ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿಟ್ಟು ತ್ಯಜಿಸಲೆ ಖೊಟ್ಟಿ ಮನವೆ ಎಷ್ಟು ಪೇಳಲಿ ನಿನಗೆ ಸಿಟ್ಟಿನಿಂದಲಿ ಎಷ್ಟೋ ಜನರು ಕೆಟ್ಟು ಪೋದದ್ದರಿಯಲೊ ಪ ಸಿಟ್ಟಿನಿಂದ ಹಿರಣ್ಯಕನ ಎಷ್ಟು ವರಬಲ ಕೆಟ್ಟಿತ್ತೊ ಸಿಟ್ಟಿನಿಂದಲೆ ರಾಣವನ ಆರುಕೋಟಿ ಆಯುಷ್ಯ ಅಳಿಯಿತೊ 1 ಸಿಟ್ಟಿನಿಂದಲೆ ಮುಪ್ಪುರಂಗಳ ಅಷ್ಟಭೋಗವು ತೀರಿತೋ ಸಿಟ್ಟಿನಿಂದಲೆ ಕುರುಪನ ಕುಲ ನಷ್ಟವಾಗಿಪೋಯಿತೊ2 ದುಷ್ಟ ಕಂಸನು ಸಿಟ್ಟಿನಿಂದ ನಷ್ಟ ಪೊಂದಿದ್ದರಿಯೆಲೊ ಸಿಟ್ಟಿನಿಂದಲೆ ಸೇರಿದರು ಯಮ ಪಟ್ಟಣವ ದಿಟ್ಟರೆಂಬರೆಲ್ಲರು 3 ಸಿಟ್ಟಿಗೆದ್ದ ವಿಶ್ವಾಮಿತ್ರನ ಎಷ್ಟು ತಪವೇನಾಯಿತು ಸಿಟ್ಟಿಗೆ ಮನಗೊಟ್ಟ ಬಳಿಕ ನಷ್ಟ ತಪ್ಪದು ಕಾಣೆಲೊ 4 ಅಷ್ಟು ಯಾತಕೆ ನೀನೆ ಯೋಚಿಸು ಸಿಟ್ಟಿನಿಂದ ನೀನೇನಾದಿ ಶಿಷ್ಟ ಶ್ರೀರಾಮನಡಿಗೆ ಪೊಂದಿ ಸಿಟ್ಟನಳಿದು ಬದುಕೆಲೊ 5
--------------
ರಾಮದಾಸರು
ಸ್ವಾಮಿ ಕ್ಷೇಮೇಂದ್ರರ ಪ್ರೇಮ ಭಜಕ ಶ್ಯಾಮಸುಂದರ ಪ ಅಷ್ಟಭೋಗ ಪಟ್ಟಾರೋಹಣ ನಿಷ್ಟಜನರ ಕಷ್ಟಹರಣ ಸೃಷ್ಟಿ ಈರೇಳು ಇಟ್ಟು ಹೃದಯದಿ ಮುಟ್ಟಿರಕ್ಷಿಪ ಅಷ್ಟಮೂರುತಿ 1 ಕಮಲನಾಭ ಕಮಲವದನ ಕಮಲಪಾಣಿ ವಿಮಲಚರಿತ ಕಮಲಪೀಠನಯ್ಯ ಸುದಯ ಕಮಲನೇತ್ರ ಕಮಲಪ್ರಿಯಾ2 ಭಕ್ತಜನರ ಪ್ರಾಣಧವ ನಿತ್ಯ ನಿರ್ಮಲ ಮುಕ್ತಿಪದವ ಭಕ್ತಗಿತ್ತು ನೀಡು ಕ್ಷೇಮ ನಿತ್ಯ ನಿರ್ಮಲಾತ್ಮ ಶ್ರೀರಾಮ 3
--------------
ರಾಮದಾಸರು
ಬಂದೆಯಾ ಪರಿಣಾಮದಿ ನಿನ್ನಬಂಧು ಬಳಗವನೆಲ್ಲ ಬಿಟ್ಟು ಸನ್ಮಾರ್ಗದಿ ಪಸಂಚೀತ ಪ್ರಾರಬ್ಧ ಕರ್ಮಂಗಳನೆಲ್ಲಕಿಂಚಿತು ಮಾಡಿ ಸಂಕೋಲೆಯ ಹಾಕಿ ||ಮಿಂಚುವ ಧನ - ಪುತ್ರ ದಾರೇಷಣಂಗಳವಂಚಿಸಿ ಕವಲು ದಾರಿಯ ಬಿಟ್ಟು ಮಾರ್ಗದಿ 1ಕಾಮವ ಖಂಡಿಸಿ ದ್ರೋಹವ ದಂಡಿಸಿನಾಮರೂಪ ಕರ್ಮಂಗಳ ನಿಂದಿಸಿ ||ತಾಮಸಕರ್ಮನಡತೆಯ ತಗ್ಗಿಸಿ ನಿರ್ನಾಮ ಮಾಡಿ ಮದ-ಮತ್ಸರಂಗಳನೀಗಿ2ಅಷ್ಟಭೋಗಂಗಳ ನಷ್ಟಂಗಳ ಮಾಡಿಅಷ್ಟೈಶ್ಚರ್ಯವ ಮಟ್ಟು ಮಾಡಿ ||ಅಷ್ಟ ಪ್ರಕೃತಿಗಳ ಕುಟ್ಟಿ ಕೆಡಕಿ ಬಹಳನಷ್ಟತುಷ್ಟಿಗಳಲ್ಲಿ ದೃಷ್ಟಿಯೇನಿಲ್ಲದೆ 3ಸ್ಥೂಲ ಸೂಕ್ಷ್ಮ ಕಾರಣ ದೇಹಂಗಳನೆಲ್ಲಬೀಳುಗೆಡಹಿ ಪಂಚಭೂತಂಗಳ ||ಪಾಳು ಮಾಡಿ ಪಂಚ ಪಂಚ ಇಂದ್ರಿಯಗಳಕೋಳಕೆ ತಗುಲಿಸಿ ಕೊನಬುಗಾರನಾಗಿ 4ಹೊಳೆವ ಪ್ರಪಂಚದ ಬಲೆಯ ಬೀಸಿ ಸಂಗ-ಡಲೆ ಸಾಗಿ ಬರುತಿಹ ದಾರಿಯೊಳು ||ಒಲಿದು ಮುಕ್ತಿಯನೀವ ಪುರಂದರವಿಠಲನುಬಲವನಿತ್ತುದರಿಂದೆ ನಾನು ನೀನೆನ್ನದೆ 5
--------------
ಪುರಂದರದಾಸರು