ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರಾಯ ಪಾಲಿಸುವುದು ನೀ ಎನ್ನ ಪ ಅನ್ಯರೊಬ್ಬರನಾ ನಾ ಕಾಣೆ ಮನ್ನಿಸಿ ಸಲಹುವರನಾ ನಿನ್ನವನೊ ನಾನು ಅನುದಿನದಲಿ ನಿನ್ನ ನೆನೆದು ನೆನೆದು ಇಂದಿನವರೆಗೆ ನಾ ದಿನಗಳೆದೆನೋ ಅ.ಪ. ಇಷ್ಟುದಿನ ಪಟ್ಟ ಕಷ್ಟವು ಸಾಕೋ ಇಷ್ಟಕೆ ನೀ ದಯಾದೃಷ್ಟಿ ಇಟ್ಟು ಜ್ಞಾನವ ಕೊಡಬೇಕೊ ಕಪಟ ಬುದ್ಧಿಯನಷ್ಟು ಕಳೆದಿಷ್ಟವ ಪೂರೈಸಬೇಕೊ ಬಿಟ್ಟವನಲೊ ್ಲನಾ ಕೊಟ್ಟವರು ಪರಿಕರ ಬಿಟ್ಟವರು ಸರಿ ನಾ ಕಟ್ಟಿಕೊಳ್ವೆ ತವ ಚರಣವ ಕೊರಳಿಗೆ 1 ಅಷ್ಟದಿಕ್ಕುಗಳಿಗೆ ಪರಿಹರಿಸಿಹುದೊ ಇಷ್ಟೆಲ್ಲ ಕೇಳಿ ನಾ ಇಟ್ಟೆ ಮನವನು ತವ ಪಾದದಿ ತಿಳಿದು ಸಂತುಷ್ಟನೆ ಎನ್ನ ಬಿಟ್ಟರೆ ಮುಂದಿನ ಬಟ್ಟೆಯ ಕಾಣದೇ ಕೆಟ್ಟು ನಾ ಮೂರಾಬಟ್ಟೆಯಾಗುವೆನೋ 2 ತವ ಪಾದದಿ ತುಳಿದು ಮೆಟ್ಟಿ ಎನ್ನ ಶಿರ ಥಟ್ಟನೆ ಭೂಮಿಯಲಿ ಕೆಡಹುವುದು ಹುಟ್ಟಿದರೆ ದಯವು ಅಟ್ಟಿ ಅಜ್ಞಾನವ ಕಟ್ಟಿ ಸುಜ್ಞಾನವ ಘಟ್ಟಿ ಭಕುತಿಯನು ಕೊಟ್ಟು ನೀ ಪಾಲಿಸೊ 3
--------------
ಹನುಮೇಶವಿಠಲ
ಭಕ್ತಿ ಭಾವಗಳು ಸ್ವಲ್ಪಮಾತ್ರವಿಲ್ಲವಾಯಿತು ಪ ಗುರುಗಳಿವರು ಹಿರಿಯರಿವರು ಶರಣರೆಂದು ತಾರತಮ್ಯದಿ ರವನರಿತು ಅರಿಯದಂತೆ ಸಿರಿಯ ಮದದಲಿ ಶುನಕ ನಂಕೆನೋಡಿ ಮರಳುತಿಹರು ಏನನೆಂಬೆ ನೆಲವ ನೋಡದೆ 1 ನಿಟ್ಟಿಸದೆ ಸಾದುಗಳನು ಪ್ರಾಯ ಮದದ ಹಮ್ಮಿನಿಂದ ಭ್ರಷ್ಟ ಜನರು ಪುಣ್ಯ ಪಾಪಗಳನು ತಿಳಿಯದೆ ಅಷ್ಟದಿಕ್ಕು ತಮ್ಮದೆಂದು ಸರ್ವಗಿರಿಯನೇರಿ ತಾವೆ ಶ್ರೇಷ್ಠರೆಂದು ತಮ್ಮ ತಾವೆ ಕೊಂದು ಕೊಂಬರೋ 2 ನೂತನದಾಭರಣ ವಸ್ತ್ರ ಜಾತಿಯನ್ನು ಉಟ್ಟು ಕೊಟ್ಟು ಪ್ರೀತಿಯಿಂದ ತಮ್ಮ ತಾವೆ ನೋಡಿ ಹಿಗ್ಗುತಾ ಧಾತು ತಪ್ಪಿ ನಡೆವ ಜನರ ವಾತಸುತನ ಕೋಣೆಲಕ್ಷ್ಮೀ ನಾಥ ಬಲ್ಲ ನಮಗೆ ಅವರ ಮಾತಿನ್ನೇತಕೋ 3
--------------
ಕವಿ ಪರಮದೇವದಾಸರು
ಎಷ್ಟು ಸೊಗಸು ಎಷ್ಟು ಸೊಗಸಕೃಷ್ಣರಾಯರು ಕುಳಿತ ಸಭೆಯುಅಷ್ಟದಿಕ್ಕು ಬೆಳಗಿಉತ್ಕøಷ್ಟವಾಗಿ ತೋರುವುದಮ್ಮ ಪ.ಚದುರೆ ರುಕ್ಮಿಣಿ ಭಾಮೆಹದಿನಾರು ಸಾವಿರದನೂರು ಸುದತೆಯರೊಪ್ಪುತಿಹರುಅದ್ಭುತವಾಗಿ ಸಖಿಯೆ 1ಜತ್ತಾದ ದೀವಿಗೆ ಎಷ್ಟುರತ್ನದ ಪ್ರಕಾಶ ಎಷ್ಟುಹಸ್ತಿಗಮನೆಯರÀ ಕಾಂತಿಚಿತ್ತಹರಣಮಾಡುವುದಮ್ಮ 2ಭ್ರಾಂತಿಗೈದು ಮುಯ್ಯ ಮರೆದುನಿಂತು ಕುಳಿತು ನೋಡೋರೆಷ್ಟಕಂತುನೈಯನ ಸಭೆಯಇಂಥ ಅಂದವ ಎಲ್ಲೆ ಕಾಣೆ 3ನಟ ನರ್ತಕರು ಎಷ್ಟುಚಟುಲಚಮತ್ಕಾರಿ ಎಷ್ಟುವಟ ಪತ್ರ ಶಾಯಿ ಕುಳಿತಸಭೆಗೆ ಸಾಟಿ ಇಲ್ಲವಮ್ಮ 4ವೀರ ಪಾಂಡವರ ಪುಣ್ಯಯಾರು ವರ್ಣಿಸಲೊಶವಶ್ರೀರಾಮೇಶ ಒಪ್ಪುತಿಹನುಮೂರುಲೋಕ ಮಿಗಿಲಾಯಿತಮ್ಮ 5
--------------
ಗಲಗಲಿಅವ್ವನವರು
ಸುಮ್ಮನಿರು ಬೇಡಿಕೊಂಬೆ ಕಾಡದಿರು ಕೃಷ್ಣ |ಉಮಾಪತಿಯೆಂಬ ಗುಮ್ಮ ಬಂದಿದೆಕೊ ಪಐದು ಮುಖ ಐದು ಈರೈದು ಕಣ್ಣುಗಳಿಂದ |ಐದು ಪಣೆಯೊಳಗಗ್ನಿ ಕಿಡಿಯುದುರುತ ||ಐದೆರಡು ತೋಳು ಭುಜಗಳ ಒಲೆದಾಡಿಸುತ |ಐದು ಬಾಣಗೆ ಮುನಿದ ಗುಮ್ಮ ಬಂದಿದೆಕೊ 1ಬಾಲಚಂದ್ರನ ಪೊತ್ತುಕೊಂಡು ತ್ರಿಶೂಲದಿ |ಮೇಲೆ ಒರಲುವ ಭೂತಗಣ ಸಹಿತದಿ ||ಕಾಲಭೈರವನ ಕಾವಲಿಗಿರಿಸಿ ಮರುಳ್ಗಳ |ಸಾಲುಸಹಿತನಾಗಿ ಬಾಗಿಲಿಗೆ ಬಂದಿದೆಕೊ 2ಲಂಡದಾನವರ ಶಿರಗಳ ತರೆದು ಬಿರುದಿನ |ರುಂಡಮಾಲೆಯ ಧರಿಸಿ ಆರ್ಭಟಿಸುತ ||ಅಂಡಲೆದು ಅಷ್ಟದಿಕ್ಕುಗಳೆಲ್ಲ ಬೆದರಿಸುತ |ಪುಂಡರೀಕಾಕ್ಷನ ತೋರು ತೋರೆನುತ 3ಕರಿಚರ್ಮವ ಪೊದ್ದು ಕರದಿ ಒಡನೆ ಪಿಡಿದು |ಕರಿಜಡೆಗಳನೆಲ್ಲ ಕೆದರಿಕೊಳುತ ||ಹರಿವ ನೀರನು ನೆತ್ತಿಯೊಳು ಹೊತ್ತು ಹಾವುಗಳಾ-|ಭರಣಸಹಿತಾಗಿ ಬಾಗಿಲಿಗೆ ಬಂದಿದೆಕೊ4ಮುದಿಯೆತ್ತನೇರಿ ಮೈಯೆಲ್ಲ ಬೂದಿಯ ಪೂಸಿ |ಮದನಾರಿಯೆಂಬಂಥ ಬಲಭೂತವು ||ಹೃದಯದಲಿ ನಿನ್ನ ನೋಳ್ಪೆನೆಂಬ ಧ್ಯಾನದಲಿ |ಒದಗಿ ಬಂದಿಹನಿದೊ ಪುರಂದರವಿಠಲ 5
--------------
ಪುರಂದರದಾಸರು