ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದೇ ನಾಮದಲಡಗಿದವೊ ಅಡಗಿದವೋ ಆಪ ಅಖಿಳ ವೇದಗಳು ಅ ಪ ಒಂದೇ ನಾಮವೆ ಪ್ರಹಲ್ಲಾದನ್ನ ರಕ್ಷಿಸಿತು ಒಂದೇ ನಾಮವೆ ಅಜಾಮಿಳಗೆ ವೊಲಿದಿತು ತಂದೆ ತಾಯ ಬಿಟ್ಟ ಕಂದ ಧ್ರುವರಾಯಗೆ ಆ ನಂದ ಪದವಿಯಿತ್ತ ಅದ್ಭುತ ಮಹಿಮೆಯು 1 ಮಚ್ಛಾದ್ಯನಂತಾವತಾರಾ ಸ್ವಚ್ಛ ಅಷ್ಟಾದಶ ಪುರಾಣ ಅಮೃತದ ಸಾರಾ ಕಚ್ಛಪ ತ್ರಿಜಗಕೆ ಆಧಾರ ತನ್ನ ಸ್ವೇಚ್ಛೆಯಿಂದಲಿ ತಾ ಮಾಡೋ ವ್ಯಾಪಾರಾ 2 ಒಬ್ಬರಿಂದಲಿ ತನಗಿಲ್ಲ ತಾ ನೊಬ್ಬನೆ ಜೀವರ ರಕ್ಷಿಪನೆಲ್ಲಾ ಕಬ್ಬುಬಿಲ್ಲಿನ ಪಿತ ವಿಜಯವಿಠ್ಠಲರೇಯ- ವೈ ದರ್ಭೆಯ ರಮಣನ ಸುಗುಣಗಳೆಲ್ಲಾ 3
--------------
ವಿಜಯದಾಸ
ಮಧ್ವೇಶ - ಮಧ್ವೇಶಾ ಪ ಸಿದ್ಧ ಮುನಿಯಲಿಂ | ದುದ್ಬವಿ ಶಾಸ್ತ್ರಗಳಬ್ದಿಯ ರಚಿಸುತ | ಉದ್ದರ ಸುಜನರ ಅ.ಪ. ವೇದ ವಿಭಾಗಗ | ಳಾದರದಿಂದಲಿಗೈದು ಋಷಿಗಳಿಗೆ | ಭೋದಿಸಿರುವೆ ಹರಿ 1 ನಿತ್ಯ ವೇದಾರ್ಥದ | ಸತ್ಯವನರಿಯಲುಕೃತ್ಯ ಮೀಮಾಂಸದ ಶಾಸ್ತ್ರ ನಿನ್ನೆಂದೆ 2 ಸೃಷ್ಟಿಗೀಶ ಹರಿ | ಅಷ್ಟಾದಶವೆನೆಸುಷ್ಠು ಪುರಾಣಗ | ಳಷ್ಟು ವಿರಚಿಸಿದೆ 3 ಈಶ ಮುಖ್ಯದಿವಿ | ಜೇಶ ನಮಸ್ಕøತವ್ಯಾಸಾಭಿಧ ಹರಿ | ಪೋಷಿಸು ಎಮ್ಮನು 4 ಉಂಬುವುಡುವುದು | ಕೊಂಬ ಕೊಡುವದನುಬಿಂಬ ಕೃತಗಳನೆ | ನಂಬಿಗೆ ಈಯೋ 5 ಮನಚಂಚಲ ತವ | ಗುಣ ರೂಪಗಳನುಗುಣಿಸಲಸಾಧ್ಯವು | ಮನದಿ ನೆಲಸೊ ಹರಿ6 ಕೀಟನಿಂದ ಭುವಿ | ರೋಟಿಸಿದ ಪ್ರಭುಸಾಟ ರಹಿತ ಹರಿ | ಕೋಟಿ ತಟತ್ಪ್ರಭ 7 ಸಪ್ತಧಾತು ತನು | ಸಪ್ತ ಕಮಲದಲಿಆಪ್ತನಿದ್ದು ನಿ | ರ್ಲಿಪ್ತನೆಂದೆನಿಸಿದೆ 8 ಭವ | ನೋವನು ಕಳೆಯನು 9
--------------
ಗುರುಗೋವಿಂದವಿಠಲರು
ಶ್ರೀ ರಮಣಿಯರಸ ಕಂ ಜೋದ್ಬವಾರ್ಚಿತ ಪುಣ್ಯ | ಚಾರುತರ ಯುಗ್ಮಪದ ರಂಜನಾಸುರ ಸಂ | ಹಾರ ಸುರ ಜನ ಪಾಲ ಪರಮಾನಂದ ಸಾ | ಕಾರನಲಿದುಪ್ಪವಡಿಸಾ ಹರಿಯೇ ಪ ಹರಿವೇಗ ಮಂಮೀರ್ವ ಹರಿಗಳೇಳಂಗಳದಲಿ | ಹರಿಯಾಗ್ರಜನನಿಂದ ಹರಿಪದದೊಳಗ ಜವದಿ ಹರಿವುತಿಹ ಝಗ ಝಗಿಪ ಹರಿಮಯದ ರಥದೊಳಗ | ಹರುಷಾದೊಳಡರ್ದು ಬಳಿಕಾ || ಹರಿದಿಕ್ಕಿ ಲಿಂದೊಗೆದು ಹರಿಜಗಳ ವಿಸ್ತರಿಸಿ | ಹರಿಯುಮೊದಲಾದವರ ಹರಿಸಿ ತೇಜವ ಜಗಕ | ಪರಿ ಹರಿಸಿ ಉದಿಸಿದಹರಿಯು ನರಹರಿಯೆ ಉಪ್ಪವಡಿಸಾಹರಿಯೇ1 ಪವನಜ ಖಗರಾಜ | ಭಜಿಪಧ್ರುವದ ಶಶಿರಾನುಜ ಭಿಷ್ಮಾ ತನ್ನ ಆ | ತ್ಮ ಜರಿತ್ತ ರಿಕ್ಷಪತಿ ರಜನೀಶ ವಾನ್ನರ | ಧ್ವಜ ವಿಧುರ ಅಂಬರೀಷಾ || ದ್ವಿಜ ಪುಂಡಲೀಕ ಪದ್ಮಜ ಮುಖ್ಯರಾದ ನಾ | ಶುಕ ಉದ್ಧವ ಬಲಿ ಜಯ ವಿಜಯರ ಕೂಡಿ | ಸುಜನರೈ ತಂದ | ರಂಬುಜ ಪದಕ ನಮಿಸೆ ವಾ | ರಿಜನಾಭ ಉಪ್ಪವಡಿಸಾ ಹರಿಯೇ 2 ಪಾಕ ಶಾಸನ ಅಗ್ನಿ ಆಕಾಳ ನೈಋತಿರ | ತ್ನಾಕರ ಪ್ರಭಂಜನಪಿ ನಾಕಿವರ ಕೌಬೇರ | ನಾಕೆರಡು ದಿಕ್ಕಿನವರೇಕೋ ಭಾವದಲಿಂದ ನಾಕ ಪುರಗಜ ಅಜಮಹಾ ಕೋಣ ಮನುಜ ಮಕ | ಹಾಕುರಂಗಂದಣವು ಗೋಕುಲೆಂದ್ರನು ಇಂತು | ವಾಹನ ವಿವೇಕದೇರಿ ಬಂದಿದೆ | ಲೋಕೇಶ ಉಪ್ಪವಡಿಸಾ ಹರಿಯೇ3 ಶ್ರೇಷ್ಠ ಕಶ್ಯಪ ಋಷಿ ವಶಿಷ್ಠ ಗಾರ್ಗೇಯ ತಪೋ | ನಿಷ್ಠ ವಿಶ್ವಾಮಿತ್ರ ಸೃಷ್ಠಿಯೊಳ ಜಲದ ಸಂ | ದಷ್ಟ ವರುಣನ ಗರ್ವ ಭಷ್ಟ ಮಾಡಿದಗಸ್ತಿ | ಅಷ್ಟಾದಶ ಧ್ವಯ ಬಾರಿ ಸೃಷ್ಟಿರ ಚನೆಯ ಕಂಡ | ತುಷ್ಟ ಬಕದಾಲ್ಪ್ಯ ಉತ್ಕøಷ್ಟ ಸನಕಾದಿಗಳು | ದೃಷಮಾನಿಸರಾಗಿ ಮುಟ್ಟಿಸ್ತುತಿ ಸುತಲಿದೇ | ಕೃಷ್ಣ ನೊಲಿ ದುಪ್ಪವಡಿಸಾ ಹರಿಯೇ 4 ವರ ವಾಮ ದೇವಾತ್ರಿ ಪರಮಗಾಲ ವನುಸೌ | ಭರಿಯ ಕೌಡಿಣ್ಯ ಸುಖ ಭರಿತ ಕೌಸಿರ ಮತಿ | ಪರಿಪೂರ್ಣ ಜಯಾಮುನೀರ್ವರು ಭರತರುಸುಗುಣ ಶರಧಿ ವೈಶಂ ಪಾಯನಾ|| ಸುರಪುರೋಹಿತ ಮಹಾ ಸುರರ ವಂಶಾವಳಿಯು | ತರಣಿಜ ಬುಧಾದಿಗಳ | ಕರದೊಳು ಸುಫಲವಿರಿಸಿ ಹರುಷಾದಲಿ ನಿಂದಿದೆ || ಪರಬೊಮ್ಮ ಉಪ್ಪ ವಡಿಸಾ ಹರಿಯೇ 5 ಡಮರುಧರ ಜಡೆಯೊಳಗ ಸಮುಲ್ಲಾಸದಲಿ ಮೆರೆವ ಅಮರ ನದಿ ಪಾಪಹರ ಸಮಕೃಷ್ಣ ವೇಣಿ ಸು | ವಿಮಲ ಗೋದಾವರಿ ಕುಮುದ್ವತಿ ಕಾವೇರಿ | ಶ್ರಮಹಾರಿ ತುಂಗ ಭದ್ರಿ || ಯಮುನಿ ಫಲ್ಗುಣಿ ಮಹೋತ್ತಮ ಸರಸ್ವತಿ-ಕಪಿಲ | ನರ್ಮದಿ ಮೊಲಾಗಿ ಅಮಲಗ್ರೋದ ಕವ | ಕ್ರಮದಿಂ ಕೊಂಡು ನದಿ ಚಮು ಬಂದಿದೇ ಪೊರಗ | ಕಮಲಾಕ್ಷ ಉಪ್ಪವಡಿಸಾ ಹರಿಯೇ6 ದಾರುಣೀ ಚರರಾದಾ ಚಾರುಗೋ ಬ್ರಾಹ್ಮಣರು | ಸಂರಕ್ಷಣೆಯ ಮಾಳ್ವ ಧೀರಯ ಯಾತಿ | ಮೇರು ಸಮ ಹರಿಶ್ಚಂದ್ರ ವೈರಾಟ ಪತಿಜನಕ | ಆರಾಯ ನಳ ನಹುಷನು || ಶೂರ ಹಂಸಧ್ವಜನು ಸಾರಿ ವಿಷ್ಟಕ್ಸೇನ | ವೀರ ಪಾಂಚಾಲನ - ಕ್ರೂರ ಚಂದ್ರಹಾಸ ಮ | ಯೂರ ಧ್ವಜ ಪ್ರಮುಖರಾರತದಿ ಬಂದರಿದೆ | ಕಾರುಣನೆ ಉಪ್ಪಾವಡಿಸಾ ಹರಿಯೇ 7 ವಾರಿಯೋಳ್ ನಡೆವಹತೇರಗಜ ಶೃಂಗರಿಸಿ | ಏರಿಬಂದಿಳಿದು ಮಹಾ ವೀರ ಭಟರೋಗ್ಗೀನೊಳು | ಬಾರಿ ಬಾರಿಗೆ ನಿಮ್ಮ ಚೀರುತ ಬಿರುದಂಗಳನು ಭೂರಿಜನ ಸಚಿದಣಿಸುತಾ || ಪಾರವಿಲ್ಲದ ಪಟಹ ಭೇರಿ ನಿಸ್ಸಾಳತಹ | ಳಾರವರಿದು ಊದುತಲಿ ಈ ರೀತಿ ನೃಪರದಳ | ಚಾರುವಾಲಗವ ಮನವಾರಗುಡುತಿದೆ ಪರಮ ಶೌರಿ ವಲಿದು ಪ್ಪವಡಿಸಾಹರಿಯೇ 8 ಕೇಣವನು ಗೊಳ್ಳದಿಹ ಜಾಣ ಕಲೆಯಿಂದ ಗೀ | ರ್ವಾಣ ಸ್ತ್ರೀಯರು ನೃತ್ಯ ಮಾಣುತಲಿ ಬರೆಕರದಿ | ವೀಣೆಯನು ತಾಂ ಪಿಡಿದು ವಾಣಿ ತುಂಬರ ಸುಪ್ರ ವೀಣನಾರದ ಗಣಪನು || ಶ್ರೇಣಿಯಿಂ ತೊಡಗೂಡಿ ತ್ರಾಣದಿಂದಲಿ ನಾಮ | ವಾಣಿಯಲಿ ವಚಿಸುತಿದೆ ಕಾಣಲ್ಕೆ ನಿಂದಿದೆ | ಏಣಾಂಕನುಜೆ ಮುಗಿದು ಪಾಣಿಯನು ಗುರು ಮಹಿಪತಿ ಪ್ರಾಣನೊಲಿದುಪ್ಪವಡಿ ಸಾ ಹರಿಯೇ 9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಒಂದೇ ನಾಮದೊಳಡಗಿದುವೊ ಆ -ನಂದದಿಂದುಸುರುವಅಖಿಳ ವೇದಗಳುಪಒಂದೇ ನಾಮವು ಪ್ರಹ್ಲಾದನ ಕಾಯ್ತು - ಮ -ತ್ತೊಂದೆ ನಾಮವೆ ಅಜಮಿಳನ ಸಲಹಿತು ||ತಂದೆ ತಾಯಿಯ ಬಿಟ್ಟ ಕಂದ ಧ್ರುವರಾಯಗಾ -ನಂದಪದವನಿತ್ತ ಅದ್ಭುತಗುಣವೆಲ್ಲ 1ಮಚ್ಛ್ಯಾದ್ಯಾನಂತಾವತಾರ ಅಷ್ಟಾದಶಸ್ವಚ್ಛ ಪುರಾಣಗಳಮೃತದಸಾರ ||ಕಚ್ಛಪನಾಗಿ ತ್ರೈಜಗಕೆ ಆಧಾರ ತ -ನ್ನಿಚ್ಛೆಯಿಂದಲಿ ತಾನು ಮಾಳ್ಪ ವ್ಯಾಪಾರ 2ಒಬ್ಬರೀತಗೆ ಸಮರಿಲ್ಲ ತ -ನ್ನಬ್ಬರದಿಂದಲಿ ಸಲಹುವನೆಲ್ಲ ||ಕಬ್ಬು ಬಿಲ್ಲನ ಪಿತಪುರಂದರ ವಿಠಲ ವೈದರ್ಭಿಯ ರಮಣನ ವರಸುಗುಣಗಳೆಲ್ಲ 3
