ಒಳಿತಲ್ಲ ನಿನ್ನ ತಳ್ಳಿ ಅಭಿಮಾನದೇವಿ
ಎಲೆ ತಾಯೆ ನಮಿಸುವೆನು ದೂರಾಗೆ ಮಾಯಿ ಪ
ಬಗೆಗೊಂಡು ಬ್ರಹ್ಮನ ತಲೆಯೊಂದು ಕಳೆದಿಟ್ಟು
ಹೆಗಲೇರಿ ಶಿವನ ಸುಡುಗಾಡದಿಳಿಸಿದಿ
ಜಗರಕ್ಷಕನನು ಹತ್ತು ಅವತಾರದೆಳಸಿದಿ
ನಿಗಯಿಟ್ಟಂದ್ರನ ಮೈ ಛಿದ್ರ ಮಾಡಿಟ್ಟಿ 1
ಸೆರೆಹಿಡಿದು ತಾರಕನ ಆರೆದಿನದವನಿಂ ಕೊಂದಿ
ಕರಪಿಡಿದು ಹಿರಣ್ಯನ ಅಸಮವರ ಸುಟ್ಟಿ
ನೆರೆಯಾಗಿ ರಾವಣ ಆರುಕೋಟ್ಯಾಯುಷ್ಯ
ಉರುತರದ ಸಿರಿಯೆಲ್ಲ ಮಾಯ ಮಾಡಿಟ್ಟಿ 2
ಸೆಳೆಕೊಂಡು ಕುರುಪನ ಕುಲನಾಶ ಮಾಡಿಟ್ಟಿ
ಒಲಿದು ಕಲಿಯುವಗೆಲ್ಲ ನುಂಗಲ್ಹತ್ತಿರುವಿ
ಸುಲಭದೆನ್ನನು ಬಿಟ್ಟು ಅಗಲದಿರ್ದರೆ ನಿನಗೆ
ಜಲಜಾಕ್ಷ ಶ್ರೀರಾಮನೊನರುಹಂಘ್ರ್ಯಾಣೆ 3