ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯತೀರ್ಥ ಮುನಿವರ್ಯ ಪ ದಯತೋರಿ ಪೊರೆಯಯ್ಯ ವಿಜಯಸಾರಥಿಪ್ರಿಯ ಅ.ಪ ಶ್ರೀಶಶಯನಾವೇಶ ಮಹೇಶ ಪ್ರತಿಬಿಂಬ ಸು ರೇಶ ಯತಿಕುಲಾಧೀಶ ಪಾಲಿಸಯ್ಯ ಏಸು ನಿನ್ನಯ ಕರುಣರಾಶಿ ಎಂತಿಹುದಯ್ಯ ಆಸೆ ಸಲಿಸಲು ಮನೆಗೆ ಲೇಸಾಗಿ ನೀ ಬಂದೆ 1 ಪಶುಪತಿಯ ಮತ ದಹಿಸಿ ಅಸುಪತಿಯ ಮತ ಮೆರೆದೆ ವಸುಮತಿಯ ಸುರನಾಗಿ ಬಂದು ನಿಂದೆ ಪಶುಪ್ರಾಯನೆಂದೆನ್ನ ಉದ್ಧರಿಸಲೋಸುಗದಿ ಬಿಸಜತವಪಾದ ಪಾಂಸವನಿತ್ತೆ 2 ಜಯಗುರುವೆ ಶ್ರೀ ವಿಜಯದಾಸರಲ್ಲೆನ್ನ ಮನೋ ಜಯವು ಪುಟ್ಟಿಸಿದ ನಿನ್ನ ಕರುಣವೆಂತೊ ಸೃಜಿಸಿ ತೋರಿದ ಸ್ವಪ್ನ ನಿಜವು ಆಗಲಿ ಎಂದು ಬಿಜಯ ಮಾಡಿದೆ ನಿನ್ನ ನಿಜದಾಸರೊಡನೆ 3 ಜಯಗುರುವೆ ನಿಮ್ಮ ಹುದ್ಗುಹದಲಿ ನಲಿಯುತಿಹ ವಾಯುವಂತರ್ಗತ ಕೃಷ್ಣನ ತೋರೋ ಜಯತು ಶ್ರೀ ವೇಣುಗೋಪಾಲ ಮೂರ್ತೇ ಜಯತು ಶ್ರೀ ವೇಣುಗೋಪಾಲನೆಂದೆನಿಸಿಯ್ಯ 4 ಸೃಷ್ಟಿಗೆ ಬಂದು ನಾನೆಷ್ಟು ಜನ್ಮವ ಕಳೆದೆ ಪುಟ್ಟಿದೆನೋ ನಾನೀಗ ಈ ಜನ್ಮದಿ ಪುಟ್ಟಲಿಲ್ಲವೋ ಜ್ಞಾನ ಹರಿ ಗುರುಸ್ಮರಣೆಗೆ ಇಟ್ಟಕಡೆಗಣ್ಣÂನೋಳಿಷ್ಟು ನೋಡಯ್ಯ5 ವಾದಿಮಸ್ತಕ ಭೇದಿ ಮೋದತೀರ್ಥರ ತತ್ತ್ವ ಛೇದಿಸಿ ವಾಕ್ ಯುದ್ದ ಯೂಥಪಗಳನೆಲ್ಲ ಗೆದ್ದು ಸತ್ತತ್ತ್ವದಾ ಸಿಂಹನಾದವ ಮಾಡ್ದೆ 6 ಮಧ್ವರಾಯರಿಗೆ ನೀ ಮುದ್ದುಮೊಮ್ಮಗನಯ್ಯ ಸದ್ವಿದ್ವದ್ಗ್ರಂಥ ಭಾರವನೆ ವಹಿಸಿ ಮುದ್ದು ತೊತ್ತೆನಿಸಿ ಎತ್ತಾಗಿ ಸೇವಿಸಿ ಯತಿಯಾಗಿ ನಿಂದ ತತ್ತ್ವಮುತ್ತಿನ ಖಣಿಯೆ 7 ಇಳೆಯೊಳಗೆ ನಿನ್ನಂಥ ಕರುಣಾಳುಗಳ ಕಾಣೆ ಅಳವಲ್ಲ ವರ್ಣಿಸಲು ನಿನ್ನ ಗುಣಗಳನು ಮಳಖೇಡವಾಸ ಯತಿಕುಲಾಧೀಶಾ 8 ಗುರುವೆ ನಿನ್ನಯ ಕರುಣಕವಚ ತೊಟ್ಟವರ ಚರಣಕಮಲದೊಳಿಹ ಮಧುಪನೆಂದೆನಿಸೋ ನಿರುತ ದೃಢಭಕುತಿ ಶ್ರೀ ವೇಂಕಟೇಶನೊಳಿಟ್ಟುಪೊರೆಯೊ ಶ್ರೀ ಗುರುವರಾಗ್ರಣಿಯೆ ನಮೋ ಎಂಬೆ9
--------------
ಉರಗಾದ್ರಿವಾಸವಿಠಲದಾಸರು
ತ್ರ್ಯಕ್ಷಾಂಶ ಸಂಭೂತ | ಅಕ್ಷೋಭ್ಯ ಕರಜಾತಕುಕ್ಷಿಯೊಳಗೆ ಖ್ಯಾತ | ಟೀಕಾರ್ಯರೆಂಬಾತ ಪ ಮರುತ ಮತಾಬ್ಧಿ ಸೋಮ | ಹರಿಗುಣ ಗಣಸ್ತೋಮಬರೆದು ವಿಬುಧಸ್ತೋಮ | ಪೊರೆದ ನಿಸ್ಸೀಮಾ ಅ.ಪ. ಎರಗೋಳ ಗುಹೆಯಲ್ಲಿ | ಮರುತ ಮತ ಗ್ರಂಥದಲಿನಿರುತ ಬಹು ಆಸಕ್ತ | ಟೀಕೆಗಳ ಕರ್ತಾ 1 ವೃಷಭದಾಕೃತಿ ಧರಿಸಿ | ಅಸುಪತಿಯ ಸೇವಿಸೀಎಸೆವ ಗ್ರಂಥಗಳ್ಹೊತ್ತು | ಜನ್ಮ ಸ್ಮøತಿ ಪೊತ್ತೂ 2 ಭೋಗಿ ಆವೇಶಿತನೆಯೋಗಿ ಕುಲ ಕಮಲಾಪ್ತ | ಮಾಯಿ ಮತ ಹರ್ತಾ 3 ವೇನ ಮತ ದುಧ್ರ್ವಾಂತ | ಕಳೆಯಲ್ಕೆ ಸುಧೆ ಗ್ರಂಥಜ್ಞಾನ ಸೂರ್ಯನೆ ಇತ್ತೂ | ಕಳೆದೆ ಆಪತ್ತೂ4 ಗೋವುಗಳ ಪಾಲ ಗುರು | ಗೋವಿಂದ ವಿಠಲದೇವ ಗುಣಗಳ ಜಾತ | ಬರೆದ ವಿಖ್ಯಾತಾ 5
--------------
ಗುರುಗೋವಿಂದವಿಠಲರು
ದಯದಿ ಎಮ್ಮನು ಸಲಹ ಬೇಕಯ್ಯ | ಮಳಖೇಡ ನಿಲಯ ದಯದಿ ಎಮ್ಮನು ಸಲಹ ಬೇಕಯ್ಯ ಪ ದಯದಿ ಎಮ್ಮನು ಸಲಹ ಬೇಕೈ | ವಿಯದಧಿಪ ಸದ್ದಂಶ ಸಂಭವ ಭಯ ವಿದೂರನ ತೋರು ಎನುತಲಿ | ಜಯ ಮುನೀಂದ್ರನೆ ಬೇಡ್ವೆ ನಿನ್ನನು ಅ.ಪ. `ಇಂದ್ರಸ್ಯನು ವೀರ್ಯಾಣ’ ಎಂದೆನುತ | ಇತ್ಯಾದಿಋಕ್ಕುಗಳಿಂದ ಬಹುತೆರೆ ನೀನು ಪ್ರತಿಪಾದ್ಯ ||ಅಂದು ಮೇಘದ ಜಲವು ಬೀಳದೆ | ಬಂಧಗೈದಹಿನಾಮ ದೈತ್ಯನಕೊಂದು ಉದ್ಧರಿಸಿರುವ ಪರಿಯಲಿ | ಮುಂದೆ ದುರ್ವಾದಿಗಳ ಖಂಡಿಪೆ 1 ವಾಲಿಯಂದದಿ ದೃಷ್ಟಿಮಾತ್ರದಲಿ | ಶತೃಗತಬಲಲೀಲೆಯಿಂದಪಹರಿಪೆ ನಿಮಿಷದಲಿ ||ಕಾಲ ತ್ರೇತೆಯಲಂದು ದುಷ್ಟರ | ವಾಲಿರೂಪದಿ ವಾರಿಸಿದ ಪರಿಕಾಲ ದ್ವಾಪರದಲ್ಲಿ ಪ್ರಾರ್ಥನೆ | ಲೀಲೆ ರೂಪಿಯು ಕೃಷ್ಣಸೇವಕ 2 ದೃಷ್ಟಿ ಮಾತ್ರದಿ ಕರ್ಣಗತ ಬಲವ | ಅಪಹರಿಸಿ ನೀನುಕ್ಲಿಷ್ಟ ಯುದ್ಧದಿ ಗಳಿಸಿ ನೀ ಜಯವ ||ಶ್ರೇಷ್ಠ ಕರ್ಣನ ಅಸುವ ಕೊಳ್ಳುತ | ಸುಷ್ಠು ಅರಿಬಲ ನಾಶಮಾಡುತಭ್ರಷ್ಟ ಕೌರವನೀಗೆ ದುಃಖದ | ಕೃಷ್ಣಗರ್ಪಿಸಿ ಕೈಯ್ಯ ಮುಗಿದೆಯೊ 3 ಕಾಲ ಕಲಿಯುಗದಲ್ಲಿ ಬಲ ಭೀಮ | ಮಧ್ವಾಭಿಧಾನದಿಮೂಲ ಮೂವತ್ತೇಳು ಸೂನಾಮ ||ಭಾಳ ಗ್ರಂಥಗಳನ್ನೆರಚಿಸೀ | ಕಾಲಟಿಜಕೃತಮಾಯಿ ಮತವನುಲೀಲೆಯಿಂದಲಿ ಖಂಡಿಸುತ್ತ | ಪಾಲಿಸುತ್ತಿರೆ ಸುಜನರನ್ನು 4 `ವೃಷಾಯ ಮಾಣೆಂಬ` ಋಕ್ಕಿನಲಿ ದೇವ ಇಂದ್ರಗೆವೃಷಭದಾಕೃತಿ ಪೇಳಿಹುದು ಅಲ್ಲಿ ||ವೃಷಭ ನೀನಾಗಂತೆ ಕಲಿಯಲಿ | ಎಸೆವ ಶ್ರೀ ಮನ್ಮಧ್ವ ಗ್ರಂಥದಹಸಿಬೆ ಚೀಲವ ಹೊತ್ತು ತಿರುಗುತ | ಅಸುಪತಿಯ ಸೇವಿಸಿದ ಮಹಿಮ5 ಅಗಸ್ತ್ಯ ಮುನಿ ಸಕಲ ತೀರ್ಥಗಳ | ಸಂಗ್ರಹಿಸಿ ಕರದಿಸಾಗಿ ಗಿರ್ಯಾನಂತ ಕಮಂಡೂಲ ||ವೇಗ ಕೆಳಗಿಟ್ಟಾಚಮನ ಅಲ್ಪ | ಕಾಗಿ ಸ್ವಲ್ಪವುದೂರ ಪೋಗಲುಕಾಗೆ ರೂಪದಿ ಬಂದು ಇಂದ್ರನು | ವೇಗ ಉರುಳಿಸೆ ಜಲವು ಹರಿಯಿತು 6 ದೆವರಾಜನು ಕಾಣಿಸಿ ಕೊಳಲು | ಮುನಿಯು ಆಕ್ಷಣದೇವ ಕಾರ್ಯದ ಭಾವ ತಿಳಿಯಲು ||ಓವಿ ತತ್ಕಾಗಿಣಿಯ ನಾಮದಿ | ಭೂವಲಯದೊಳ್ಬಾತಿಸಲಿ ಎನೆತೀವರಾಶೀರ್ವಾದ ದಿಂದಲಿ | ಪಾವನವು ತತ್ ಕ್ಷೇತ್ರ ವಾಯಿತು 7 ಪಾಂಡು ಮಧ್ಯಮನಾದ ಅರ್ಜುನನು | ಇಲ್ಯುದಿಸಿ ಪೊತ್ತಧೋಂಡು ರಘುನಾಥ ಪೆಸರನ್ನು || ಗೊಂಡು ನಾಯಕ ತನವ ಅಶ್ವಕೆ | ಅಂಡಲೆದು ಬರುತಿಲ್ಲಿ ಬಿಸಿಲಲಿ ಉಂಡು ಉಂಬುದ ಜಲವ ಪಶುಪರಿ | ಕಂಡು ಮುನಿ ಅಕ್ಷೋಭ್ಯ ಬೆಸಸಿದ 8 ಸ್ವಪ್ನ ಸೂಚಿಸಿದಂತೆ ಮುನಿಶ್ರೇಷ್ಠ | ನೀರ್ಗುಡಿದವ ನರೆ ಬಪ್ಪುವನು ತಮ ಪೀಠಕೆನ್ನುತ್ತ || ಸ್ವಲ್ಪ ಹಾಸ್ಯದಿ ಪಶುವು ಪೂರ್ವದಿ | ಒಪ್ಪುವೆಯಾ ನೀನೆನ್ನ ಸಾದಿಗೆ ನೆಪ್ಪು ಬಂದುದು ವೃಷಭ ಜನ್ಮದಿ | ಕೃಪ್ಪೆಗೈದಿಹ ಮಧ್ವರನುಗ್ರಹ 9 ಸಾದಿ ಭೂಪನು ಕಳುಹಿ ತನ್ನ ಸೈನ್ಯ | ಅಕ್ಷೋಭ್ಯ ಮುನಿಪರ ಪಾದಕೆರಗುತ ಆಶ್ರಮವು ತುರ್ಯ ||ಮೋದದಿಂದ್ಯಾಚಿಸಲು ಮುನಿವರ | ಆದಿಯಿಂದಲಿ ಬಂದ ಪೀಠಕೆಸಾದರದಿ ಪಟ್ಟಾಭಿಷಕ್ತನ ಗೈದು ಆಶೀರ್ವಾದ ಮಾಡಿದ 10 ಸುತನು ತುರ್ಯಾಶ್ರಮವ ಪೊತ್ತುದನ | ಕೇಳುತ್ತ ತಂದೆಅತುಳ ಕೋಪದಿ ನಿಂದಿಸಿದ ಮುನಿವರನ |ಸುತನ ಗೃಹ ಕೆಳತಂದು ಪತ್ನಿಯ | ಜೊತೆಯಲಿಡೆ ಏಕಾಂತ ಗೃಹದಲಿಅತುಳ ಸರ್ಪಾ ಕೃತಿಯ ಕಾಣುತ | ಭೀತಿಯಲಿ ಚೀರಿದಳು ಕನ್ಯೆಯು11 ಸೋಜಿಗದ ತನಯನ್ನ ಕೊಳ್ಳುತ್ತ | ಮುನಿವರರ ಬಳಿಗೆ ಯೋಜಿಸೀದನು ಕ್ಷಮೆಯ ಬೇಡುತ್ತ ||ಆರ್ಜವದ ಮುನಿ ಕ್ಷಮಿಸಿ ತಂದೆಯ | ಮಾಜದಲೆ ತಮ್ಮ ಶಿಷ್ಯಭೂಪಗೆಯೋಜಿಸಿದರನ್ವರ್ಥನಾಮವ | ಶ್ರೀ ಜಯಾಭಿಧ ತೀರ್ಥರೆನ್ನುತ 12 ಪರ ಕರಿ ಹರ್ಯಕ್ಷರಾದಿರಿ 13 ಮಧ್ವಭಾಷ್ಯಕೆ ಟೀಕೆ ರಚಿಸುತ್ತ | ಯರಗೋಳ ಗುಹೆಯಲಿಶುದ್ಧ ಭಾವದಿ ಇರಲು ಮದಮತ್ತ ||ವಿದ್ಯ ಅರಣ್ಯಭಿಧ ನೋಡೀ | ಮಧ್ವಕೃತ ಸನ್ಮಾನ ಲಕ್ಷಣಬುದ್ಧಿಗೇ ನಿಲುಕದಲೆ ಟೀಕೆಯ | ಪದ್ಧತಿಯ ಕಂಢರ್ಷಪಟ್ಟನು 14 ಮಾಧ್ವಭಾಷ್ಯವ ನೇರಿಸಿ ಗಜವ | ತಟ್ಟೀಕೆ ಅಂತೆಯೆಅದ್ಧುರೀಯಲಿ ಗೈದು ಉತ್ಸವವ ||ವಿದ್ಯವನ ಮುನಿಪೋತ್ತುಮನು ಬಹು | ಶುದ್ಧಭಾವದಿ ಗೈದು ಸಂತಸಬುದ್ಧಿಯಲಿ ಪರಿವಾರ ಸಹಿತದಿ | ಸದ್ದುಯಿಲ್ಲದೆ ಪೋದನಂದಿನ 15 ಹತ್ತೆರಡು ಮತ್ತೊಂದು ಕುಭಾಷ್ಯ | ವಿಸ್ತರದಿ ಖಂಡಿಸೆಕೃತ್ಯವೂ ಮಧ್ವಕೃತವನುವ್ಯಾಖ್ಯಾ ||ಮತ್ತಿದಕೆ ಸೂಧಾಖ್ಯ ಟೀಕವ | ವಿಸ್ತøತವು ನಿಮ್ಮಿಂದ ಜಯಮುನಿಮೊತ್ತದಿಂಧ್ಹತ್ತೆಂಟು ಗ್ರಂಥಕೆ | ಕೃತ್ಯವಾಯಿತು ನಿಮ್ಮ ಟೀಕೆಯು16 ಪಾದ ಪಾದ ತೋರ್ವುದು ||
--------------
ಗುರುಗೋವಿಂದವಿಠಲರು
ಪಶುಪತಿ ಶಂಭೋ |ಅಸುಪತಿಯನೆ ತೋರೋ || ಕರುಣವ ನೀ ಬೀರೋ ಪ ಮನಸೀನ ಒಡೆಯನೆ | ಕನಸು ಮನಸಿನಲಿಅನಘ ಹರಿಯ ಪದ | ನೆನೆವ ಮತಿಯನಿತ್ತುಎಣಿಸು ಭಕ್ತನೆಂದು || ಬೇಡುವೆ ಇನಿತೆಂದು ಅ.ಪ. ಮಾಹಿತಾಂಘ್ರಿಯ | ವಾಹಕನ ಸಮಮೋಹಶಾಸ್ತ್ರ ಪ್ರ | ವಾಹ ರಚಿಸುತ ||ದ್ರೋಹಿಗಳ ಬಲು | ಮೋಹ ಪಡಿಸುತಶ್ರೀ ಹರಿಯ ಸಖ | ಪಾಹಿ ಸುಖಪ್ರದ1 ಕಟಿ ಸೂತ್ರ | ಒಪ್ಪೊತವ ಸುತ ||ಸರ್ಪಾರಿ ಸಮಪದ | ಕಪ್ಪೊಗೊರಳ ಹರತಪ್ಪೊಗಳನು ಎಲ್ಲ | ಒಪ್ಪಿಕೊಳ್ಳಯ್ಯ 2 ಕರ್ಪರ | ಮೈಲಿ ಭಸ್ಮವು |ಶೂಲ ಪಾಣಿಯೆ | ಶೈಲಜಾಪತೆ ||ಕಾಲಕಾಲಕೆ | ಕಾಲನಾಮನಶೀಲ ಸ್ಮøತಿಯನು | ಪಾಲಿಪುದು ಹರ 3 ವಾಸ ಮಶಣವು | ಕೇಶ ವ್ಯೋಮವುಹೇ ಸದಾಶಿವ | ನೀ ಸಲಹೊ ಎನ್ನ ||ಮೀಸಲದ ಮನ | ಕಾಶಿಸುವೆ ಹರಹೇ ಸದಾಗತಿ ಕೂಸು ನೀ ನಲ್ಲೆ 4 ದೇವ ವರ ಶಿವ | ಮಾವ ವೈರಿಯಹಾವ ಭಾವಕೆ | ಓದಿ ಮೋಹಿಸುತ ||ಧಾವಿಸಲು ಹರಿ | ತೀವ್ರ ಕಾಯ್ದನುಗೋವಳನು ಗುರು | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಪ್ರಾಣಾ ನೀ ಕಲ್ಯಾಣಗುಣ ಗೀರ್ವಾಣಾದ್ಯರ ಮಣಿ ಜೀವಗಣ ಗುಣಕಾರ್ಯತ್ರಾಣ ಅಗಣಿತಮಹಿಮ ಪ ಇನ್ನೆಣೆಯುಂಟೆ ತ್ರಿಭುವನ ತ್ರಾಣ ನಿನ್ನ ಆಣತಿಯಂತೆ ಪಂಚಪ್ರಾಣ ಅಣುಘನತೃಣ ಮೊದಲು ಪಣೆಗಣ್ಣ ಸುರ ಗಣಾದ್ಯಮರರೊಳಗನವರತ ನೀ ಘನ್ನ ಫಣಿರಾಜಗುರು ನಿನಗೆಣೆಯುಂಟೆ ನೀರಜಭ ಮುಖ್ಯಪ್ರಾಣ ಬಾದರಾ ಯಣನನುಗ ಆನಂದಗುಣಭರಿತ ಕೃತಿರ- ಮಣನ ಸುತೆ ರಮಣ ನೀ ಕ- ರುಣಿಸಿದರುಂಟು ಶ್ರೀಹರಿಯ ಕರುಣಾಅ.ಪ ಮರುತಾ ಶ್ರೀ ಹರಿಯಿಂದಲನವರತ ಪ್ರೇರಿತನಾಗಿ ನಿರುತಾ ಜಗಕಾರ್ಯದೊಳು ಸತತ ನೀ ಬಿಡದಿರೆಡರಿಲ್ಲ ಮರುತಾ ಜಗಚೇಷ್ಟಪ್ರದ ನೀನಹುದೊ ಶಕ್ತಾ ವರ ಮಂತ್ರಿಯಾಗಿ ನೀ ಹರಿಗೆ ಭಕ್ತಾಗ್ರಣಿಯೆ ಯಂತ್ರೋ- ದ್ಧ್ದಾರ ಶ್ರೀ ಹನುಮಂತಾ ಬಲಭೀಮ ಗುರುಮಧ್ವಶಾಂತಾ ತ್ರಿಕೋ ಟಿರೂಪಧರ ಖ್ಯಾತ ಸುರಾಸುರನರೋರಗಗಳನವರತ ಸರ್ವವ್ಯಾಪಾರ ನೀ ನಡೆಸಿ ಪೊರೆವ ಸದ್ಗುರುವರ ಸುಸಮೀರಾ ನೀರಜಾಂಡವ ಕೂರ್ಮರೂಪದೊಳು ನಿಂತು ನೀ ಭಾರವಹಿಸಿ ಮೆರೆದೆ ಶ್ರೀ ವಾಯುಕುವರಾ1 ಸೃಷ್ಟಿಗೊಡೆಯನಿಗೆ ನೀನಿಷ್ಟಪುತ್ರ ನಿನ್ನಷ್ಟುಜ್ಞಾನ ಪರಮೇಷ್ಠಿಗಲ್ಲದೆ ಎಷ್ಟು ನೋಡಿದರು ಇತರರಲಿ ಎಳ್ಳಷ್ಟಿರೆಣೆಯಿಲ್ಲ ತುಷ್ಠಿಪಡಿಸುವೆ ಹರಿಯ ಜೇಷ್ಟದಾಯರ ಶ್ರೇಷ್ಟ ಮೂರುತಿ ಕವಿಶ್ರೇಷ್ಟ ನೀನೆನಿಸಿ ಲಂಕಾ ಶ್ರೇಷ್ಟನೆನಿಸಿದ ದುಷ್ಟದೈತ್ಯನಾ ಮರವನ್ನ ಹುಟ್ಟನಡಗಿಸಿ ಸುಟ್ಟಿ ಲಂಕಪಟ್ಟಣವನ್ನು ಪುಟ್ಟಿದಾಗಲೆ ಬೆಟ್ಟ ಹಿಟ್ಟನು ಮಾಡಿ ಆ ದುಷ್ಟಭಾಷ್ಯಗಳ ಕಷ್ಟ ಪರಿಹರಿಸಿ ನಿ- ರ್ದುಷ್ಟತತ್ವವ ತೋರ್ದೆ ಎಷ್ಟು ಶಕ್ತನು ಜೀವ- ಶ್ರೇಷ್ಠಮೂರುತಿ ಸರ್ವ ಕಷ್ಟ ಹರಿಸಿ ನಿನ್ನ ಇಷ್ಟಭಕುತರ ಸೇವೆ ಕೊಟ್ಟು ಶ್ರೀ ಹರಿಯ ಶ್ರೇಷ್ಠಮೂರುತಿ ತೋರೋ ಇಷ್ಟದಾಯಕ ಗುರು ಶ್ರೇಷ್ಠ ಮಾರುತಿಯೆ2 ಈಶ ಪ್ರೇರಣೆಯಿಂದ ಈ ನಶ್ವರದೇಹದೊಳು ಆ ಸಮಯದಲಿ ಅಪಾನನಿಂದೊಡಗೂಡಿ ಪ್ರಾಣೇಶ ನಿನ್ನಿಂದ ಎಲ್ಲ ಚೇತನವಿಹುದೋ ವಾಸವಾಗಿರುವನಕ ಈ ಶರೀರ ಕಾರ್ಯ ಶಾಶ್ವತ ನಡೆವುದೋ ಕಲ್ಪಾವಸಾನ ಮೋಕ್ಷಪರಿಯಂತ ಲೇಶ ಬಿಡದಲೆ ಬಪ್ಪ ಜಡದೇಹದೊಳು ನೀ ವಾಸವಾಗಿಹೆ ದೇವ ಶಾಶ್ವತನಾಗಿ ಆಯಾಸವಿಲ್ಲದಲೆ ಊಧ್ರ್ವಗಮನದಿ ಪ್ರಾಣ ಅಪಾನನಿಂದಗಲಲೀದೇಹ ಭೂಶಯನ ವಾಸ ಜಡವೆಂದೆನಿಸಿ ಆ ಶರೀರವು ಭೂತಪಂಚಕದಿ ಸೇರುವುದು ಪ್ರಾಣೇಶ ನೀನಾಗ ಹರಿಯನ್ನು ಸೇರುವೆ ಏಸು ಚರಿತೆಯೊ ಅನಿಲ ಶಾಶ್ವತನು ನೀನು ಅಶಾಶ್ವತ ದೇಹಗಳ ಮಾಳ್ಪ ನಿನ್ನಯ ಕಾರ್ಯ ಏಸುಕಾಲಕು ದೇಹದಿಂ ಮೃತರೈಯ್ಯ ಜೀವರು ಶ್ರೀಶನಾತ್ಮಜ ನೀನಮೃತನೆನಿಸೀ ಮೆರೆವೆ ಈಶ ಪ್ರೇರಣೆ ನಿನಗೆ- ನಿನ್ನ ಪ್ರೇರಣೆ ಎಮಗೆ ಅಸುಪತಿಯೆ ನಿನಗಿದು ಹೊಸ ಪರಿಯಲ್ಲವೊ ಮೀಸಲಾಗಿರಿಸು ಶ್ರೀ ವೇಂಕಟೇಶನ ಪಾದ ದಾಸನೆನಿಸೊ ಪವನೇಶ ಉರಗಾದ್ರಿವಾಸ ವಿಠಲನ ದಾಸ ಎನ್ನ ಮನದಾಸೆ ನೀ ಸಲಿಸಿ ನಿಜ ದಾಸಜನ ಸಹವಾಸವಿತ್ತು ಅನಿಶ ಭವ ಪಾಶ ಸಡಿಲಿಸಿ ಸುಖವಾಸವೀಯೊ ಗುರು ಮಾತರಿಶ್ವ 3
--------------
ಉರಗಾದ್ರಿವಾಸವಿಠಲದಾಸರು