ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಮಹಿಷಿ ಅಶ್ವತ್ಥನಾರಾಯಣ ದೇವರು) ತಪ್ಪಾ ಕ್ಷಮಿಸು ಕಲ್ಪತರುರೂಪ ತವಪಾದ- ಕೊಪ್ಪಿಸಿದೆನು ಯೆನ್ನನು ಅಪ್ಪಳಿಸಖಿಳಾಂತರಾಯವತಿದಯದಿ ತಿ- ಮ್ಮಪ್ಪರಾಜನೆ ನೀನೆಂದರಿತು ಬಂದಿರುವೆನು ಪ. ಮಂಗಲ ಮಹಿಮೆ ಮಾತಂಗ ವರದ ಶುಭ ತುಂಗಾತೀರದಿ ನಿಂದು ತಾರಕನೆಂದು ಭವ ಭಯ ಭಂಗದ ಮಹಿಮನೆಂದರಿತು ಬಂದಿಹೆನಿಂದು ಅಂಗದಾದಿ ದೇವೇಂದ್ರ ಸಂಸ್ತುತ ತುಂಗಬಲ ಹನುಮತ್ಪ್ರತಿಷ್ಠಿತ ಅಂಗುಟಾಗ್ರದೊಳಖಿಳಪಾವನ ಗಂಗೆಯನು ಪಡದಾದಿ ಪುರುಷ 1 ಪಾವಕ ದಿಋಖ(?) ದೇವ ಸತ್ಸುಖಗಣ ಭಾವನ ಭಜಕೇಷ್ಟಸಿದ್ಧಿದನೇ ಮಾವನ ಮಗನೊಳಗುಸುರಿದ ನುಡಿಯನು ಕಾವೆನಿಂದಿರುವಿಲ್ಲಿ ಕರುಣಾವಾರಿಧಿ ಕೃಷ್ಣಾ ಈ ವಸುಂಧರೆಯಲ್ಲಿ ಘಟಿಸುವ ನೋವುಗಳ ಸಂಬಂಧಗೊಳಿಸದೆ ಶ್ರೀವನಿತೆಯೊಡಗೂಡಿ ನಿನ್ನ ಕ- ರಾವಲಂಬನವಿತ್ತು ಕರುಣಿಸು 2 ತ್ರಿವಿಧ ತಾಪಗಳು ಭರಿಸಲಾರದೆ ವಂದು ನೆವನದಿಂದಲಿ ಬಂದು ನುಡಿದೆನಿಂದು ಪವಮಾನವಂದಿತ ಪತಿತ ಪಾವನನೆ ನೀ- ವಹಿಸಿ ರಕ್ಷಿಪುದೆಂದು ಒರೆವೆನು ಗುಣಸಿಂಧು ವಿರಿಂಚಿ ರಮಾ ವರಪ್ರದ ಭಾರ ನಿನ್ನಲಿರಿಸಿದವನನು ತವಕದಲಿ ಕಾಪಾಡು ವೆಂಕಟ ಮಹಿಷಿ ಕ್ಷೇತ್ರ ಪಾಲನ3
--------------
ತುಪಾಕಿ ವೆಂಕಟರಮಣಾಚಾರ್ಯ
126-1ದ್ವಿತೀಯಕೀರ್ತನೆಸತ್ಯ ಬೋಧಾರ್ಯರ ವೃತತಿಜಾಂಘ್ರಿಗಳಲ್ಲಿಸತತ ಶರಣಾದೆ ನಾಹಿತದಿ ಪಾಲಿಪರುಪ್ರತತ ಭೂಮಾದಿ ಗುಣಸಿಂಧು ಪುರುಷೋತ್ತಮನವಿತತ ಮನದಲಿ ಧ್ಯಾನಿಸಿ ಒಲಿಸಿಕೊಂಡ ಪವೇಲೂರು ಚಿತ್ತೂರು ಚಂದ್ರಗಿರಿ ಮಾರ್ಗದಲಿಅಲ್ಲಲ್ಲಿ ಪ್ರಮುಖ ಭೂಪಾಲರ ಕೈಯಿಂದಬಲು ಭಕ್ತಿಯುತ ಪೂಜೆ ಮರ್ಯಾದೆಕೊಂಡುವ್ಯಾಳಗಿರಿ ವೇಂಕಟನ ತಿರುಪತಿ ಸೇರಿದರು 1ತಿರುಪತಿಯಲಿ ಹನುಮದಾದಿ ಲಕ್ಷ್ಮಣಸೇವ್ಯಶ್ರೀರಾಮಸೀತಾ ಸಮೇತನಿಗೆ ನಮಿಪೆಉರುಗೇಶಶಯ್ಯ ಶ್ರೀ ಗೋವಿಂದರಾಜನಿಗುಶಿರಬಾಗುವೆ ಶ್ರೀ ಲಕ್ಷ್ಮೀಗೂ ಸತತ 2ಒಂದು ಗಾವುದ ದೂರದೊಳಗೇವೆ ಇರುತಿಹುದುಪದ್ಮ ಸರೋವರವು ತತ್ತೀರದಲ್ಲಿವೇದವಿಗ್ರಹ ಘೃಣಿ ಆದಿತ್ಯ ಸೂರ್ಯನುನಿಂತಿಹನು ಸರ್ವೇಷ್ಟ ಶ್ರೀದವೃಷ್ಟಿದನು 3ಸಮೀಪದಲಿ ದೊಡ್ಡ ಆಲಯವಿಹುದಲ್ಲಿಬೊಮ್ಮದಿ ಸುಮನಸಾರ್ಚಿತ ಕೃಷ್ಣ ಅಣ್ಣರಾಮನ ಸಹಕುಳಿತು ವಂದಿಸುವ ಸಜ್ಜನರಕ್ಷೇಮಲಾಭವ ಸದಾ ಪಾಲಿಸುತಿಹನು 4ದಕ್ಷಪಾಶ್ರ್ವದ ಗುಡಿಯಲ್ಲಿ ಸುಂದರರಾಜಲಕ್ಷ್ಮೀಸಮೇತನು ಕಾರುಣ್ಯಶರಧಿಪಕ್ಷ್ಮಗಳು ಅಕ್ಷಿಗಳ ರಕ್ಷಿಸುವ ತೆರದಲ್ಲಿವಿಷ್ಣು ಭಕ್ತರ ಸದಾಕಾಯುತಿಹನು 5ಕೃಷ್ಣನಾಲಯ ವಾಮಪಾಶ್ರ್ವ ಮಂದಿರದಲ್ಲಿವನಜಆಸನದಲ್ಲಿ ಶ್ರೀ ಪದ್ಮಾವತಿಯುದೀನ ಕರುಣಾಕರಿಯುವರಅಭಯನೀಡುತ್ತಶ್ರೀನಿವಾಸನ ಬದಿಯಲ್ಲಿ ಕುಳಿತಿಹಳು 6ದ್ವಾದಶಾಕ್ಷರ ಕಮಲವಾಸಿನಿ ಮಂತ್ರಪ್ರತಿಪಾದ್ಯಳು ಪದ್ಮಾವತಿ ಕಮಲವಾಸಿನಿಯುಪದ್ಮಲೋಚನೆ ಸರ್ವಾಲಂಕಾರ ಸಂಪನ್ನೆಸದಾಯೆಮ್ಮ ಪಾಲಿಸುವಳಿಗೆ ನಮೋ ಎಂಬೆ 7ವೇಂಕಟಾಚಲದ ಅಡಿವಾರದಲಿ ಇರುತಿದೆಅಕಳಂಕ ಸುಪವಿತ್ರ ಕಪಿಲತೀರ್ಥಲಿಂಗ ಆಕಾರದಲಿ ಕಪಿಲೇಶ್ವರ ಇಹನುಬಾಗುವೆ ಶಿರ ಶಿವಗು ಉಮಾಮಹೇಶ್ವರಿಗೂ 8ಕಪಿಲೇಶ್ವರಾನುಗ್ರಹದಿಂದ ಗಿರಿ ಏರಿಗೋಪುರಾಲಯದಲ್ಲಿ ನೃಸಿಂಹನ ನಮಿಸಿಶ್ರೀಪವರಾಹವೇಂಕಟನ ಕಾಣಿಸುವಂತಆ ಭೇಟಿ ಹನುಮನಿಗೆ ಶರಣು ಶರಣೆಂಬೆ 9ಸ್ವಾಮಿವೇಂಕಟನ ಆಲಯದ ಗೋಪುರಕಂಡುಸ್ಮರಿಸಿದ ಮಾತ್ರದಲೆ ಪಾಪ ನೀಗಿಸುವಸ್ವಾಮಿ ತೀರ್ಥಕು ಭೂರಾಹಕರುಣಾಬ್ಧಿಗೂನಮಿಸುವೆ ಅಶ್ವತ್ಥನಾರಾಯಣಗು 10ಕಪಿಲೇಶ್ವರಾನುಗ್ರಹದಿ ಹನುಮಂತನಅ ಪವನಜನ ದಯದಿ ಭೂಧರಾ ವರಾಹನಪುಷ್ಪಭವ ಪೂಜಿತ ಶ್ರೀ ಶ್ರೀನಿವಾಸನಶ್ರೀ ಪದ್ಮ ಪದಯುಗದಿ ಶರಣು ಶರಣಾದೆ 11ಶ್ರೀವಕ್ಷ ವೇಂಕಟೇಶನ್ನ ಧ್ಯಾನಿಸಿ ನಮಿಪೆದೇವ ದೇವಶಿಖಾಮಣಿಕೃಪಾನಿಧಿ ಸುಹೃದನವರತ್ನ ಖಚಿತ ಆಭರಣ ಕಿರೀಟಿಯುಶಿವದವರಅಭಯಕರಕಟಿ ಚಕ್ರಿಶಂಖಿ12ಭಕ್ತವತ್ಸಲ ದಯಾನಿಧಿ ಶ್ರೀನಿವಾಸನ್ನಸತ್ಯಬೋಧತೀರ್ಥಾರ್ಯರು ವಂದಿಸಿ ಸುತ್ತಿಸಿಆ ದೇವಸ್ಥಾನದಲಿ ಮಾರ್ಯಾದೆಗಳ್ ಕೊಂಡುಪದುಮ ಸರೋವರಾಲಯಗಳ ಐದಿದರು 13ವೇಂಕಟಗಿರಿಯಿಂದ ಕರ್ನೂಲು ಗದ್ವಾಲಪೋಗಿ ಸತ್ತತ್ವ ಸಿದ್ಧಾಂತವ ಬೋಧಿಸಿಭಕುತರಿಗೆ ದರ್ಶನ ಉಪದೇಶ ಕೊಟ್ಟರುಮಾರ್ಗದಲಿ ಹನುಮಂತ ಕ್ಷೇತ್ರ ಇಹುದು 14ಕ್ಷೇತ್ರಗಂಡಿಗ್ರಾಮ ತತ್ರಸ್ಥ ಹನುಮನಿಗೆಶರಣೆಂಬೆ ಸ್ಮರಿಸಲು ಬುದ್ಧಿರ್ಬಲ ಯಶಸ್ಸುಧೈರ್ಯವು ನಿರ್ಭಯತ್ವವು ಆರೋಗ್ಯವುದೊರೆಯುವುದು ನಿಶ್ಚಯ ಆಜಾಡ್ಯ ವಾಕ್ಪಟುತ್ವ 15ಹೇಮಗರ್ಭನತಾತಶ್ರಿಪತಿ ಜಗನ್ನಾಥಅಮಲಗುಣಗಣಸಿಂಧು ಪ್ರಸನ್ನ ಶ್ರೀನಿವಾಸರಾಮ ಹಯಮುಖವ್ಯಾಸನೃಹರಿಗೆ ಪ್ರಿಯತಮರೆನಿಮ್ಮಲ್ಲಿ ಶರಣಾದೆ ಸತ್ಯಬೋಧಾರ್ಯ 16 ಪ|| ಇತಿ ದ್ವಿತಿಯ ಕೀರ್ತನೆ ||
--------------
ಪ್ರಸನ್ನ ಶ್ರೀನಿವಾಸದಾಸರು