--------------
ಪುರಂದರದಾಸರು
ಪ್ರಥಮ ಕೀರ್ತನೆಪ್ರವೃಜ್ಯ ಕುಲಶಿರೋರತ್ನ ಜಯತೀರ್ಥರಸುವೃತತಿ ಜಾಂಫ್ರಿಯಲಿ ಶರಣಾದೆ ಸತತಸರ್ವೇಷ್ಟದಾತರುವಿಜ್ಞಾನಬೋಧಕರುಮಧ್ವೇಷ್ಟ ಶ್ರೀ ರಮಾಪತಿಗೆ ಪ್ರಿಯತಮರು ಪಅಖಿಳಗುಣಆಧಾರ ನಿರ್ದೋಷ ಶ್ರೀರಮಣಜಗದಾದಿ ಮೂಲಗುರು ಅಗುರು ಶ್ರೀ ಹಂಸವಾಗೀಶಸನಕಾದಿ ದೂರ್ವಾಸಾದಿಗಳಪೀಳಿಗೆ ಗುರುಗಳಿಗೆ ಶರಣು ಶರಣೆಂಬೆ 1ಪುರುಷೋತ್ತಮತೀರ್ಥಅಚ್ಯುತಪ್ರೇಕ್ಷರಿಗೆಪುರುಷೋತ್ತ ಮಾರ್ಯರಕರಕಮಲಜಾತವರವಾತಅವತಾರ ಆನಂದತೀರ್ಥರಚರಣಪದ್ಮದಲಿ ನಾ ಶರಣಾದೆ ಸತತ2ಶ್ರೀ ಮಧ್ವ ಆನಂದತೀರ್ಥಕರಅಬ್ಜಜರುಪದ್ಮನಾಭನೃಹರಿ ಮಾಧವಾಕ್ಷೋಭ್ಯಈ ಮಹಾ ಗುರುಗಳು ಸರ್ವರಿಗು ಆನಮಿಪೆಶ್ರೀ ಮನೋಹರ ಪ್ರಿಯರು ಸಂತೈಪರೆಮ್ಮ 3ತ್ರೇತೆಯಲ್ಲಿ ಶ್ರೀ ರಾಮಚಂದ್ರನ್ನ ಸೇವಿಸಲುಸೀತಾ ಪ್ರತಿಕೃತಿಯಲ್ಲಿ ತಾಪೊಕ್ಕವಾತನ್ನೊಲಿಸಿಕೊಳ್ಳ ದವರ್ಗೆಹರಿಒಲಿಯಎಂದು ಜಗಕೆ ತೋರ್ದ ವಾಲಿಯೇ ಇಂದ್ರ 4ವಾತಾವತಾರ ಹನುಮಂತನೇ ದ್ವಾಪರದಿಕೌಂತೇಯ ಭೀಮನು ಅವನಿಗೆಅನುಜಇಂದ್ರ ಅರ್ಜುನನಾಗಿ ಸೇವಿಸಿ ಹನುಮಧ್ವಜಪಾದಮೂಲದಿ ಕುಳಿತ ಕೃಷ್ಣನು ಒಲಿದ5ಅಖಂಡೈಕ ಸಾರಾತ್ಮ ಅನಂತರೂಪಾಭಿನ್ನಶ್ರೀಕೃಷ್ಣ ರಾಮನೇ ಋಷಿವಂಶದಲ್ಲಿಈ ಕುವಲಯದಲ್ಲಿ ಪ್ರಾದುರ್ಭವಿಸಿದ ವ್ಯಾಸಅಕಳಂಕ ಸುಖಜಿತ್ವಪುಷಶ್ರೀಪತಿಯು6ಆಮ್ನಾಯತತಿಪುರಾಣಗಳು ಪೇಳ್ವಂತೆರಮೆಯರಸ ವ್ಯಾಸನ್ನ ಸೇವಿಸಲು ಇಳೆಯೋಳ್ಭೀಮನೇ ಯತಿ ರೂಪದಲ್ಲಿ ಬಂದಿಹನೆಂದುಸುಮನಸರಾಜ ಪುಟ್ಟಿದನು ಪುನಃ7ಹದಿನೆಂಟು ವರುಷಗಳು ಎತ್ತಾಗಿ ತಾನಿದ್ದುಹೊತ್ತು ಮಧ್ವಾಚಾರ್ಯರ ಪುಸ್ತಕಗಳಭಕ್ತಿಯಲಿ ಸೇವಿಸಿ ಮಧ್ವರಾಯರು ಪಾಠಬೋಧಿಸುವದು ಕೇಳ್ದ ವೃಷಭರಾಟ್ ಇಂದ್ರ 8ಆನಂದಪ್ರದ ತತ್ವಬೋಧಕ ಭಾಷ್ಯಾದಿಗಳಆನಂದ ಮುನಿಮಧ್ವ ಬೋಧಿಸಲು ಗ್ರಹಿಸಿವಿನಯದಿ ಕೇಳ್ದರು ಶಿಷ್ಯರು ಟೀಕೆಗಳಗ್ರಂಥಗಳಿಗೆ ಯಾರು ಮಾಡುವುದು ಎಂದು 9ಈ ಗೋರಾಜನೇ ಟೀಕೆಗಳ ಸಂರಚಿಸಿಜಗತ್ತಲ್ಲಿ ಸತ್ತತ್ವ ಶಾಸ್ತ್ರ ಪ್ರಕಟಿಸುವಹೀಗೆಂದು ಶ್ರೀ ಮಧ್ವಾಚಾರ್ಯರಾಜ್ಞಾಪಿಸಲುಮಿಗೆ ಹರುಷದಲಿ ಗೋರಾಟ್ ಶಿರವ ಬಾಗಿದನು 10ಯುಕ್ತ ಕಾಲದಿ ಈ ಗೋರಾಜ ನೇವೆರಘುನಾಥ ದೇಶಪಾಂಡೆ ರುಕ್ಮಾಬಾಯಿಗೆಮಗನಾಗಿ ಜನಿಸಿದನು ಮಂಗಳವೇಢೆಯಲಿಈ ಗ್ರಾಮ ಪಂಢರಪುರದ ಸಮೀಪ 11ಧೋಂಡುರಾಯನು ಎಂಬ ನಾಮದಲಿ ಬೆಳೆದಗಂಡಿಗೆ ಉಪನಯನ ಮದುವೆಯೂ ಆಯ್ತುಹೆಂಡತಿ ಭೀಮಾಬಾಯಿ ಸುಗುಣೆ ಸೌಂದರ್ಯವತಿಚಂಡ ಶ್ರೀಮಂತರ ಮನೆತನದವಳು 12ಒಂದುದಿನ ಧೋಂಡುರಾಯನು ನದೀ ದಡಕೆಬಂದನು ಕುದುರೆಯ ಮೇಲೇರಿಕೊಂಡುಅಂದು ಅಕ್ಷೋಭ್ಯ ಮಠ ಸಂಚಾರ ಕ್ರಮದಲ್ಲಿನಿಂತಿತ್ತು ಮೊಕ್ಕಾಮಾಗಿ ಆಚೆಕಟ್ಟೆಯಲಿ 13ನದೀತೀರ ಕುಳಿತಿದ್ದ ಅಕ್ಷೋಭ್ಯ ತೀರ್ಥರುಎದುರಾಗಿ ನದಿಯಲ್ಲಿ ಆಚೆದಡದಿಂದಕುದುರೆ ಸವಾರನು ವರ್ಚಸ್ವಿ ಯುವಕನುಬೆದರದೆ ಪ್ರವಾಹದಲಿ ಬರುವದು ನೋಡಿದರು 14ಕುದುರೆ ಮೇಲ್ ಅಸೀನನಾಗಿದ್ದ ಯುವಕನುಕ್ಷುತ್ತೃಷೆಶಮನಕ್ಕೆ ಯತ್ನ ಮಾಡುತ್ತಾಉದಕವ ಕೈಯಿಂದ ತುಂಬಿಕೊಳ್ಳದಲೇಎತ್ತಗಳು ಕುಡಿವಂತೆ ಬಾಯಿ ಹಚ್ಚಿದನು 15ಮಾಧವಮಧ್ವರು ಮೊದಲೇ ಸೂಚಿಸಿದಂತೆಇಂದುಆ ಕುರುಹ ಅರಿತು ಅಕ್ಷೋಭ್ಯರುಇದು ಏನು `ಪಶು' ವಂತೆ ಎಂದು ಧ್ವನಿಕೊಟ್ಟರುಹಿಂದಿನ ಜನ್ಮ ಧೊಂಡೋಗೆ ನೆನಪಾಯ್ತು 16ಪ್ರವಾಹದ ನಗಾರಿಯ ಸಮಬಲಿ ಧೋಂಡುವೇಗ ಲೆಕ್ಕಿಸದಲೇ ದಡಕೆ ತಾ ಬಂದುಮುಗಿದಕರಬಾಗಿ ಶಿರ ನಮಿಸಿ ಅಕ್ಷೋಭ್ಯರಆಗಲೇ ಸಂನ್ಯಾಸಕೊಡಲು ಬೇಡಿದನು 17ಗಾಧಿ ಅರ್ಜುನ ಸಮ ಬಲ ರೂಪದಲಿ ತೋರ್ಪಈತ ರಾಯರ ಸುತನಾದರೂ ವೈರಾಗ್ಯಯುತ ಭಕ್ತಿಮಾನ್ ಸುಶುಭ ಲಕ್ಷಣನೆಂದುಹರಿಮಧ್ವ ನಿಯಮಿತ ಅವಗೆ ಕೊಟ್ಟರು ಸಂನ್ಯಾಸ 18ಶ್ರೀಯಃಪತಿಗೆ ಪ್ರಿಯತರ ಜಯತೀರ್ಥನಾಮವಜಯ ಶೀಲ ಹೊಸಯತಿಗೆ ಇತ್ತು ಅಭಿಷೇಕಅಕ್ಷೋಭ್ಯಗುರು ಮಾಡೆ ಗಗನದಿ ಪೂವರ್ಷಜಯ ಷೋಷ ಹರಡಿತು ಪರಿಮಳ ಸುಗಂಧ 19ತಂದೆ ರಘುನಾಥರಾಯನು ಸುದ್ದಿಕೇಳಿಬಂದು ಅಕ್ಷೋಭ್ಯರ ಕಂಡು ಬಲುಕೋಪದಿಂದ ಯಾಕೆ ಸಂನ್ಯಾಸ ಯುವಕಗೆ ಕೊಟ್ಟಿರಿಎಂದು ವಾದಿಸಿದನು ಪುತ್ರ ಮೋಹದಲಿ 20ಪೂರ್ವಧೋಂಡುರಾಯ ಈಗ ಜಯತೀರ್ಥರುತಾವೇ ಸ್ವೇಚ್ಛೆಯಿಂದ ಕೊಂಡರು ಸಂನ್ಯಾಸಈ ವಿಷಯ ತಿಳಕೊಂಡರೂ ಸಹ ರಘುನಾಥಸೇವಕರ ಸಹ ಮಗನ ಕರಕೊಂಡು ಹೋದ 21ರಾಯನು ಮಗನನ್ನ ಗೃಹಸ್ಥ ಚರ್ಯದಲಿರಿಸೆಶಯನಗೃಹದೊಳು ಪತ್ನಿ ಸಹಿತ ಕಳುಹಿದನುಶಯನ ತಲ್ಪದಿ ದೊಡ್ಡ ಸರ್ಪಕಂಡಳು ಯುವತಿಭಯದಿಂದ ಹೊರಬಂದು ಹೇಳಿದಳು ವಿಷಯ 22ತನ್ನಪತಿಧೊಂಡರಾಯನ್ನ ತಲ್ಪದಲಿಕಾಣದೆ ಅವರಿದ್ದ ಸ್ಥಾನದಲಿ ಸರ್ಪಘನಧೀರ್ಘಗಾತ್ರವಿಸ್ತಾರ ಹೆಡೆಯಿಂದಮಿನುಗುತ್ತ ಕುಳಿತಿದ್ದ ವಿವರ ಪೇಳಿದಳು 23ರಘುನಾಥರಾಯನು ಹರಿಚಿತ್ತ ಇದು ಎಂದುಮಗನ ಪ್ರಭಾವವ ಅರಿತು ತ್ವರಿತದಲಿಅಕ್ಷೋಭ್ಯರಲಿ ಹೋಗಿ ಶಿಷ್ಯನ್ನ ಒಪ್ಪಿಸಿಬಾಗಿ ಶಿರ ಸನ್ನಮಿಸಿ ಕ್ಷಮೆಯ ಬೇಡಿದನು 24ವಂಶ ವೃಧ್ಧಿಗೆ ಮತ್ತೂ ಪುತ್ರಪುಟ್ಟವನೆಂದುದೇಶಪಾಂಡೆಯ ಅನುಗ್ರಹಿಸಿ ಕಳುಹಿಸಿದಶಪ್ರಮತಿ ಪೀಳಿಗೆಯೊಳು ಅಕ್ಷೋಭ್ಯಮುನಿಗ¼ Àುಶಿಷ್ಯ ಜಯತೀರ್ಥರಿಗೆ ಸ್ಥಾನ ನೇಮಿಸಿದರು 25ಶ್ರೀ ಮದ್ವಾಚಾರ್ಯರು ಬೋಧಿಸಿ ತೋರಿಸಿದಶ್ರೀ ರಮಾಪತಿ ಪೂಜಾ ಸತ್ತತ್ವವಾದದುರ್ಮತ ಖಂಡನದ ರೀತಿಯ ಜಯಾರ್ಯರಿಗೆಸಮ್ಮುದದಿ ಅರುಹಿದರು ಅಕ್ಷೋಭ್ಯ ಗುರುವು 26ಶಕ ವರುಷ ಹನ್ನೊಂದು ನೂರು ಅರವತ್ತೇಳುಮಾರ್ಗಶಿರ ಕೃಷ್ಣ ಪಂಚಮಿ ವಿಶ್ವಾವಸುವಲ್ಲಿಅಕ್ಷೋಭ್ಯ ತೀರ್ಥರ ಪೀಠ ಆರೋಹಿಸಿಶ್ರೀಕರಗೆ ಪ್ರೀತಿಕರ ಪಟ್ಟವಾಳಿದರು 27ದೇವತಾರ್ಚನೆ ಶಿಷ್ಯ ಉಪದೇಶ ಮಾಡುತ್ತದಿಗ್ವಿಜಯದಲಿ ದುರ್ವಾದಿಗಳ ಗೆದ್ದುಮಧ್ವಗ್ರಂಥಗಳಿಗೆ ಟೀಕೆಗಳ ರಚಿಸಿಪ್ರಖ್ಯಾತರಾದರು ಜಯತೀರ್ಥ ಆರ್ಯ 28ವನರುಹಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸಪೂರ್ಣ ಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತಗುಣಪೂರ್ಣನಿರ್ದೋಷಶ್ರೀಯಃ ಪತಿಗೆ ಪ್ರಿಯಘನ ಕರುಣಿಜಯತೀರ್ಥಗುರುನಮೋಪಾಹಿ29|| ಪ್ರಥಮ ಕೀರ್ತನೆ ಸಮಾಪ್ತ ||ದ್ವಿತೀಯಕೀರ್ತನೆಪ್ರವೃಜ್ಯ ಕುಲಶಿರೋರತ್ನ ಜಯತೀರ್ಥರಸುವೃತತಿ ಜಾಂಫ್ರಿಯಲಿ ಶರಣಾದೆ ಸತತಸರ್ವೇಷ್ಟದಾತರುವಿಜ್ಞಾನಬೋಧಕರುಮಧ್ವೇಷ್ಟ ಶ್ರೀ ರಮಾಪತಿಗೆ ಪ್ರಿಯತಮರು ಪನರಹರಿಯ ಮಹಾದುರ್ಗೆಯ ಕುರಿತು ತಪಸ್ ಆಚರಿಸಿವರವ ಪಡೆದಿಹರು ಈ ಜಯತೀರ್ಥ ಆರ್ಯಬರೆವುದಕೆ ಲೇಖನವು ಅಡಿಕೆಯುಅರದೂರದುರ್ಗೆಯು ಕೊಟ್ಟಿಹಳು ಇವರ್ಗೆ1ಎರಗೋಳದಲ್ಲಿದ್ದು ಶ್ರೀ ಮದಾಚಾರ್ಯರಪರಸುಖಪ್ರಮೂಲಗ್ರಂಥಗಳ ಟೀಕಾಬರೆದಿಹರು ಅನುಪಮ ಉತ್ತಮ ರೀತಿಯಲಿಭರದಿ ಓದುವವರೇ ಬಲ್ಲರು ಮಹಿಮೆ 2ಶ್ರೀ ಮಧ್ವಕೃತವು ಶ್ರೀ ಬ್ರಹ್ಮಸೂತ್ರಭಾಷ್ಯವುಆ ಮೂಲಗ್ರಂಥವು ಎರಡು ಸಾವಿರವುಆ ಮಹಾಭಾಷ್ಯಕ್ಕೆ ಟೀಕೆ ಅಷ್ಟ ಸಹಸ್ರವುಅಮ್ಮಮ್ಮ ಏನೆಂಬೆ ಈ ಮಹಾ ಕಾರ್ಯ 3ಅನುವ್ಯಾಖ್ಯಾನದ ನಾಲಕ್ಕು ಸಾವಿರಘನತರ ಗ್ರಂಥಕ್ಕೆ ಜಯತೀರ್ಥರಜ್ಞಾನಪ್ರದ ಅಜ್ಞಾನಗಿರಿವಜ್ರಟೀಕೆಯಗ್ರಂಥ ಇಪ್ಪತ್ತೆಂಟು ಸಾವಿರ ಸಂಖ್ಯಾ 4ಈ ನುಡಿ ಬರೆವಾಗ ಬಿಂದುಮಾಧವ ಪೇಳ್ದಘನ್ನ ಶುಭತರ ಮಧ್ವ ವಿಜಯದಲ್ಲಿಅನುವ್ಯಾಖ್ಯಾನದ ಟೀಕಾ ಸುಧಾ ಎಂದುಶ್ರೀ ನಾರಾಯಣಾಚಾರ್ಯ ಸೂಚಿಸಿಹರೆಂದು 5ತತ್ವ ಸಂಖ್ಯಾನಕ್ಕೂ ಕಥಾ ಲಕ್ಷಣಕ್ಕೂತತ್ವ ವಿವೇಕಕ್ಕೂ ಋಗ್ಬಾಷ್ಯಕ್ಕೂತತ್ವ ನಿರ್ಣಯಕ್ಕೂ ಪ್ರಮಾಣ ಲಕ್ಷಣಕ್ಕೂತತ್ವೋದ್ಯೋತಕ್ಕೂಕರ್ಮನಿರ್ಣಯಕ್ಕೂ6ಮಾಯಾವಾದಉಪಾಧಿಖಂಡನಗಳಿಗೂಮಿಥ್ಯಾತ್ವಾನುಮಾನ ಖಂಡನಕ್ಕೂನ್ಯಾಯ ವಿವರಣಕ್ಕೂ ಗೀತಾ ಭಾಷ್ಯಕ್ಕೂನ್ಯಾಯ ತೇಜೋಜ್ವಲ ಗೀತಾ ತಾತ್ವರ್ಯಕ್ಕೂ 7ಪಟ್ಟ್ರಶ್ನ ಈಶಾವಾಸ್ಯ ಭಾಷ್ಯಗಳಿಗೂಅಷ್ಟಾದಶ ಈ ಗ್ರಂಥಗಳಿಗೆಪಟು ಪಟೀಯಸವಾಗಿ ಟೀಕೆಯಾ ಬರೆದಿಹರುಇಷ್ಟೇ ಅಲ್ಲದೇ ಇನ್ನೂ ನಾಲ್ಕು ರಚಿಸಿಹರು 8ಪ್ರತ್ಯಕ್ಷ ಅನುಮಾನಆಗಮಪ್ರಮಾಣಗಳರೀತಿ ಲಕ್ಷಣ ಪೇಳ್ವ ಪ್ರಮಾಣ ಪದ್ಧತಿಯುಮಾಧವನ ಸರ್ವೋತ್ತಮ ಜಗತ್ ಸತ್ಯತ್ವಇಂಥಾದ್ದು ಸಾಧಿಸುವ ವಾದಾವಳಿಯು 9ತಂತ್ರಸಾರಪಾಂಚರಾತ್ರಾಗಮಾನುಸರಿಸಿಪದ್ಯಮಾಲಾನಾಮ ಗ್ರಂಥದಲ್ಲಿಶ್ರೀಧರ ಸರ್ವೋತ್ತಮಾರ್ಚನೆ ಬಗೆ ಪೇಳಿದರುಶತಾಪರಾಧ ಸ್ತೋತ್ರವು ಮಾಡಿಹರು 10ದಿಗ್ವಿಜಯ ಮಾಡಿ ಸಜ್ಜನರ ಉದ್ಧರಿಸುತ್ತಾದುರ್ವಿದ್ಯಾ ದುರ್ಮತಗಳನ್ನ ಛೇದಿಸುತಸುವೈದಿಕ ಮಧ್ವಸಿದ್ಧಾಂತ ಸ್ಥಾಪಿಸುತಭುವಿಯಲಿ ಪ್ರಖ್ಯಾತರಾದರು ಜಯಾರ್ಯ 11ಒಂದು ಸಮಯದಿ ವಿದ್ಯಾರಣ್ಯರು ಶ್ರೀಮಧ್ವಗ್ರಂಥ ಓದಿ ನೋಡಿ ಅರ್ಥವಾಗದಲೆಗ್ರಂಥಕ್ಕೆ ಜಯರಾಯರು ಬರೆದ ಟೀಕೆಯಓದಲು ಅರ್ಥವು ವಿಶದವಾಯ್ತು 12ಪೂರ್ವಾಪರ ಸಂಗತಿ ಮತ್ತು ವಾಕ್ಯಾರ್ಥಸರ್ವ ಪ್ರಕಾರದಲೂ ಉತ್ತಮವಾಗಿಹುದುಸರ್ವಜÕ ಮುನಿಗಳ ಗ್ರಂಥದ ಸರಿಯಾದಭಾವವ ವಿವರಿಸುವುದೆಂದು ಹೇಳಿದರು 13ಈ ರೀತಿ ವಿದ್ಯಾರಣ್ಯರು ಕೊಂಡಾಡಿಪುರಿ ರಾಜಬೀದಿಯಲಿ ಆನೆ ಅಂಬಾರಿಮೆರವಣಿಗೆ ಮಾಡಿಸಿ ಜಯಘೋಷ ಮಾಡುತ್ತಾಮರ್ಯಾದೆ ಮಾಡಿದರು ವಿಜಯನಗರದಲಿ 14ಮಧ್ವಗಂಥಗಳನ್ನು ಜಯಾರ್ಯ ಬರೆದಿರುವಉತ್ತಮ ಟೀಕೆಗಳ ಬಲು ಶ್ಲಾಘಿಸುತ್ತವಿದ್ಯಾರಣ್ಯರು ನಮಸ್ಕಾರ ಮಾಡಿದರುಎಂದು ಇತಿಹಾಸವ ಸುಜನರು ಪೇಳುವರು 15ಸ್ವಮತ ಪರಮತ ವಿದ್ವಜ್ಜನರಿಂದಈ ಮಹಾಮಹಿಮ ಟೀಕಾಚಾರ್ಯ ಆರ್ಯಈ ಮಹಿಯಲ್ಲಿ ಪ್ರಖ್ಯಾತ ಪೂಜಿತರಾಗಿತಮ್ಮ ಗುರುಕ್ಷೇತ್ರ ಮಳಖೇಡ ಸೇರಿದರು 16ಮಳಖೇಡ ಕ್ಷೇತ್ರದಲ್ಲಿ ಕಾಗಿನೀ ನದಿತೀರಮಾಲೋಲ ಪ್ರಿಯ ಅಕ್ಷೋಭ್ಯರ ವೃಂದಾವನಶೀಲತಮ ಜಯರಾಯ ಅಲ್ಲಿಯೇ ನಿಂತರುಅಳವೇ ವರ್ಣಿಸಲು ಈ ಮಹಾತ್ಮರ ಮಹಿಮೆ 17ಹನ್ನೊಂದು ತೊಂಭತ್ತು ಶಕವಿಭವಆಷಾಢಕೃಷ್ಣ ಪಂಚಮಿ ಪುಣ್ಯದಿನದಲ್ಲಿ ಇವರುತನ್ನ ಸೇವಾ ವಿಷ್ಣು ಮಧ್ವರಿಗೆ ಪೂರೈಸಿಶ್ರೀ ನಾರಾಯಣನಪಾದಸೇರಿದರು18ಮತ್ತೊಂದು ಅಂಶದಲ್ಲಿ ವೃಂದಾವನದಲ್ಲಿಇದ್ದು ಸೇವಿಸುವವರ್ಗೆ ವಾಂಛಿತವೀಯುತ್ತಮಧ್ವಸ್ಥ ಶ್ರೀ ಹರಿಯ ಧ್ಯಾನಿಸುತ ತಮ್ಮಗುರುಬದಿಯಲ್ಲಿ ಕುಳಿತಿಹರು ಸ್ಮರಿಸೆ ಪಾಲಿಪರು 19ವನರುಹಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸಪೂರ್ಣ ಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತಗುಣಪೂರ್ಣನಿರ್ದೋಷಶ್ರೀಯಃ ಪತಿಗೆ ಪ್ರಿಯಘನಕರುಣಿ ಜಯತೀರ್ಥಗುರುನಮೋಪಾಹಿ20||ಇತಿ ಶ್ರೀ ಜಯತೀರ್ಥವಿಜಯಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು