ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವಿ ಯಶೋದೆಯು ದೇವ ಶ್ರೀ ಕೃಷ್ಣಗೆ ಪ. ಅಷ್ಟು ಬ್ರಹ್ಮಾಂಡವ ಪೊಟ್ಟೆಯೊಳಿಂಬಿಟ್ಟ ದಿಟ್ಟ ಶ್ರೀ ಕೃಷ್ಣಗೆ ಸೃಷ್ಟಿಯೊಳ್ ಸುಖಿಸೆಂದು 1 ದಿಟ್ಟಡಿಯಿಡುತಲಿ ದಿಟ್ಟ ಲೀಲೆಗಳನ್ನು ನೀ ನಷ್ಟು ತೋರಿಸು ಎಂದು ಪುಟ್ಟ ಶ್ರೀ ಕೃಷ್ಣನ 2 ಅಷ್ಟೈಶ್ವರ್ಯದಿ ದಿಟ್ಟ ಶ್ರೀ ಶ್ರೀನಿವಾಸ ಸುಖಿಸೆಂದು 3
--------------
ಸರಸ್ವತಿ ಬಾಯಿ
ನಾರಾಯಣ ನಿನ್ನ ನಾಮವೊಂದಿರುತಿರೆಬೇರೊಂದು ನಾಮವಿನ್ನ್ಯಾಕಯ್ಯ ಪ ನೆಟ್ಟನೆ ದಾರಿಯು ಬಟ್ಟೆಯೊಳಿರುತಿರೆಬೆಟ್ಟವ ಬಳಸಲಿನ್ನ್ಯಾಕಯ್ಯಅಷ್ಟೈಶ್ವರ್ಯದ ಮೃಷ್ಟಾನ್ನವಿರುತಿರೆಬಿಟ್ಟಿ ಕೂಳನು ತಿನ್ನಲ್ಯಾಕಯ್ಯ 1 ಪರುಶದ ಪಾಳಗಳಿರುತಿರೆ ಬೀದಿಜರಿಗಲ್ಲ ತೊಳೆಯಲಿನ್ಯಾಕಯ್ಯಹರಿವಾಣದೊಳಗಮೃತಾನ್ನವಿರುತಿರೆತಿರಿಪೆ ಕೂಳನು ತಿನ್ನಲ್ಯಾಕಯ್ಯ 2 ಬೆಲ್ಲವು ಕರದೊಳಗಿರುತಿರೆ ಕಾಡಕಲ್ಲನು ಕಡಿಯಲಿನ್ಯಾಕಯ್ಯಬಲ್ಲಿದ ನೆಲೆಯಾದಿಕೇಶವನಿರುತಿರೆಚಿಲ್ಲರೆ ದೈವದ ಹಂಬಲ್ಯಾಕಯ್ಯ 3
--------------
ಕನಕದಾಸ
ಪೂಜಿಪೆ ನಾ ಪರಮಪುರುಷನರಸಿ ಲಕ್ಷ್ಮಿಗೆ ಪ. ತೇಜಮಾದ ಭದ್ರಪೀಠದಿ ರಾಜೀವಾಕ್ಷಿ ಲಕುಮಿಯ ಅ.ಪ. ಧ್ಯಾನಮಾವಾಹನವ ಮಾಡಿ ಸ್ನಾನ ವಸವ ತೊಡಿಗೆ ತೊಡಿಸಿ ಪೂಜಿಸುವೆನು 1 ಕುಸುಮ ಮಾಲೆಯಿಂದ 2 ಕದಳೀ ಖರ್ಜೂರ ದ್ರಾಕ್ಷಿ ಮಧುರ ದಾಳಿಂಬ ನಾರಿಕೇಳ ಕರ ಚರಣ ತೊಳೆದು ಸದಮಲೆಗಾರುತಿ ಬೆಳಗುವೆನು 3 ಸ್ವಸ್ತಿ ಪೇಳುತ ವರಗಳ ಬೇಡಿ ಮುಕ್ತಿದಾತೆ ಮಾಂಗಲ್ಯ ಭಾಗ್ಯವನಿತ್ತು ಪಾಲಿಸೆಂದು ಕರವ ಮುಗಿದ 4 ಅಷ್ಟೈಶ್ವರ್ಯದಿಂದ ಮೆರೆವ ದಿಟ್ಟ ಮೂರುತಿ ಶ್ರೀ ಶ್ರೀನಿವಾಸನ ಕರುಣಿಸೆಂದು 5
--------------
ಸರಸ್ವತಿ ಬಾಯಿ
ರಾಮಚಂದ್ರನೇ ರಘುಕುಲೋತ್ತಮನೇ ಕಾಮಿತ ಫಲದಾಯಕನೇ ಏಳೈ ಬೇಗನೇ ಪ ಜಾನಕಿ ದೇವಿಯು ಪನ್ನೀರ ತುಂಬಿದ ಚಿನ್ನದ ಕಲಶವನು ಧರಿಸಿ ಹರಿ ನಿನ್ನಯ ಸನ್ನಿಧಿಯಲ್ಲೇ ನಿಂತಿಹಳು ಇನ್ನಾದರು ಮುಖವನು ತೊಳೆಯಲೇಳೊ ಅ.ಪ. ದುಷ್ಟ ರಾವಣನ ಕುಟ್ಟಿ ಕೆಡಹಿದ ಸೃಷ್ಟೀಶನೇ ಏಳೋ ಕಷ್ಟಾಗಿರುವುದು ಯುದ್ಧದಿ ನಿನಗೆ ದಯಾಳೋ ಪಟ್ಟವನೇರಲು ಇಟ್ಟಿಹುದು ಮುಹೂರ್ತವ ಇಂದಿನ ದಿನದೊಳು ಕೆಂಪಾಯಿತು ಮೂಡಲೊಳು ಅಷ್ಟೈಶ್ವರ್ಯದಿ ಪಟ್ಟಕ ಸಿಂಗರಿಸಿಟ್ಟು ವಶಿಷ್ಠಾದಿಗಳು ವಿಶಿಷ್ಟರು ನೋಡುತ ಕುಳಿತಿಹರೋ 1
