ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಶ್ರೀ ಹರಿಯ ಸ್ತುತಿ ಕೃತಿ ಆಗಿ ಹೋಗುವುದು ಜಗದೀಶನಾಕೃತಿಯು ಅಗಾಧವಿಹುದೈಯ್ಯ ಪ ಮಂದರೋದ್ಧರನಾಜ್ಞೆಯಿಂದ ಬ್ರಹ್ಮನು ತಾನು ಇಂದಿಗೆ ಸೃಷ್ಟಿ ಮಾಡುವುದಿಲ್ಲವೇನು ಇಂದೀವರಾಕ್ಷ ಮುಕುಂದನ ದಯದೀ ಪಾಂಡುನಂದನನು ಅಶ್ವಮೇಧವ ಮಾಡಲಿಲ್ಲೇ 1 ಹರಿಯ ಕೃಪೆಯಿಂದಲಿ ವರದಂಜನೇಯ ಸುತನು ಗುರು ರಾಮನಾ ಸತಿಯ ಅರಸುವುದಕ್ಕಾಗಿ ಪರಮ ದುರ್ಲಭವಾದ ಶರಧಿಯನು ಹರುಷದಲಿ ಸಿರಿನಾಮ ಸ್ಮರಿಸಿ ಹಾರಲಿಲ್ಲೇನೋ2 ಧನಭೂಮಿ ಕನ್ಯಾಗ್ರಹದಾನ ಕೊಡಲದಕೆ ಹರಿ ಅನುಕೂಲವಾದಷ್ಟೇ ಫಲಕೊಡುವನು ಮನವನೊಪ್ಪಿಸಿ ಗತಿ ಎಂದು ನೆನೆದವರಿಗೆ ಘನ ಮುಕ್ತಿಯನು ಕೊಡುವ ಹನುಮೇಶವಿಠಲ 3
--------------
ಹನುಮೇಶವಿಠಲ
ಮಂಗಳಂ ಶ್ರೀ ಪಾರ್ಥಸಾರಥಿಗೆ ಮಂಗಳಂ ಸಂಕರ್ಷಣನಿಗೆ ಅನಿರುದ್ಧ ಸಾತ್ಯಕೀಸಹ ಬಂದು ನಿಂದವಗೆ ಪ ವಸುಧೆ ಭಾರವನಿಳುಹಲೆಂದು ದೇವಕೀ ವಸುದೇವರುದರದಿ ಶಿಶುವಾಗಿ ಅಸುರ ಪೂತನಿಯಸುವ ನೀಗಿದ ಕುಸುಮನಾಭಗೆ 1 ವಾತಾಸುರನಕೊಂದು ಬಾಯೊಳುಮಾತೆಗೆ ಬ್ರಹ್ಮಾಂಡತೋರ್ದಗೆ 2 ಒತ್ತಿ ಕಾಳಿಯ ಶಿರವನಾಗ ಸುತ್ತಿದಾ ಕಿಚ್ಚನ್ನು ನುಂಗಿ ಎತ್ತಿ ಗೋವರ್ಧನಗಿರಿಯ ಹತ್ತಿ ಗೋಮಂತವನು ಹಾರ್ದಗೆ 3 ಕೇಶಿಯನು ಸಂಹರಿಸಿ ದುಷ್ಟದ್ವೇಷಿಯಾದ ವೃಷಭನನು ಕೊಂದು ದಾಸಿ ತಂದ ಗಂಧವನು ಪೂಸಿ ಮೆರೆದ ಕ್ಲೇಶನಾಶಗೆ 4 ಬಿಲ್ಲು ಮುರಿದು ಬೀದಯಲ್ಲಿ ಎಲ್ಲರಿಗೆ ತಕ್ಕ ರೂಪ ತೋರಿ ಮಲ್ಲರನು ಮರ್ಧಿಸುತ ಮಾವನ ಸೊಲ್ಲನಡಗಿಸಿದ ಪುಲ್ಲನಾಭಗೆ 5 ರುಕ್ಮಿಣೀ ಸತ್ಯಭಾಮೆ ಕಾಳಂದಿ ಜಾಂಬವತಿಯು ಮೊದಲಾದ ಲಕ್ಷ್ಮಣೆ ಸತ್ಯಭದ್ರೆ ಮಿತ್ರವಿಂದೆಯು ತಂದ ಲಕ್ಷ್ಮೀರಮಣಗೆ 6 ಕೊಂದು ನರಕನ ಹದಿನಾರುಸಾವಿರ ಸ್ತ್ರೀಯರನು ಬೇಗ ತಂದು ದ್ವಾರಕಿಯಲ್ಲಿ ಸತಿಸಹ ಆನಂದದಿಂದಲಿ ನಿಂದಕೃಷ್ಣಗೆ 7 ಹೇಮದಾಭರಣವಿಟ್ಟು ರುಕ್ಮಿಣಿ ನೇಮದಿಂದಲೆ ಬೀಸುತಿರಲು ಪ್ರೇಮಕಲಹದಿ ಬೀಳಲಾಕ್ಷಣ ವಿರಾಮವಿಲ್ಲದೆ ಎತ್ತಿದವಗೆ8 ಎತ್ತಿ ಅಂಕದೊಳಿಟ್ಟು ಪ್ರೇಮದಿ ಅರ್ಥಿಯಿಂದಲೆ ಕುರುಳನೇವರಿಸಿ ತತ್ವವಾಕ್ಯವನ್ನು ಹೇಳಿದ ಮುಕ್ತಿದಾಯಕ ಮುದ್ದು ಕೃಷ್ಣಗೆ 9 ಜಾಣತನದಲಿ ಕಾಶಿಯನುಸುಟ್ಟು ಪೌಂಡ್ರಕನಪ್ರಣಾಪಹರಿಸಿದವಗೆ 10 ಮಿಥುಳವಾಸಿಗೆ ಮುಕ್ತಿಯನಿತ್ತು ಸುತನ ತಂದು ವಿಪ್ರನಿಗಿತ್ತು ಹತವಮಾಡಿ ವೃಕಾಸುರನ ಶ್ರುತಿಗಗೋಚರನಾದ ಸ್ವಾಮಿಗೆ 11 ಅರಗಿನಮನೆಯಿಂದ ರಕ್ಷಿಸಿ ದ್ರೌಪದಿ ಸುಭದ್ರೆಯ ಸಾಧಿಸಿತ್ತಗೆ 12 ನೆತ್ತವಾಡಿ ಕೌರವರೊಡನೆ ಅರ್ಥವನು ಸೋಲಲು ಪಾಂಡವರು ಭಕ್ತವತ್ಸಲನೆನ್ನೆ ದ್ರೌಪದಿಗೆ ವಸ್ತ್ರವಿತ್ತು ಕಾಯ್ದ ಕೃಷ್ಣಗೆ 13 ವನವಾಸದಲ್ಲಿ ಪಾಂಡವರು ಉಲ್ಲಾಸದಿಂದಲೆ ಇರುತಿರಲು ಪಾಶುಪತ ವನು ಪಾರ್ಥನಿಗೆ ಈಶನಲಿ ಕೊಡಿಸಿದ ಸರ್ವೇಶಗೆ 14 ವೇಷವನ್ನು ಮರೆಸಿಕೊಂಡು ವಿರಾಟನಗರದಿ ವಾಸ ಮಾಡಲು ಮೋಸದಿಂದಲೇ ಕೀಚಕಾದಿಗಳ ನಾಶಮಾಡಿಸಿದ ವಾಸುದೇವಗೆ 15 ಆನಂದರೂಪವ ತೋರಿದವಗೆ 16 ತೋರಿದವಗೆ 17 ಜಾಹ್ನವೀಸುತನ ಯುದ್ಧವನ್ನು ತಾಳಲಾರದೆ ಜನರ್ಧನಗೆ ಪೇಳೆ ಜಾಣತನದಲಿ ಶಿಖಂಡಿಯನುತೋರಿ ಬಾಣಮಂಚದಿ ಮಲಗಿಸಿದವಗೆ 18 ಸುಭದ್ರೆ ಪುತ್ರನ ಯುದ್ಧದಲ್ಲಿ ಪದ್ಮವ್ಯೂಹವ ಪೋಗಿಸಲಾಗ ಮುದ್ದುಬಾಲಕನ ಕೊಲಿಸಿದವಗೆ 19 ಸಿಂಧುರಾಜನ ಕೊಲ್ಲುವೆನೆಂದು ನರನು ಪ್ರತಿಜ್ಞೆಮಾಡಲು ತಂದಚಕ್ರವ ರವಿಗೆತೋರಿಸಿ ಸೈಂಧವನ ಕೊಲ್ಲಿಸಿದಸ್ವಾಮಿಗೆ 20 ದೃಪತಿಯತೋರಿದವಗೆ 21 ಕರ್ಣನು ಘಟ್ಟಿಯಾಗಿ ರಥವನೊತ್ತಿ ದಿಟ್ಟತನದಲಿ ಶಿರವ ಕಾಯ್ದಗೆ 22 ಮದ್ರರಾಜನ ಕೊಲ್ಲುವೆನೆಂದು ಸಮುದ್ರಶಯನನ ಸಹಾಯದಿಂದ ಭದ್ರಗಜವನು ಏರೆ ಧರ್ಮಜ ಕಾಲರುದ್ರನಂದದಿ ಕೊಲಿಸಿದವಗೆ 23 ಭೀಮ ದುರ್ಯೋಧನರು ಯುದ್ಧದಿ ಹೇಮದ ಗದೆಯನ್ನು ಪಿಡಿದು ಪ್ರೇಮದಿಂದಲೆ ಕಾದುತಿರಲು ನಿರ್ನಾಮವನು ಮಾಡಿಸಿದ ಸ್ವಾಮಿಗೆ 24 ಗೃಧ್ರ ಉಲೂಕದ ವೃತ್ತಿಯ ನೋಡಿ ಭದ್ರೆದ್ರೌಪದಿ ಪುತ್ರನನ್ನು ನಿದ್ರೆಕಾಲದಿ ಕೊರಳಕೊಯ್ಯಲು ಶಿರದಲಿದ್ದ ಮಣಿಯ ತೆಗೆಸಿದವಗೆ 25 ದ್ರೋಣಪುತ್ರನ ಬಾಣದಿಂದಲೆ ತ್ರಾಣಗೆಟ್ಟ ಶಿಶುವ ನೋಡಿ ಜಾಣತನದಲಿ ಚಕ್ರವಪಿಡಿದು ಪ್ರಾಣವನು ರಕ್ಷಿಸಿದ ಸ್ವಾಮಿಗೆ 26 ಏಳುಹನ್ನೊಂದು ಸೇನೆಗಳನೆಲ್ಲ ಹಾಳುಮಾಡಿ ಹದಿನೆಂಟುದಿವಸದಿ ಖೂಳಕೌರವರನೆಲ್ಲ ಕೊಂದು ಧರ್ಮನಲಿ ರಾಜ್ಯವಾಳಿಸಿದಗೆ 27 ಸೌಪ್ತಿಕದಲಿ ಪುತ್ರನ ಕೊಲ್ಲಿಸಿ ಸ್ತ್ರೀಪರ್ವದಿ ಭೂಮಿ ಭಾರವಡಗಿಸಿ ಶಾಂತಿಪರ್ವದಿ ಧರ್ಮರಾಯಗೆ ಪಟ್ಟಾಭಿಷೇಕವ ಮಾಡಿಸಿದಗೆ 28 ಮುಸಲದಲಿ ಯಾದವರನಡುಗಿಸಿ ಅನುಶಾಸನದಿ ಧರ್ಮಪೇಳಿಸಿ ಅಶ್ವಮೇಧ ಮಹಾಪ್ರಸ್ಥ ಸ್ವರ್ಗಾರೋಹಣವ ಮಾಡಿಸಿದಗೆ 29 ಅಂದುಪಾರ್ಥಗೆ ಸಾರಥ್ಯವಮಾಡಿ ಬಂಧುಗಳ ಸ್ವರ್ಗವಾಸಮಾಡಿಸಿ ಬಂದು ಬೃಂದಾರಣ್ಯದಲ್ಲಿ ಇಂದಿರೇ ಸಹನಿಂದ ಸ್ವಾಮಿಗೆ 30 ಅನಿರುದ್ಧ ಸಾತ್ಯಕಿ ರುಕ್ಮಿಣಿ ಸಹಿತಲೆ ಬಂದು ನಿಂದವಗೆ 31 [ವರ] ಕಲಿಯುಗದೊಳಗುಳ್ಳ ದುಷ್ಟಕರ್ಮಿಗಳನೆಲ್ಲ ಸಲಹುವೆನೆಂದು ಕೈರವಿಣಿತೀರದಲಿನಿಂದ ಕರುಣಿ ವೆಂಕಟಕೃಷ್ಣನಂಘ್ರಿಗೆ ಮಂಗಳಂ 32
