ಗಾಳಿಗಿಟ್ಟ ದೀಪಕಾಣಿರೋ ಈ ಸಂಸಾರ
ಗಾಳಿಗಿಟ್ಟ ದೀಪಕಾಣಿರೋ ಪ
ಗಾಳಿಗಿಟ್ಟ ದೀಪಕಾಣಿರೋ ಬೀಳು ಜಗದ ಬಾಳು ಎಲ್ಲ
ನೀಲಶಾಮನ ಪಾದನಂಬಿ ಕಾಲನಾಳಿನ ದಾಳಿ ಗೆಲಿಯಿರೋ ಅ.ಪ
ಸೂತ್ರಬೊಂಬೆಯಂತೆ ಕುಣಿಯುವ ಈ ದೇಹವೆಂಬ
ತುಂಬಿ ತುಳುಕುವ ಆ ಗಾಳಿ ನಿಮಗೆ
ಸೂತ್ರಧಾರಿಯ ಭಜಿಸಿ ಭವದ ಯಾತ್ರೆ ಜಯವ ಪೊಂದಿರಯ್ಯ 1
ಮಾಯೆಯಿಂದ ಕಲ್ಪಿಸಿರುವ ಈ ಮಾಯಕಲ್ಪ
ಮಾಯೆಯೊಳಗೆ ಲಯಿಸುತಿರುವ ಆ ಮಾಯಗಾರ
ಮಾಯದಾಟ ಆಡುತಿರುವ ತಿಳಿರೋ ನಿಜವ
ಮಾಯತುಂಬಿ ಮಾಯಬೆಳಗಿ ಮಾಯಜಗವೆನಿಸಿ ತೋರ್ಪ
ಮಾಯಮಹಿಮನ ಮರೆಯಬಿದ್ದು ಮಾಯಮೃತ್ಯು ಗೆಲ್ಲಿರಯ್ಯ 2
ವಿಷಮಕನಸಿನಂತೆ ತೋರುವ ಈ ಇಂದ್ರಜಾಲ
ಹಸನಗೆಡಿಸಿ ನಿಮಿಷದಡಗುವ ಈ ಹೇಯ ಮಲ
ಅಸಮಸುಖಕೆ ಬೆಂಕಿಹಚ್ಚುವ ಪಾಪಕೊಂಡವ
ಅಸಮಜ್ಞಾನದಿಂದ ದಾಂಟಿ ವಸುಧೆಗಧಿಕ ಶ್ರೀರಾಮಪಾದ
ಕುಸುಮಕ್ಹೊಂದಿ ನಿರ್ಮಲೆನಿಸಿ ಎಸೆವಮೋಕ್ಷ ಪಡೆಯಿರಯ್ಯ 3