--------------
ಹನುಮೇಶವಿಠಲ
ಹೊಯ್ಯಾಲೊ ಡಂಗುರವ - ಜಗ - |ದಯ್ಯನಯ್ಯ ಶ್ರೀಹರಿ ಅಲ್ಲದಿಲ್ಲವೆಂದುಪ.ಅಷ್ಟೈಶ್ವರ್ಯದ ಲಕುಮಿಯ ಅರಸೆಂದು |ಸೃಷ್ಟಿ - ಸ್ಥಿತಿ - ಲಯಕರ್ತನೆಂದು ||ಗಟ್ಟಿಯಾಗಿ ತಿಳಿದುಹರಿ ಎನ್ನದವರೆಲ್ಲ |ಭ್ರಷ್ಟರಾದರು ಇಹ - ಪರಕೆ ಬಾಹ್ಯರು ಎಂದು 1ಹರಿಯೆಂಬ ಬಾಲನ ಹರಹರ ಎನ್ನೆಂದು |ಕರುಣವಿಲ್ಲದೆ ಪಿತ ಬಾಧಿಸಲು ||ತರಳನ ಮೊರೆಕೇಳಿ ನರಮೃಗರೂಪದಿ |ಹರಿಯ ನಿಂದಕನ ಸಂಹರಿಸಿದ ಮಹಿಮೆಯ 2ಕರಿ ಆದಿಮೂಲನೆ ಕಾಯೆಂದು ಮೊರೆಯಿಡೆ |ಸುರರನು ಕರೆಯಲು ಬಲ್ಲದಿರೆ ||ಗರುಡನನೇರದೆ ಬಂದು ಮಕರಿಯ ಸೀಳ್ದು |ಕರಿರಾಜನ ಕಾಯ್ದ ಪರದೈವ ಹರಿಯೆಂದು 3ಸುರಪಗೊಲಿದು ಬಲಿಯ ಶಿರವನೊದ್ದಾಗಲೇ |ಸುರಸವು ಉದಿಸೆ ಶ್ರೀ ಹರಿಪಾದದಿ ||ಪರಮೇಷ್ಟಿ ತೊಳೆಯಲು ಪವಿತ್ರೋದಕವೆಂದು |ಹರ ತನ್ನ ಶಿರದಲ್ಲಿ ಧರಿಸಿದ ಮಹಿಮೆಯ 4ಮಾನಸಲಿಂಗಪೂಜೆಗೆ ಮೆಚ್ಚಿ ಶಿವ ಬಂದು |ಬಾಣನ ಬಾಗಿಲ ಕಾಯ್ದಿರಲು |ದಾನವಾಂತಕ ಸಾಸಿರ ತೋಳ ಕಡಿವಾಗ |ಮೌನದಿಂದೊಪ್ಪಿಸಿಕೊಟ್ಟ ಶಿವನು ಎಂದು 5ಭಕ್ತಗೊಲಿದು ಭಸ್ಮಾಸುರಗೆ ಶಿವ ವರವಿತ್ತು |ಭಕ್ತನ ಭಯದಿಂದ ಓಡುತಿರೆ ||ಯುಕ್ತಿಯಿಂದಸುರನ ಸುಟ್ಟು ಶಿವನ ಕಾಯ್ದ |ಶಕನು ಶ್ರೀಹರಿ ಅಲ್ಲದಿಲ್ಲವೆಂದು 6ಗರಳಜ್ವಾಲೆಗೆ ಸಿರಿರಾಮ - ರಾಮನೆಂದು |ಸ್ಮರಿಸುತಿರಲು ಉಮೆಯರಸನಾಗ ||ಕೊರಳು ಶೀತಲವಾಗೆ ಸಿತಿಕಂಠ ತನ್ನಯ |ಗಿರಿಜೆಗೆ - ರಾಮಮಂತ್ರವ ಕೊಟ್ಟ ಮಹಿಮೆಯ 7ಹರಬ್ರಹ್ಮ ಮೊದಲಾದ ಸುರರನುದಶಶಿರ |ಸೆರೆಹಿಡಿದು ಸೇವೆಯ ಕೊಳುತಿರಲು ||ಶರಧಿಯ ದಾಟಿ ರಾವಣನ ಸಂಹರಿಸಿದ |ಸುರರ ಲಜ್ಜೆಯ ಕಾಯ್ದ ಪರದೈವ ಹರಿಯೆಂದು 8ಜಗದುದ್ಧಾರನು ಜಗವ ಪೊರೆವನೀತ |ಜಗ ಬ್ರಹ್ಮಪ್ರಳಯದಿ ಮುಳುಗಲಾಗಿ ||ಮಗುವಾಗಿ ಜಗವನುದ್ಧರಿಸಿ ಪವಡಿಸಿ ಮತ್ತೆ |ಜಗದ ಜನಕಪುರಂದರವಿಠಲನೆಂದು9
--------------
ಪುರಂದರದಾಸರು