--------------
ಯದುಗಿರಿಯಮ್ಮ
ಸತತ ಹರಿಯ ನಾಮವನ್ನು ಯತುನದಿಂದ ನುಡಿವ ನರನು ಪ ಅತಿತ್ವರೆಯಲಿ ಸರ್ವಕಾರ್ಯ ಸಿದ್ಧಿಪೊಂದುವ ಅ.ಪ ದುರ್ಗಮಾರ್ಗ ಪಿಡಿದು ಕುರುಕ್ಷೇತ್ರ ಪಯಣವೇಕೆ ಜಿಹ್ವ ಯಗ್ರದಲ್ಲಿ ಹರಿಯನಾಮವಿರುವ ನರನಿಗೆ 1 ಮೂರು ಲೋಕಗಳಲಿ ಇರುವ ಹೇರು ಪುಣ್ಯಲಾಭ ಒಂದು ಸಾರಿ ಹರಿಯನಾಮದಿಂದ ಸಾಧ್ಯವಿರುವುದು 2 ಉಚ್ಚರಿಸಲು ಹರಿ ಎಂದೆರಡು ಅಕ್ಷರಗಳ ನರನು ಕ್ಷಣದಿ ಮೋಕ್ಷ ಪಾಥೇಯವನ್ನು ಸಿದ್ಧಗೊಳಿಸುವ 3 ಹರಿಯನಾಮ ಒಂದೇ ಎನಗೆ ಸರ್ವವಿಧದ ಜೀವನವು ಹರಿಯನಾಮ ಹೊರತು ಕಲಿಯೊಳರಿಯೆ ಗತಿಯನು 4 ಹರಿಯೇ ಗಂಗಾ ಹರಿಯೇ ಗಯಾ ಹರಿಯೇ ಕಾಶಿ ಸೇತು ಪುಷ್ಕರ ಹರಿಯ ನಾಮ ಜಿಹ್ವೆಯಲ್ಲಿ ಇರುವ ನರನಿಗೆ 5 ನೂಕಿ ಕಾಮಕ್ರೋಧಗಳನು ಏಕವಾರ ಹರಿಯೆಂದೆನಲು ನಾಕುವೇದಗಳನು ಓದಲೇಕೆ ಮನುಜನು 6 ಅಶ್ವಮೇಧ ಪುರುಷಮೇಧ ಯಜ್ಞಫಲವು ಲಬ್ಧವಿಹುದು ವಿಶ್ವಾಸದಿ ಹರಿಯನಾಮ ನುಡಿದ ನರನಿಗೆ 7 ಕೋಟಿ ಶತ ಗೋದಾನ ಕನ್ಯಾಭೂಮಿ ದಶಶತಕಗಳ ದಾನ ಸಾಟಿ ಹರಿಯನಾಮ ನುಡಿಯು ಭಕ್ತಜನರಿಗೆ 8 ಸಪ್ತ ಕೋಟಿ ಮಹಾಮಂತ್ರ ಚಿತ್ತ ವಿಭ್ರಮ ಕಾರಕಗಳು ಯುಕ್ತಿಯೊಂದೇ ಹರಿಯನಾಮದಕ್ಷರದ್ವಯ 9 ಮುನ್ನ ವರ ಪ್ರಹ್ಲಾದ ನುಡಿದ ಘನ್ನನಾಮ ಪಠನದಿಂದ ಪ್ರ ಸನ್ನ ಹರಿಯು ತನ್ನ ಪದವನೀವ ಮುದದಲಿ 10
--------------
ವಿದ್ಯಾಪ್ರಸನ್ನತೀರ್ಥರು