆಂದಮ್ಮಯ್ಯಾ
ಪರಾಕು ನೀನಮ್ಮಯ್ಯ 5