ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

101. ಹರಿಹರ ಧ್ರುವತಾಳ ಹರಿಹರರಿಬ್ಬರು ಒಂದೇ ರೂಪವ ಧರಿಸಿ | ದುರುಳ ಗುಹಾಸುರನ ಕೊಂದರೆಂದೂ | ಮರಳು ಮಾನವರು ತಿಳಿಯಾದೆ ನುಡಿವರು | ಹರಿಹರರೀರ್ವರು ಏರವಾದರೆ ಅಂದು | ಹರನು ಮೈಮರೆದು ನಿಂದನ್ಯಾತಕೆ | ಧಾರುಣಿಯೊಳಗೆ ಹಿರಣ್ಯಕಶಿಪು ದೈತ್ಯ | ಸುರರ ಓಡಿಸಿ ಪ್ರಬಲನಾಗಿರೆ | ಪರಮ ಪುರುಷ ಹರಿ ನರಹರಿರೂಪವನ್ನು | ಧರಿಸಿ ರಕ್ಕಸನ್ನ ಕೊಲ್ಲುವಾಗಲಿ, ಕೇ | ಸರಿಯಾ ಬಳಿಗೆ ಪೋಗಿ ಮಾರೆಯಾ ಬೇಡಿಕೊಂಡು | ಮೆರದಾನೇನೋ ಅವತಾರ ಮಾಡಿ | ಹರಿಯ ಅದ್ಭೂತ ಶಕ್ತಿ ನಾನಾ ಲೀಲಾ ವಿನೋದ | ಚರಿಸೂವ ಪರಬೊಮ್ಮ ಗುಣಪೂರ್ಣ ನೂ | ತುರಗವದನ ಮತ್ಸ್ಯಕೂರ್ಮಸೂಕರ ವೇಷ | ಧರಿಸಿದಾತನು ಕಾಣೋ ಯುಗಯುಗದೀ | ಕರುಣಾಸಿಂಧು ನಮ್ಮ ವಿಜಯವಿಠಲರೇಯಾ | ಹರಿಹರ ರೂಪ ಧರಿಸಿದ ಕಾಣಿರೋ 1 ಮಟ್ಟತಾಳ ದೀಪದ ಉಪಕಾರ ದಿನಪಗೆ ಏನಾಹದು | ಭೂಪತಿಗಾಳಿನ ಅನುಸುಣ್ಯಾತಕೆ | ಕೋಪವನು ತಾಳಿ ಭೃಗುಮುನಿ ಕೈಯಿಂದ | ಶಾಪನ ಕೈಕೊಂಡನಂದು ಭಸ್ಮಾ ಸುರನ | ಆ ಪತ್ತಿಗಾರದೆ ಮೊರೆ ಇಡಲು ಕೇಳಿ | ಶ್ರೀಪತಿ ಮೊಗದಲಿ ಕಾಯದದ್ದು ಕಾಣದೆ | ಗೋಪಾಲ ವಿಜಯವಿಠಲ ಹರಿಹರ | ರೂಪವು ತಾನಾದ ಅನೇಕ ರೂಪನೊ 2 ತ್ರಿವಿಡಿತಾಳ ಕಂತು ಜನಕ ಶಿವನ ಬೇಡಿಕೊಂಡದ್ದು ಪುರಾ | ಣಾಂತರದಲ್ಲಿ ಪೇಳುತಿವೆ ನೋಡಿಕೊ | ಎಂತಾಹದೀ ನುಡಿ ಸಿದ್ಧವಲ್ಲವೊ ಶ್ರೀ | ನಖ ಮೌಳಿ ಅಭೀದಾನು | ವೈರಿ ಅರ್ಧಂಗವನೆ ತಾಳಿ | ನಿಂತಿಪ್ಪ ಶ್ರೀ ಹರಿಯಾ ಕೂಡಾ | ನಂತಾ ಕಲ್ಪರೆ ನಿಗಮಾ ಗೋಚರ ಸರ್ವ | ಸ್ವತಂತ್ರನು ಒಬ್ಬಾರ ಹಂಗಿಗಾನೆ | ಚಿಂತಾಮಣಿಯಾ ಬಳಿಯಾ ನಾಡ ಹರಳನೆ ತಂದು | ಸಂತತವಿಟ್ಟರೆ ಸರಿಯಾಗೋದೆ | ಸಂತೋಷ ಪೂರ್ಣಗೆ ದೈತ್ಯನ ಕೊಲ್ಲುವುದಕೆ | ಚಿಂತೆಮಾಡಿದನೆಂಬೊ ವಾರ್ತಿಯೇನೂ | ನಿತ್ಯ ಮೇಹಕವನೆ ತೋರಿ | ಅಂತು ಗಾಣದ ನರಕಕ್ಕೆ ಹಾಕೂವ | ದಂತಿ ವರದ ದೇವ ವಿಜಯವಿಠಲ ಜಗ | ದಂತರಿಯಾಮಿಗೆ ಅಸಾಧ್ಯ ಬಂದಿಲ್ಲ 3 ಅಟ್ಟತಾಳ ಹರಗೆ ಈ ಪ್ರತಿಪ ಉಳ್ಳರೆ ಭಸುಮಾ | ಸುರಗಂಜಿ ಹರಿಗೆ ಮೊರೆ ಇಡುವನೇನೊ | ಜರಸಂಧನಿಗೆ ಇತ್ತಾವರ ಮತ್ತೇನಾಯಿತು | ಮರಳಿ ರಾಮನಕೂಡ ಶರಧನು ಪಿಡಿದು ಮೈ | ಮರೆದು ನಿಂದದ್ದು ಸರ್ವ ಜಗ ವೆಲ್ಲ ಬಲ್ಲದು | ಕರಿ ರಾಜಾ ಆ ಮೂಲಾವೆಂದು ಕರೆವಾಗ | ಪರಮೇಷ್ಠಿ ಶಿವನೊ ಮತ್ತಾವನೊ ಕಾಯ್ದವ | ಸುರರೊಳಗೀತಾ ಗಿಂದಧಿಕ ದೇವರು ಇಲ್ಲಾ | ಹರಿಹರರೂಪಾ ಶ್ರೀ ವಿಜಯವಿಠಲರೇಯಾ | ಚರಿತೆಯ ತೋರುವ ಅವರ ಯೋಗ್ಯತಾದಷ್ಟು 4 ಆದಿತಾಳ ತ್ರಿಶೂಲ ಡಮರುಗ ಭಸಿತ ರುದ್ರಾಕ್ಷಿಯು | ಪಶುವಾಹನನಾಗಿ ಇಪ್ಪದಿದೆ | ಅಸುರಾರಿಯಲ್ಲದೆ ಅನ್ಯರೂಪಗಳಲ್ಲ | ಹಸನಾಗಿ ತಿಳಿದು ಈತನ ಮಹಿಮೆ ಕೊಂಡಾಡಿ | ಕೆಸರು ಕಸ್ತೂರಿಯಾದರೆ ಕೌತುಕವಲ್ಲವೇನೊ | ಶಶಿಧರ ಹರಿರೂಪ ದೊ[ಳು]ಕೂಡುವನೆ | ವಶವಾಗಿ ಇಪ್ಪನು ತದ್ರೂಪಾದಂತೆ ಕಾಣೊ | ಕುಶನ ಬಯಸುವನು ಸಮನಾಗಿ ನಿಲ್ಲುವನೆ | ಪಶುಗಳ ಕಾಯ್ದ ನಮ್ಮ ವಿಜಯವಿಠಲ ಪ | ರಶುರಾಮ ಕ್ಷೇತ್ರದಲಿ ಹರಿಹರ ರೂಪನಾದಾ 5 ಜತೆ ತುಂಗಮಹಿಮೆ ದೇವೋತ್ತುಂಗಾ ತುಂಗಾವಾಸ | ರಂಗ ವಿಜಯವಿಠಲ ಹರಿಹರ ಮೂರುತಿ 6
--------------
ವಿಜಯದಾಸ
ಇಕ್ಕೊ ಘನಪರಬ್ರಹ್ಮದ ಬೆಳಗಿದು ಶುಕಾದಿ ಮುನಿಗಳು ಸೇವಿಸುವದು ಧ್ರುವ ಅಗಣಿತವರ್ಣ ಅನೇಕವಿದು ತೇಜಃಪುಂಜವಿದು 1 ತಾ ತುಂಬಿಹುದು ಸುಬೋಧವಿದು 2 ಅಸಿಪದಲಕ್ಷಣ ಅಸಾಧ್ಯಯೋಗಿದು ಪಾಶಬದ್ಧಕರಿಗೆ ಭಾಸಿಸದು ಲೇಸಾಗಿ ಮಹಿಪತಿ ಸಾಧಿಸಿದು ಭಾಸ್ಕರಕೋಟಿ ಪ್ರಕಾಶವಿದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಮೋ ನಮಸ್ತೇ ನರಸಿಂಹ ದೇವಾ ಸ್ಮರಿಸುವವರ ಕಾವಾ ಪ ಸುಮಹಾತ್ಮ ನಿನೆಗೆಣೆ ಲೋಕದೊಳಾವಾ ತ್ರಿಭುವನ ಸಂಜೀವಾ ಉಮೆಯರಸನ ಹೃತ್ಕಮಲದ್ಯುಮಣಿ ಮಾ ರಮಣ ಕನಕ ಸಂಯಮಿ ವರವರದಾ ಅ ಕ್ಷೇತ್ರಜ್ಞ ಕ್ಷೇಮಧಾಮ ಭೂಮಾ ದಾನವ ಕುಲಭೀಮಾ ಸನ್ನುತ ಬ್ರಹ್ಮಾದಿ ಸ್ತೋಮಾ ಸನ್ಮಂಗಳ ನಾಮಾ ಚಿತ್ರ ಮಹಿಮನಕ್ಷತ್ರನೇಮಿಸ ರ್ವತ್ರಮಿತ್ರ ಸುಚರಿತ್ರ ಪವಿತ್ರ 1 ಅಪರಾಜಿತ ಅನಘ ಅನಿರ್ವಿಣ್ಣ ಲೋಕೈಕ ಶರಣ್ಯ ಶಫರಕೇತು ಕೋಟಿಲಾವಣ್ಯ ದೈತ್ಯೇಂದ್ರ ಹಿರಣ್ಯಕ ಶಿಪುಸುತನ ಕಾಯ್ದಪೆನೆನುತಲಿ ನಿ ಷ್ಕಪಟ ಮನುಜಹರಿವಪುಷ ನೀನಾದೆ 2 ತಪನ ಕೋಟಿ ಪ್ರಭಾವ ಶರೀರಾ ದುರಿತೌಘವಿದೂರಾ ಪ್ರಪಿತಾಮಹ ಮಂದಾರ ಖಳವಿಪಿನ ಕುಠಾರಾ ಕೃಪಣಬಂಧು ತವ ನಿಪುಣತನಕೆ ನಾ ನುಪಮೆಗಾಣೆ ಕಾಶ್ಯಪಿವರವಾಹನಾ 3 ವೇದವೇದಾಂಗವೇದ್ಯಾ ಸಾಧ್ಯ ಅಸಾಧ್ಯ ಶ್ರೀದ ಮುಕ್ತಾಮುಕ್ತರಾರಾಧ್ಯಾ ಅನವದ್ಯ ಮೋದಮಯನೆ ಪ್ರಹ್ಲಾದವರದ ನಿ ತ್ಯೋದಯ ಮಂಗಳ ಪಾದಕಮಲಕೆ 4 ಅನಿಮಿತ್ತ ಬಂಧು ಜಗನ್ನಾಥ ವಿಠಲ ಸಾಂಪ್ರತ ನಿನಗೆ ಬಿನ್ನೈಸುವೆ ಎನ್ನಯ ಮಾತಾ ಲಾಲಿಸುವುದು ತಾತಾ ಗಣನೆಯಿಲ್ಲದವ ಗುಣವೆನಿಸಿದೆ ಪ್ರತಿ ಕ್ಷಣಕೆ ಕಥಾಮೃತ ಉಣಿಸು ಕರುಣದಿ 5
--------------
ಜಗನ್ನಾಥದಾಸರು
ಜ್ಞಾನಿಯಾಗಬೇಕು ಅಜ್ಞಾನ ನೀಗಬೇಕು ತತ್ವಜ್ಞಾನದಿಂದಿರಬೇಕು ಮುಕ್ತಿ ತಾನೆ ಆವಾಗಕ್ಕು ಪ.ಅಬ್ಜಾನನನ್ನ ಪಾದಾಬ್ಜ ನಂಬಿರಿನ್ನು ಕುಶಬ್ದಗುಂದಿರಣ್ಣಭವಾಬ್ಧಿದಾಟಿರಣ್ಣ1ಮಾಡಿ ಸಾಧುಸಂಗ ಬಿಡಿ ಖಳರಹಂಗನೀವುನೋಡಿ ಅಂತರಂಗ ಕೈ ನೀಡುವನು ರಂಗ 2ತ್ಯಾಗಭೋಗಸರ್ವ ಶ್ರೀಹರಿಗೆ ಒಪ್ಪಿಸಿರುವ ಆಯೋಗಿಯನ್ನು ಕರೆವ ಶ್ರೀ ನಾಗಶಯನಹೊರೆವ3ತಿದ್ದಿನೋಡಿವರ್ಮಅಸಾಧ್ಯ ಶರ್ಮನರ್ಮ ಬೇಗೆದ್ದು ಬಿಡಿ ಅಧರ್ಮ ನಿನ್ನದು ಶುಭಕರ್ಮ 4ದಾಸರ ಜೀವನ ಭಕ್ತಪೋಷಕ ಪಾವನ ಶ್ರೀಪ್ರಸನ್ನ ವೆಂಕಟ ಪ್ರಸನ್ನ ಅಭಿಲಾಷೆ ಸಂಜÕನೆ ಧನ್ಯ 5
--------------
ಪ್ರಸನ್ನವೆಂಕಟದಾಸರು