ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘೋರವಾರಾ ದುಃಖ ಪಾರಾವಾರಾವಿಲ್ಲ ಸಾಧುತಾ ಸಂಸಾರ ಪ ನೀರ ಪೊಕ್ಕು ಬಾರಾ ಬೆನ್ನಿನಲಿ ಧರಾ ಧಾರಿ ನರಹರಿ ಎನಿಸೆ ಅಸಾರ ಸಂಸಾರ ಧಿಕ್ಕಾರವೆಂಬೇನೇ ಸುರಾರಿ ವೃಂದದ ಸಂಹಾರ ಕಾರಣ 1 ದಾನಾ ಬೇಡಿ ಮಾತಾ ಹಾನಿ ಮಾಡಿ ಸೀತಾ ಮಾನಿ ಮಾನಿನಿಯುಳಿಸೆ ಭೂನಾಥ ಶ್ರೀಯುತ ಭವದಾತನೆಂಬೆನೆ ದಾನವರಾಂತಕ ದೀನರಪಾಲಕ 2 ಅರಿವೆಗ¼ಲ್ಲ್ಲಾ ಹರಿಯೇರಬಲ್ಲ ನರಸಿಂಹವಿಠಲೆನಿಸಿ ಅರಿವಲ್ಲ ಭವಗುಲ್ಲ ತಾಳಲ್ಲಿ ಎಂದೇನೆ ಅರಿಭವಮಾರಕ ಸುರಲೋಕದರ್ಶಕ ಸಾಧುತಾ ಸಂಸಾರ 3
--------------
ನರಸಿಂಹವಿಠಲರು
ತಾಯಿ ಅಲ್ಲವೇ ನೀನು ಹೆತ್ತ ಪ ತಾಯಿಯಾದ ಮೇಲೆ ಕತ್ತೆಮರಿಯಾದರೂ ಪೊರೆಯಬೇಕುಎನ್ನ ಅ.ಪ. ಸಾರ್ಥಕಾಗಲಿಲ್ಲ ಜನುಮವು ವ್ಯರ್ಥವಾಯಿತಲ್ಲಾಸಾಗುತಿದೆ ಆಯು ಸಹಿಸಲಾರೆ ಬಡಿಸೆ ಭವದ ನೋವು 1 ಸಾರವೆಲ್ಲಿದೆ ಸಂಸಾರ ಶರಧಿಯೊಳಗೆ ಮುಣುಗಿದೆ ಅಸಾರ ಸುಖವ ಸವಿದು ಘನ ಸಂಸಾರಿ ಎನಿಸಿ ಮೆರೆದೆ 2 ನಿಷ್ಠೆಯಿಂದ ನಿನ್ನ ಭಜಿಸಿದೆ ಭ್ರಷ್ಟನಾದೆ ಇನ್ನು ಶಿಷ್ಟರೊಡಯ ತಂದೆವರದಗೋಪಾಲವಿಠ್ಠಲನ ಮುಟ್ಟಿ ಭಜಿಪ ಎನ್ನ 3
--------------
ತಂದೆವರದಗೋಪಾಲವಿಠಲರು
ತಾರಕವಿದು ಹರಿಕಥಾಮೃತಸಾರ ಜನಕೆ ಪ ಘೋರತರ ಅಸಾರ ಸಂಸಾರವೆಂಬ ವನಧಿಗೆ ನವ ಅ.ಪ. ಶ್ವಾನಸೂಕರಾದಿ ನೀಚಯೋನಿಗಳಲಿ ಬಂದು ನೊಂದು ವೈನತೇಯ ವಾಹನನ ಸನ್ನಿಧಾನ ಬೇಕು ಎಂಬುವರಿಗೆ 1 ಪ್ರಿಯವಸ್ತುಗಳೊಳಗೆ ಪಾಂಡುವೇಯ ಸಖನೆ ಎಮಗೆ ಬ್ರಹ್ಮ ಸುರರು ತಂದೆ ತಾಯಿ ಎಂದರಿತವರಿಗೆ 2 ಜ್ಞೇಯ ಜ್ಞಾನ ಜ್ಞಾತೃ ಬಾದರಾಯಣಾಖ್ಯ ಹರಿಯ ವಚನ ಕರ್ಮ ಶ್ರೀ ಯರಸ ನೀವನರಗೆ 3 ಶ್ರೀ ಮುಕುಂದ ಸರ್ವ ಮಮಸ್ವಾಮಿ ಅಂತರಾತ್ಮ ಪರಂ ಧಾಮ ದೀನಬಂಧು ಪುಣ್ಯ ನಾಮವೆಂದರಿತವರಿಗೆ 4 ಭೂತಭವ್ಯ ಭವತ್ಪ್ರಭು ಅನಾಥಜನರಬಂಧು ಜಗ ನ್ನಾಥ ವಿಠ್ಠಲ ಪಾಹಿಯೆಂದು ಮಾತುಮಾತಿಗೆಂಬುವರಿಗೆ 5
--------------
ಜಗನ್ನಾಥದಾಸರು
ವಿತ್ತ ಅಸಾರ್ಥಕತೆಯ ತಿಳಿದು ಪುರುಷಾರ್ಥ ಪ್ರದನು ಶ್ರೀ | ಹರಿಯ ಪ್ರಾರ್ಥಿಸೋ ಪ ಮಡದಿ ಮನೆ ಮಕ್ಕಳೆಲ್ಲ | ಬಿಡದೆ ನಿನ್ನ ಸೇವಿಸೋರುಹಿಡಿಯ ತುಂಬ ಹೊನ್ನು ಹಣವು | ಬಿಡದೆ ಬರುತಿರೇ 1 ಪ್ರಾಣ ಉತ್ಕ್ರಮಣ ಸಮಯ | ಮಾನಿನೀಯು ರೋದಿಪಾಳುಪ್ರಾಣ ಪೋದ ತನುವ ಸೋಕೆ | ತಾನೆ ಒಲ್ಲಳು 2 ಮಂದ ಮಾನವ 3 ಬಿಂಬ ಚಲಿಸೆ ತಾನು ಪ್ರತಿ | ಬಿಂಬ ಚಲಿಪ ಮತಿಯೆ ನಿಜವುಉಂಬು ಕೊಂಬ ಕೊಡುವುದೆಲ್ಲ | ಬಿಂಬದೆನ್ನೆಲೋ 4 ಇಂದಿರೇಶನರ್ಚಿಸೂತ | ಇಂದೆ ಗಳಿಸೊ ಪುಣ್ಯ ದ್ರವ್ಯನಂದ ಕಂದಗರ್ಪಿಸೋದು | ದ್ವಂದ್ವ ಕರ್ಮವ 5 ತನುವು ಮನವು ನಿನ್ನದಲ್ಲ | ಗುಣದ ಕಾರ್ಯ ನಿನ್ನದಲ್ಲನಾನು ನನ್ನದೆಂಬ ಮತಿಯು | ಹೀನ ತಿಳಿಯೆಲೋ 6 ನಿತ್ಯ ಬದ್ಧ ಜೀವಿ ನೀನು | ಸತ್ಯ ಸ್ವಾತಂತ್ರ ಹರಿಯುದತ್ತ ಕರ್ತೃತ್ವವಿಹುದು | ಕೃತ್ಯ ಉಂಬಲು 7 ಹರಿಯ ರೂಪ ಹೃದಯದಲ್ಲಿ | ಪರಿಕಿಸಾದೆ ಗತಿಯು ಇಲ್ಲಕರುಣಿಸಿಹನು ಮನುಜ ದೇಹ | ಹರಿಯ ಕಾಣಲು 8 ಮಧ್ವ ಮತದಿ ಜನ್ಮವಿರಲ | ಅವಿದ್ಯೆಗಳನ ನೀಗಿಕೊಂಡುಮಧ್ವಮುನಿಯ ಕರುಣ ಪಡೆದು | ಸಿದ್ಧನಾಗೆಲೋ 9 ಕಮಲ | ಭಾವದಿಂದ ಪೂಜಿಸಾದೆಸಾವು ಹುಟ್ಟು ತಪ್ಪೊದಿಲ್ಲ | ಕೋವಿದನಾದರು10 ಅಂಶದಿಂದ ಇರುತ ತಾವು | ಹಂಸ ಮಂತ್ರ ಸರ್ವರಲ್ಲಿವಿಂಶತ್ಯೇಕ ಸಾಸಿರಾವು | ಅಂತೆ ಷಟ್ಯತ 11 ದಿನಕೆ ಇಂತು ಜಪವ ಚರಿಸಿ | ವಿನಯದಿಂದನಿರುದ್ದನೀಗೆಎಣಿಕೆ ಮಾಡಿ ಅನಿಲ ಸಹಿತ | ತಾನೆ ಅರ್ಪಿಪ 12 ಪರ್ವಕಾಲದಿದನು ತಿಳಿದು | ಶರ್ವ ವಂದ್ಯ ಶೇಷಶಾಯಿಸರ್ವ ಕಾರ್ಯಗಳನು ಲಾ | ತವ್ಯ ಗಿತ್ತಿಹ 13 ದೈತ್ಯ ಜನರು ಅರಿಯದಂತೆ | ಯುಕ್ತನಾಗಿ ಬ್ರಹ್ಮ ವಾಯುಆಪ್ತ ವಾಕ್ಯ ಮೀರದಂತೆ | ಗುಪ್ತ ಚರಿಸುವ 14 ತತ್ವಕಿದು ವಿರುದ್ಧವಲ್ಲ | ವ್ಯಕ್ತ ವಿಹುದು ಲೋಕದಲ್ಲಿಮತ್ತೆ ಕ್ಷಣಕೆ ಒಪ್ಪೆನೆಂದು | ಇತ್ತು ಸ್ಥಾನವ 15 ಗೊತ್ತು ಮಾಡಿ ಪೋಗುವಂತೆ | ಭ್ರಾತೃ ವಾದಿರಾಜರೀಗೆಇತ್ತು ಪದವಿಗಳನು ತಾವು | ಸೂಕ್ತ ಪೇಳ್ವರು 16 ಭಾರತೀಶ ಕರ್ಮ ವೀಯೆ ಗುರುಗೋವಿಂದ ವಿಠಲ ಗತಿ ಇತ್ತು | ಕಾವ ಬಿಡದಲೆ 17
