ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಂಡವಪಕ್ಷ ಪಾರ್ಥಸಾರಥಿಗೆ ಆಂಡಾಳ್ ಮಾಲೆಯ ಧರಿಸಿದಳು ಪ ಸೃಷ್ಟಿಜಾತೆಯು ಶೃಂಗಾರವಾಗಿ ಬಂದು ಕೃಷ್ಣಮೂರುತಿಯೆದುರಲ್ಲಿ ನಿಂದು ಅಷ್ಟವಿಧದ ಪುಷ್ಟಮಾಲೆಗಳನ್ನು ತೆಗೆದು ತಟ್ಟೆಯೊಳಗೆ ಇಟ್ಟು ಕಳುಹಿದಳು 1 ಆದಿಮೂರುತಿ ಮಂಟಪದಲ್ಲಿ ಕುಳಿತಿರೆ ಶ್ರೀದೇವಿ ಭೂದೇವಿ ಸಹಿತವಾಗಿ ವೇದಮೂರುತಿಯನು ನೋಡಿ ಸಂತೋಷದಿ ಗೋದಾದೇವಿಯು ಮಾಲೆ ಧರಿಸಿದಳು 2 ಮರುಗ ಮಲ್ಲಿಗೆ ಜಾಜಿ ಸುರಗಿ ಶಾವಂತಿಗೆ ಇರುವಂತಿಗೆ ಪಚ್ಚೆ ಮುಡಿದಾಳ ಪರಿಪರಿ ಪುಪ್ಪದ ಸರಗಳ ಪಿಡಿದು ಧರಣಿದೇವಿಗೆ ಸ್ವಾಮಿ ಧರಿಸಿದಳು 3 ತಾಳೆ ಚಂಪಕ ವಕುಳಮಾಲೆ ಮಂದಾರಪುಷ್ಪ ಕಮಲ ಸುಗಂಧರಾಜ ನೀಲವರ್ಣನ ಮುಖ ನೋಡಿ ಸಂತೋಷದಿ ನೀಳಾದೇವಿಯು ಮಾಲೆ ಧರಿಸಿದಳು 4 ಕಮಲವ ಕರದಲ್ಲಿ ಪಿಡಿದಿಹ ಕಾಂತೆಗೆ ಕಮಲವದನೆಯೆಂದೆನಿಸಿದವಳಿಗೆ ಕಮಲಾಕ್ಷಿಗೆ ಶ್ರೀವೆಂಕಟಕೃಷ್ಣನು ಕಮಲನಾಭನು ಮಾಲೆ ಧರಿಸಿದನು 5
--------------
ಯದುಗಿರಿಯಮ್ಮ
ಷೋಡಶೋಪಚಾರ ಪೂಜೆಪೂಜಿಸುವೆನನವರತ ಪರಮ ಪುರುಷನನುನೈಜ ಮೂರ್ತಿಯನೀಗಲಭಿಮುಖಿಸಿ ನಿರ್ಗುಣದಿ ಪಹೃದಯಕಾಶಿಯಲಿಪ್ಪ ಜ್ಞಾನಗಂಗೆಯ ಮಿಂದುಮೃದುತರದ ಸತ್ವಗುಣವೆಂಬ ನಿತ್ಯಕರ್ಮವ ಮಾಡಿಒದಗಿ ಶಮೆದಮೆಯೆಂಬ ನಿತ್ಯಕರ್ಮವ ಮಾಡಿಮುದದಿಂದ ಪರಮಾತ್ಮನಿಹ ಮಂದಿರಕೆ ಬಂದು1ಧ್ಯಾನಪ್ರಣವ ಮಂಟಪದಲ್ಲಿ ಕನಕಮಯ ಪೀಠವನುತನುಕರಣಮನಃಪ್ರಕೃತಿ ಯೆಂಬ ನೆಲೆಗಳನುಅನುಕೂಲದಿಂ ರಚಿಸಿ ಸಚ್ಚಿದಾನಂದನನುಮನದಲ್ಲಿ ಧ್ಯಾನವನು ಬಳಿಕೀಗ ಮಾಡುವೆನು2ಆವಾಹನ-ಆಸನ-ಪಾದ್ಯದೇಶಕಾಲಾತೀತ ಪರಿಪೂರ್ಣನಾಗಿರುವವಾಸುದೇವನನೊಮ್ಮೆಯಾವಾಹಿಸುವೆನುಆಸನವನೀವೆ ಸರ್ವಾಧಾರವಸ್ತುವಿಗೆದೋಷರಹಿತನ ಪಾದಗಳ ತೊಳೆವೆನೊಲವಿನಲಿ 3ಅಘ್ರ್ಯ-ಆಚಮನ-ಮಧುಪರ್ಕಬೆಲೆರಹಿತಗಘ್ರ್ಯವನು ನೆರೆಕೊಟ್ಟು ಕರಗಳಿಗೆಸಲಿಲದಿಂ ಶುದ್ಧನಿಗೆ ಶುದ್ದಾಚಮನವಸಲಿಸಿ ಮಧುಪರ್ಕವನು ಕ್ಷೀರಸಾಗರಗಿತ್ತುವಿಲಯಾದಿ ಪಂಚಪದಗೆರೆದು ಪಂಚಾಮೃತವ 5ಸ್ನಾನ-ವಸ್ತ್ರಸ್ಮರಿಸಿದರೆ ಸಂಸಾರಮಲವಳಿವ ಮಹಿಮನಿಗೆಸುರನದಿಯ ಪಡೆದವನಿಗಭಿಷೇಕಗೊಳಿಸಿನಿರತ ದಿಗ್ವಸ್ತ್ರನಿಗೆ ವರದುಕೂಲವನುಡಿಸಿಕರಣ ಪ್ರೇರಕನಿಗುಪವೀತದುಪಚಾರದಲಿ 5ಆಭರಣಅಷ್ಟವಿಧಗಂಧವನು ಅಷ್ಟಮದ ರಹಿತನಿಗೆನಿಷ್ಠೆುಂ ಭಕ್ತಿರಸದಿಂದ ಹದಗೊಳಿಸಿಅಷ್ಟ ವಿಧಮೂರುತಿಗೆ ಮುಟ್ಟ ಲೇಪವ ಮಾಡಿದುಷ್ಟಮದವನು ಕುಟ್ಟಿ ದಿವ್ಯ ಕುಂಕುಮವಿಟ್ಟು 7ಪುಷ್ಪ-ಧೂಪ-ದೀಪ-ನೈವೇದ್ಯ-ತಾಂಬೂಲಪರಿಪರಿಯ ಪುಷ್ಪಗಳ ನಿರ್ವಾಸನಗೆ ತಿಮಿರಹರಪ್ರಭಗೆ ಧೂಪದೀಪಂಗಳನು ಬೆಳಗಿಪರಿಪೂರ್ಣಕಾಮನಿಗೆ ಷಡುರಸಾನ್ನವನಿತ್ತುಪರಮ ಮಂಗಳಗೆ ತಾಂಬೂಲದುಪಚಾರದಲಿ 8ಕೋಟಿಸೂರ್ಯಪ್ರಭಗೆ ಕೋಟಿವರ್ತಿಗಳುಳ್ಳಮೀಟಾದ ಮಂಗಳಾರತಿಯ ಪಿಡಿದೆತ್ತಿಕೋಟಿ ಮೂವನ್ಮೂವರೂರ ಪುಷ್ಪವ ಚಂದ್ರಜೂಟಸಖ ತಿರುಪತಿಯ ವೆಂಕಟನ ಪದಕಿತ್ತು 9ಓಂ ಶ್ರೀಶಾಯ ನಮಃ
--------------
ತಿಮ್ಮಪ್ಪದಾಸರು
ಸನ್ನುತೆ ಶಂಕರಿ ದೇವಿ ಪ ನಿನ್ನ ನಾಮಂಗಳನು ನುತಿಸುವೆ || ಎನ್ನುತೆರಗುವ ದೀನನೆನ್ನೊಳುಅ.ಪ. ಆದಿಮೊದಲು ಮಧು ಕೈಟಭರನು ಸೀಳಿ | ಮೇದಿನಿಯನು ಪೊರೆದವಳು | ದೇವಿ ಮೇದಿನಿಯನು ಪೊರೆದವಳು || ಕ್ರೋಧದಿಂದಲಿ ಮಹಿಷ ವದನನ | ಭೇದಿಸಿದೆ ನೀ ಧೂಮ್ರಲೋಚನ ಕಾದಿ ಗೆಲಿದಿಹ ದೇವಿ ಎನ್ನೊಳು 1 ರುಧಿರ ರುಧಿರವ ಹೀರುತಲಿ || ದೇವಿ | ರುಧಿರವ ಹೀರುತಲಿ || ಸದೆದು ಮಹಿಯೊಳು ಕೆಡುಹುತವನನು | ಪದುಮಲೋಚನೆ ದೇವಿ ಎನ್ನೊಳು 2 ಶುಂಭದೈತ್ಯರ ಮರ್ದಿಸಿದೆ ನೀ | ಮಣಿಯುವ ದೀನನೆನ್ನೊಳು 3 ಭ್ರಮರ ರೂಪದಿ | ಚರಣ ಸ್ಮರಿಸುವನಾಥನೆನ್ನೊಳು4 ನೆಷ್ಟೆಂದು ಸಹಿಸಲಿ ದೇವಿ | ನಾನಿ | ನ್ನೆಷ್ಟೆಂದು ಸಹಿಸಲಿ ದೇವಿ || ದುಷ್ಟನಾಶಿನಿ ಶಿಷ್ಟ ಪಾಲಿನಿ || ಅಷ್ಟವಿಧ ಸೌಭಾಗ್ಯದಾಯಿನಿ | ಭೀಷ್ಟವನುಕೊಡು ಎಂದು ಬೇಡುವೆ 5
--------------
ವೆಂಕಟ್‍ರಾವ್