ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಾಳಿಗಿಟ್ಟ ದೀಪಕಾಣಿರೋ ಈ ಸಂಸಾರ ಗಾಳಿಗಿಟ್ಟ ದೀಪಕಾಣಿರೋ ಪ ಗಾಳಿಗಿಟ್ಟ ದೀಪಕಾಣಿರೋ ಬೀಳು ಜಗದ ಬಾಳು ಎಲ್ಲ ನೀಲಶಾಮನ ಪಾದನಂಬಿ ಕಾಲನಾಳಿನ ದಾಳಿ ಗೆಲಿಯಿರೋ ಅ.ಪ ಸೂತ್ರಬೊಂಬೆಯಂತೆ ಕುಣಿಯುವ ಈ ದೇಹವೆಂಬ ತುಂಬಿ ತುಳುಕುವ ಆ ಗಾಳಿ ನಿಮಗೆ ಸೂತ್ರಧಾರಿಯ ಭಜಿಸಿ ಭವದ ಯಾತ್ರೆ ಜಯವ ಪೊಂದಿರಯ್ಯ 1 ಮಾಯೆಯಿಂದ ಕಲ್ಪಿಸಿರುವ ಈ ಮಾಯಕಲ್ಪ ಮಾಯೆಯೊಳಗೆ ಲಯಿಸುತಿರುವ ಆ ಮಾಯಗಾರ ಮಾಯದಾಟ ಆಡುತಿರುವ ತಿಳಿರೋ ನಿಜವ ಮಾಯತುಂಬಿ ಮಾಯಬೆಳಗಿ ಮಾಯಜಗವೆನಿಸಿ ತೋರ್ಪ ಮಾಯಮಹಿಮನ ಮರೆಯಬಿದ್ದು ಮಾಯಮೃತ್ಯು ಗೆಲ್ಲಿರಯ್ಯ 2 ವಿಷಮಕನಸಿನಂತೆ ತೋರುವ ಈ ಇಂದ್ರಜಾಲ ಹಸನಗೆಡಿಸಿ ನಿಮಿಷದಡಗುವ ಈ ಹೇಯ ಮಲ ಅಸಮಸುಖಕೆ ಬೆಂಕಿಹಚ್ಚುವ ಪಾಪಕೊಂಡವ ಅಸಮಜ್ಞಾನದಿಂದ ದಾಂಟಿ ವಸುಧೆಗಧಿಕ ಶ್ರೀರಾಮಪಾದ ಕುಸುಮಕ್ಹೊಂದಿ ನಿರ್ಮಲೆನಿಸಿ ಎಸೆವಮೋಕ್ಷ ಪಡೆಯಿರಯ್ಯ 3
--------------
ರಾಮದಾಸರು
ದೀನನಾಥ ನೀನೆ ಪ್ರಭು ಧ್ಯಾನಮಾಳ್ಪೆ ಕಾಯೊ ಕರುಣಿ ಪ ಜಾಹ್ನವೀಜನಕ ಜನಾರ್ದನ ಜಾನಕೀಪ್ರಿಯ ಜಗದೊಡೆಯ ವೇಣುಗೋಪಾಲ ನಿನ್ನ ಧ್ಯಾನಾನಂದ ಪಾಲಿಸಭವ 1 ಕವಿದುಕೊಂಡು ದಹಿಸುತಿರುವ ತಾಪ ಭಯವ ತರಿದು ಸುವಿಚಾರ ಸುಜನಸಂಗ ಜವದಿ ನೀಡಿ ದಯದಿ ಪೊರೆ 2 ವಿಷಯದ್ವಾಸನೆ ಪರಿಹರಿಸಿ ಅಸಮಜ್ಞಾನ ಸೌಖ್ಯವಿತ್ತು ಒಸೆದು ನಿಮ್ಮ ವಿಮಲಚರಣ ಕುಸುಮದಾಸನೆನಿಸು ಶ್ರೀರಾಮ 3
--------------
ರಾಮದಾಸರು
ವಿಷಯ ಸಂಗದಲಿಂದ ಕುಶಲವನು ಬಯಸಿದರೆಅಸಮಜ್ಞಾನಿಗಳ ಧೀಯು ಮಸಳಿ ಮರುಳಾಗುವುದುಭರತರಾಯನನೋಡುಹರಿಣ ಕುಣಪನು ಪೋಗೆಮೌನಿ ವಿಶ್ವಾಮಿತ್ರ ತಾನು ಊರ್ವಶಿ ಕೂಡಿವಿಪುಳಮತಿಯಾದ ಸೌಭರಿಯು ದೃಢ ಮನಸಿನಲಿಲೇಸಾದ ಕುಲದಲ್ಲಿ ಸಂಜನಿಸಿದಜಮಿಳನುಅಂದಣವನೇರಿದ ನಹುಷರಾಯನನೋಡುವಿಷಯದಲಿ ಮನ ಸನ್ನಿಕರ್ಷವಾದರೆ ನಿನ್ನವಿವಿಧ ಸಾಂಸಾರಿಕ ದುಃಖ ದರುಶನವಾಗೆಈಷಣತ್ರಯನಿನಗೆ ಮೋಸಗೊಳಿಸಿ ಕಡೆಗೆಕ್ರಿಮಿ ಭಸ್ಮ ಮಲವಾಗಿ ಪೋಪದೇಹಕೆ ಬಹಳಇಂತುಮಹಾಂತದೃಷ್ಟಾಂತ ತೋರಿದೆ ನಿನಗೆದ್ರವ್ಯಕಾರಕ ಕ್ರಿಯಭ್ರಮವೆಂಬ ಭ್ರಮಣದಲಿ
--------------
ಗೋಪಾಲದಾಸರು