--------------
ಗುರುಗೋವಿಂದವಿಠಲರು
ಶ್ರೀ ಯುವನಾಮ ಸಂವತ್ಸರ ಸ್ತೋತ್ರ 152 ಉಗ್ರಂ ವೀರಂ ಮಹಾ ವಿಷ್ಣು ಅನುಪಮ ಮಹಾಜಾಜ್ವಲ್ಯ ಸರ್ವತೋಮುಖ ಭೀಷಣ ಭದ್ರ ಮೃತ್ಯು ನರಸಿಂಹ ದೇವ ದೇವ ದೇವೋತ್ತಮನಲಿ ಶರಣಾದೆ ಯುವನಾಮ ಸಂವತ್ಸರ ಅಸಮ ನಿಯಾಮಕನಲ್ಲಿ ಪ. ಬಾಲಿಶತನ ಕಳಿದು ಪ್ರೌಢಿಮೆಯಲಿ ಬರುವ ಯುವಕ ಯುವತಿಯರು ಸಾರ ಅಸಾರ ವಿವೇಕದಿ ಇಹಪರ ಸಾರ್ಥಕ ಆಗುವ ಜೀವನ ಕ್ರಮದಿ ಚರಿಸಲು ಯೋಗ್ಯವಾಗಿರುವದು ಈ ಯುವನಾಮ ವರ್ಷ 1 ಹರಿರೇವ ಪರೋ ಹರಿರೇವ ಗುರುರ್ ಹರಿರೇವ ಜಗತ್ಪಿತೃ ಮಾತೃಗತಿಃಯೆಂಬ ಪರಮೋತ್ತಮ ಬಲು ಆಪ್ತ ವಾಕ್ಯವ ಪ್ರತಿಕ್ಷಣ ಸಂಸ್ಮರಿಸಿದರೆ ಇಷ್ಟ ಸಿದ್ಧಿ ಅನಿಷ್ಟ ನಿವಾರಣ ದಿನ ದಿನ ವಿಹಿತ ಸಾಧು ಕರ್ಮ ಆಚರಿಪರಿಗೆ 2 ವಿಷ್ಣು ಪುರಾಣದಿ ಪರಾಶರ ಮಹರ್ಷಿ ಉಪದೇಶಿಸಿದಂತೆ ಪಾಷಂಡಿಗಳಲ್ಲಿ ಪಾಷಂಡ ಮತ ಪ್ರವರ್ತಕರಲಿ ಮೋಹ ಕೂಡದು ಸಾತ್ವಿಕ ಪುರಾಣಧಿಕ್ಕರಿಸುವ ಸ್ತ್ರೀ ಪುರುಷರ ಕ್ರೌರ್ಯಕ್ಕೆ ಬಾಗಿ ಸ್ನೇಹಿಸುವ ಜನರು ವಿಪತ್ತಿಗೆ ಗುರಿ ಜನ್ಮ ಜನ್ಮಕ್ಕೂ 3 ಯುವ ವರ್ಷ ರಾಜನು ಸಾಧು ಸಜ್ಜನಪ್ರಿಯ ಶನಿಮಹಾರಾಜನು ಹರಿಭಕ್ತರು ಸಜ್ಜನರುಗಳಿಗೆ ಸಹಾಯಕನು ಗೋಚಾರದಿ ಸ್ವಕ್ಷೇತ್ರಿ ಮೂಲ ತ್ರಿಕೋಣದೆ ಚಾರ ಶ್ರೀಹರಿ ನಿಯಮನದಿ ಮಂತ್ರಿ ಶುಕ್ರಚಾರ್ಯರು ಗೋಜನ ಪ್ರಿಯರು ಲೋಕ ಹಿತಕರರು 4 ಶನೈಶ್ಚರ ಕೃತ ಲಕ್ಷ್ಮಿ ಭೋಮ ನರಸಿಂಹ ಸ್ತೋತ್ರ ಅವಶ್ಯಪಠನೀಯ ಧಶರಥ ಕೃತ ಮತ್ತು ಪ್ರಸನ್ನ ಶ್ರೀನಿವಾಸೀಯ ಶನಿ ಸ್ತೋತ್ರ ಈ ನುಡಿಗಳು ಸಂವತ್ಸರ ಸ್ತೋತ್ರ ಯತಿವರ್ಯರು ಪಂಡಿತರು ಮತ್ತೆಲ್ಲರಿಂಪಠನೀಯ ಭಕ್ತಿ ಪೂರ್ವದಿ ಪಠಿಸಿ ಮನನ ಮಾಳ್ಪರಿಗೆ ವನರುಹಾಸನ ಪಿತ ಪ್ರಸನ್ನ ಶ್ರೀನಿವಾಸ ರಕ್ಷಿಸುವ ಪ್ರತಿಕ್ಷಣದಿ 5
--------------
ಪ್ರಸನ್ನ ಶ್ರೀನಿವಾಸದಾಸರು