ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರೀಬೇಡೋ ಮರೀಬೇಡೋ ಪಾದ ಮರೀಬೇಡೋ ಮರೀಬೇಡೋ ಪ ಮರೀಬೇಡೆಲೆ ಮನ ಜರಾಮರಣೆಂದೆಂಬ ತಿರುಗದ ಗಣೆ ಮಡುವಿನೋಳ್ಜಾರಿಬಿದ್ದುಅ.ಪ ಒಂದೆ ನಿಮಿಷ ಇಹ್ಯ ಚಂದಕಂಡು ಬಲು ಅಂದಗೆಡುವ ಸುಖ ಮಂದನಾಗಿ ಮೆಚ್ಚಿ 1 ನಿಜವನು ತಿಳಿಸದೆ ಮಜತೋರಿಸಿ ಬಲು ಗಿಜಿಗಿಜಿಮಾಡುವ ಕುಜಮತಿಯೊಳು ಬಿದ್ದು 2 ಅಸಮಸಂಪದಕೆ ಮಸಿಹಚ್ಚಿ ಒಂದುದಿನ ನಶಿಸಿಪೋಗುವ ಮಾಯ ಮುಸುಕಿನೊಳಗೆ ಸಿಕ್ಕು 3 ಸವಿಯದಾನಂದವನು ಭವಕೆ ಕಿಡಿಯನಿಟ್ಟು ಜವನಿಗೀಡೆನಿಸುವ ಭೂಸುಖಕ್ಕೊಳಪಟ್ಟು 4 ಪೊಡವಿಯೊಳಗೆ ತನ್ನ ದೃಢದಿ ಸ್ಮರಿಪರ ಬೇಡಿದ ಮನದಿಷ್ಟ ಕೊಡುವ ಶ್ರೀರಾಮನ 5
--------------
ರಾಮದಾಸರು